ಭ್ರಷ್ಟಾಚಾರದಿಂದ ಪಾರಾಗಲು ಕೇರಳ ಸಿಎಂ ಪುತ್ರಿಯ ಪ್ಲಾನ್, ನಿಷ್ಕ್ರಿಯ ಸಂಸ್ಥೆ ಘೋಷಿಸಲು ಅರ್ಜಿ!

By Suvarna News  |  First Published Aug 14, 2023, 4:56 PM IST

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್ ಮೇಲಿನ ಭ್ರಷ್ಟಾಚಾರ ಆರೋಪ ಗಂಭೀರವಾಗುತ್ತಿದೆ. ಆದಾಯ ತೆರಿಗೆ ಇತ್ಯರ್ಥ ಮಂಡಳಿ ವರದಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆರೋಪಗಳಿಂದ ಪಾರಾಗಲು ವೀಣಾ ವಿಜಯನ್ ಹೊಸ ದಾಳ ಉರುಳಿಸಿದ್ದಾರೆ.


ತಿರುವನಂತಪುರಂ(ಆ.14)  ಕೇರಳ ಸಿಎಂ ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ಈಗಾಗಲೇ ಹಲವು ಭ್ರಷ್ಟಾಚಾರ, ಗೋಲ್ಡ್ ಸ್ಮಗ್ಲಿಂಗ್ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಇದರ ನಡುವೆ ಪುತ್ರಿ ವೀಣಾ ವಿಜಯನ್ ಮಾಲೀಕತ್ವದ ಕಂಪನಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ವೀಣಾ ವಿಜಯನ್ ಕಂಪನಿ ಯಾವುದೇ ಸೇವೆ ನೀಡಿದ್ದರೂ ಮಾಸಿಕವಾಗಿ 1.72 ಕೋಟಿ ರೂಪಾಯಿ ಹಣ ಸಂದಾಯವಾಗುತ್ತಿದೆ ಆದಾಯ ತೆರಿಗೆ ಇತ್ಯರ್ಥ ಮಂಡಳಿಯ ಮಧ್ಯಂತರ ವರದಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ವರದಿ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗಿದೆ. ಇದೇ ಅಸ್ತ್ರ ಬಳಿ ಗಂಭೀರ ಆರೋಪ ಮಾಡುತ್ತಿರುವ ವಿಪಕ್ಷಗಳಿಂದ ಪಾರಾಗಲು ಇದೀಗ ವೀಣಾ ವಿಜಯನ್ ತಮ್ಮ ಕಂಪನಿಯನ್ನು ನಿಷ್ಕ್ರೀಯ ಕಂಪನಿ ಎಂದು ಘೋಷಿಸಲು ಅರ್ಜಿ ಸಲ್ಲಿಸಿದ್ದಾರೆ. 

ಕೊಚ್ಚಿನ್ ಮಿನರಲ್ಸ್ ಕಂಪನಿಯಿಂದ ವೀಣಾ ವಿಜಯನ್ ಮಾಲೀಕತ್ವದ ಸಿಎಂಆರ್‌ಎಲ್ ಮಾಸಿಕವಾಗಿ 1.72 ಕೋಟಿ ರೂಪಾಯಿ ಹಣ ಪಡೆದುಕೊಳ್ಳುತ್ತಿದೆ. ವೀಣಾ ವಿಜಯನ್ ಅವರ ಕಂಪನಿ ಸಾಫ್ಟ್‌ವೇರ್ ಸರ್ವೀಸ್ ಹಾಗೂ ಮಾರ್ಕೆಟಿಂಗ್ ಸೇವೆಗಳನ್ನು ನೀಡಲು ಹಲವು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಸರ್ಕಾರಿ ಸ್ವಾಮ್ಯ ಕಂಪನಿಗಳ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ವೀಣಾ ವಿಜಯನ್ ಅವರ ಕಂಪನಿ ಯಾವುದೇ ಸೇವೆಗಳನ್ನೂ ನೀಡಿಲ್ಲ. ಇಷ್ಟಾದರೂ ಮಾಸಿಕವಾಗಿ ಕೋಟಿ ಕೋಟಿ ರೂಪಾಯಿ ಪಡೆದುಕೊಂಡಿದೆ ಎಂದು ಆದಾಯ ತೆರಿಗೆ ಇತ್ಯರ್ಥ ಮಂಡಳಿಯ ಮಧ್ಯಂತರ ವರದಿಯಲ್ಲಿ ಹೇಳಿದೆ.

Tap to resize

Latest Videos

ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕಾರ

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಕೇರಳ ವಿಜಿಲೆನ್ಸ್ ವಿಭಾಗದಲ್ಲಿ ದೂರು ದಾಖಲಾಗಿದೆ. ಆರೋಪಿ ನಂ.1 ವೀಣಾ ವಿಜಿಯನ್,  ಎರಡನೇ ಆರೋಪಿ ಸಿಎಂ ಪಿಣರಾಯಿ ವಿಯನ್ ಸೇರಿದಂತೆ 10 ಪ್ರಮುಖರ ವಿರುದ್ಧ ತನಿಖೆ ನಡೆಸಿ ಅಕ್ರಮ ನಿಲ್ಲಿಸಬೇಕು. ಹಾಗೆ ಸಾರ್ವಜನಿಕರಿಂದ ಆಗುತ್ತಿರುವ ನಷ್ಟವನ್ನು ಸರಿಪಡಿಸಬೇಕು ಎಂದು ದೂರು ದಾಖಲಾಗಿದೆ.

