ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಕಾಮಿಡಿಯನ್ ಉತ್ತರಕ್ಕೆ ಪ್ರೇಕ್ಷಕ ದಂಗು

Published : Feb 24, 2026, 04:54 PM IST
Nasif Akhtar

ಸಾರಾಂಶ

ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದ ವೇಳೆ ಪ್ರೇಕ್ಷಕನೊಬ್ಬ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಸೀಫ್ ಅಕ್ತರ್, ಮರು ಪ್ರಶ್ನೆಯೊಂದನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಪ್ರೇಕ್ಷಕ ದಂಗಾಗಿದ್ದಾನೆ. 

ನವದೆಹಲಿ (ಫೆ.25) ಬೆಂಗಾಲಿ ಸ್ಟಾಂಡ್ ಅಪ್ ಕಾಮಿಡಿಯನ್ ನಾಸಿಫ್ ಅಕ್ತರ್ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ಪ್ರೇಕ್ಷಕನೊಬ್ಬ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾನೆ. ಬೋಲೋ ಜೈ ಶ್ರೀರಾಮ್ ಎಂದಿದ್ದಾನೆ. ಇದಕ್ಕೆ ನಾಸಿಫ್ ಅಕ್ತರ್ ನೀಡಿದ ಉತ್ತರ ಇದೀಗ ವೈರಲ್ ಆಗಿದೆ. ಪ್ರೇಕ್ಷಕನ ಸೂಚನೆಯಂತೆ ಜೈಶ್ರೀರಾಮ್ ಹೇಳಿದ ನಾಸಿಫ್ ಅಕ್ತರ್, ಮರು ಪ್ರಶ್ನೆಯೊಂದನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಪ್ರೇಕ್ಷಕ ದಂಗಾಗಿದ್ದು ಮಾತ್ರವಲ್ಲ ಫುಲ್ ಸೈಲೆಂಟ್ ಆಗಿದ್ದಾನೆ.

ಕಾರ್ಯಕ್ರಮದ ನಡುವೆ ಪ್ರೇಕ್ಷನಿಂದ ಘೋಷಣೆ

ನಾಸಿಫ್ ಅಕ್ತರ್ ಕಾಮಿಡಿ ಶೋಗಳ ಮೂಲಕ ಜನಪ್ರಿಯರಾಗಿದ್ದಾರೆ. ಹೀಗೆ ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದ ನಡುವೆ ಪ್ರಕ್ಷಕನೊಬ್ಬ ಬೋಲೋ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ಪ್ರೇಕ್ಷಕನತ್ತ ತಿರುಗಿದ ಕಾಮಿಡಿಯನ್ ನಾಸಿಫ್ ಅಕ್ತರ್ ನಗು ಮುಖದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೇಕ್ಷಕ ಘೋಷಣೆಯಂತೆ ನಾಸಿಫ್ ಅಕ್ತರ್, ಜೈ ಶ್ರೀರಾಮ್, ವಂದೇ ಮಾತರಂ, ಭಾರತ ಮಾತಾ ಕಿ ಜೈ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗ ನೀನು ಹೇಳು..

ಪ್ರೇಕ್ಷಕ ಹೇಳಿದಂತೆ ಬೋಲೋ ಜೈಶ್ರೀರಾಮ್ ಘೋಷಣೆಗೆ ನಾಸಿಫ್ ಅಕ್ತರ್ ಜೈ ಶ್ರೀರಾಮ್ ಹೇಳಿದ್ದು ಮಾತ್ರವಲ್ಲ, ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂದಿದ್ದಾರೆ. ಇದೇ ವೇಳೆ ಈಗ ನೀನು ಹೇಳು ಅಲ್ಲಾಹು ಅಕ್ಬರ್ ಎಂದು ನಾಸಿಫ್ ಅಕ್ತರ್ ಘೋಷಣೆ ಕೂಗಿದ ಪ್ರೇಕ್ಷನಿಗೆ ಮರು ಪ್ರಶ್ನೆ ಹಾಕಿದ್ದಾರೆ. ಈ ಪ್ರಶ್ನೆಗೆ ಪ್ರೇಕ್ಷಕ ದಂಗಾಗಿದ್ದು ಮಾತ್ರವಲ್ಲ ಸೈಲೆಂಟ್ ಆಗಿದ್ದಾನೆ.

ಇದೀಗ ನಾಸಿಫ್ ಅಕ್ತರ್ ಈ ವಿಡಿಯೋ ಭಾರಿ ವೈರಲ್ ಆಗಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವರು ನಾಸಿಫ್ ಅಕ್ತರ್ ತಾಳ್ಮೆಯಿಂದ ನೀಡಿದ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವ ಅಗತ್ಯವಿರಲಿಲ್ಲ. ಕಾಮಿಡಿಯನ್ ಅಥವಾ ಯಾರೇ ಆದರೂ ಆತ ದೇಶಕ್ಕೆ, ಭಾರತ ಮಾತೆಗೆ ತಲೆಬಾಗಿದರೆ ಸಾಕು. ಈ ರೀತಿಯ ಪ್ರಯತ್ನಗಳು ಉತ್ತಮವಲ್ಲ ಎಂದು ಹಲವರು ಹೇಳಿದ್ದಾರೆ. ಹೋರಾಟ ದೇಶದ ವಿರುದ್ಧ, ವಿನಾಕಾರಣ ಧರ್ಮಕ್ಕೆ ಅಪಮಾನ ಮಾಡುವುದು, ದೇವರನ್ನು, ಸಂಸ್ಕೃತಿ ವಿರುದ್ಧ ಮಾತನಾಡುವವರು, ಪೂಜೆ, ಪ್ರಾರ್ಥನಾ ಪದ್ಧತಿ ಅವಮಾನಿಸುವವರ ವಿರುದ್ಧ ಇರಬೇಕು ಎಂದು ಹಲವರು ತಿಳಿ ಹೇಳಿದ್ದಾರೆ.

ನಾಸಿಫ್ ಅಕ್ತರ್ ಬೆಂಗಾಲಿ ಕಾಮಿಡಿಯನ್. ಸ್ಟಾಂಡ್ ಅಪ್ ಕಾಮಿಡಿಗಳ ಮೂಲಕ ಭಾರಿ ವೈರಲ್ ಆಗಿದ್ದಾರೆ. ಮಾತು, ಸಂದರ್ಬಗಳನ್ನೇ ಹಾಸ್ಯವಾಗಿ ಪ್ರಸ್ತುತಪಡಿಸುವ ನಾಸಿಫ್ ಅಕ್ತರ್ ಇದೀಗ ಈ ವಿಡಿಯೋ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರೋ "ಬೈಕ್ ಶೇವಿಂಗ್" ವಿಡಿಯೋ; ಪೊಲೀಸ್ರು ನೋಡಿದ್ರೆ ಈ ಮಹಾಶಯನ ಗತಿಯೇನು?
Terror Threat: ಭಾರತಕ್ಕೆ ಮತ್ತೆ 26/11 ಮಾದರಿ ದಾಳಿ, ಸಮುದ್ರದಲ್ಲಿ ಕಟ್ಟೆಚ್ಚರ: ಲಷ್ಕರ್ ಉಗ್ರನ ವಿಡಿಯೋ ಬೆದರಿಕೆ!