ಈ ವಿವಾದ ತೀವ್ರಗೊಂಡಿದೆ. ಆದಾಯ ತೆರಿಗೆ ಇಲಾಖೆ ಇತ್ಯರ್ಥ ಮಂಡಳಿ ವರದಿಯಲ್ಲೇ ಭ್ರಷ್ಟಾಚಾರ ನಡೆದಿರುವುದು ಉಲ್ಲೇಖಗೊಂಡಿದೆ. ಈ ಕುರಿತು ಕೇರಳ ವಿಜಿಲೆನ್ಸ್, ಇಡಿ ಅಧಿಕಾರಿಗಳು ಸೇರಿದಂತೆ ಇತರ ತನಿಖಾ ಎಜೆನ್ಸಿಗಳು ಮೌನವಾಗಿರವುದು ಯಾಕೆ? ಎಂದು ವಿಪಕ್ಷಗಳು ಪ್ರಶ್ನಿಸಿದೆ. ಇಷ್ಟೇ ಅಲ್ಲ ಅಧಿಕಾರ ದುರ್ಬಳಕೆ ಮಾಡಿಕೊಂಡು ವೀಣಾ ವಿಜಯನ್ ಮಾಲೀಕತ್ವದ ಹಲವು ಕಂಪನಿಗಳು ಭ್ರಷ್ಟಾಚಾರ ನಡೆಸಿದೆ ಎಂದು ವಿಪಕ್ಷಗಳು ಆರೋಪಿಸಿದೆ.

 

ರಾವಣ ಪುಷ್ಪಕ ವಿಮಾನ, ಗಣೇಶನ ಪ್ಲಾಸ್ಟಿಕ್‌ ಸರ್ಜರಿ ಎಲ್ಲಾ ಮೂಢನಂಬಿಕೆ ಎಂದಿದ್ದಕ್ಕೆ ಶಂಶೀರ್‌ ಕ್ಷಮೆ ಕೇಳಲ್ಲ: ಸಿಪಿಎಂ

ಈ ಬೆಳವಣಿಗೆ ಬೆನ್ನಲ್ಲೇ ಇದೀಗ ವೀಣಾ ವಿಜಿಯನ್ ತಮ್ಮ ಎಕ್ಸಾಲಾಜಿನ್ ಸೊಲ್ಯೂಶನ್ ಹಾಗೂ ಸಿಎಂಆರ್‌ಎಲ್ ಕಂಪನಿಯನ್ನು ನಿಷ್ಕ್ರೀಯ ಕಂಪನಿ ಎಂದು ಘೋಷಿಸಲು ಅರ್ಜಿ ಸಲ್ಲಿಸಿದ್ದಾರೆ. ಇತ್ತ ಪಿಣರಾಯಿ ವಿಜಯನ್ ಸರ್ಕಕಾರದ ಸಚಿವರು, ಪಕ್ಷದ ನಾಯಕರು ವೀಣಾ ವಿಜಯನ್ ಹಾಗೂ ಪಿಣರಾಯಿ ವಿಜಯನ್ ಪರ ಬ್ಯಾಟ್ ಬೀಸಿದ್ದಾರೆ. ಕಂಪನಿ ಕ್ರಮಬದ್ಧ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಸೇವೆ ಒದಗಿಸಿ ಹಣ ಪಡೆದುಕೊಂಡಿದ್ದಾರೆ. ಇದು ಪಿಣರಾಯಿ ವಿಜಯನ್ ಹಾಗೂ ವೀಣ ವಿಜಯನ್ ಅವರ ವಿರುದ್ಧ ವೈಯುಕ್ತಿ ದ್ವೇಷ ಕಾರುವ ಷಡ್ಯಂತ್ರವಾಗಿದೆ.ರಾಜಕೀಯವಾಗಿ ತೇಜೋವಧೆ ಮಾಡುವ ಹುನ್ನಾರ ಅಡಗಿದೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಕೇರಳದದ್ದು ಶೇ.80% ರಷ್ಟುಕಮಿಷನ್‌ ಸರ್ಕಾರ ಎಂದು ಆಡಳಿತಾರೂಢ ಎಲ್‌ಡಿಎಫ್‌ ಸರ್ಕಾರದ ವಿರುದ್ಧ  ಕಾಂಗ್ರೆಸ್‌ ಕಿಡಿಕಾರಿದೆ.  ಕೇರಳದ ವಿಪಕ್ಷ ನಾಯಕ ರಮೇಶ್‌ ಚೆನ್ನಿಥಲ, ‘ಎಲ್‌ಡಿಎಫ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಎರಡನೇ ಅವಧಿಯ ಆಡಳಿತದಿಂದ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಶಾಸಕರ ಅಹಂಕಾರ ಹೆಚ್ಚಾಗಿದೆ’ ಎಂದು ಹರಿಹಾಯ್ದಿದ್ದಾರೆ.
 

click me!