ಭಾರತ: ನಮ್ಮ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿನ ಆಚಾರ ವಿಚಾರ ಭಾಷೆ ಪ್ರಾದೇಶಿಕ ವೈವಿಧ್ಯತೆ ಮಾತ್ರವಲ್ಲ, ಇಲ್ಲಿರುವ ಜೀವ ವೈವಿಧ್ಯ, ವನ್ಯಜೀವಿಗಳು ಕೂಡ ಬಹಳ ವೈವಿಧ್ಯತೆಯನ್ನು ಹೊಂದಿವೆ. ಇತ್ತೀಚೆಗಷ್ಟೇ ಭಾರತದಲ್ಲಿ ನಮ್ಮ ದೇಶದಲ್ಲಿ 78 ಜಾತಿಯ ಹಕ್ಕಿಗಳಿವೆ ಎಂದು ವರದಿಯೊಂದು ಪ್ರಕಟವಾಗಿತ್ತು. ಇಷ್ಟೊಂದು ಹಕ್ಕಿಗಳ ವೈವಿಧ್ಯತೆ ಇರುವುದು ಭಾರತದಲ್ಲಿ ಮಾತ್ರವಂತೆ. ಅದೇ ರೀತಿ ಈಗ ನಮ್ಮ ವನ್ಯಜೀವಿ ವೈವಿಧ್ಯದ ಮತ್ತೊಂದು ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ (Indian Forest Service) ಪರ್ವೀನ್ ಕಸ್ವಾನ್ (Parveen Kaswan)ಅವರು ಈ ದೈತ್ಯಗಾತ್ರದ ಅಳಿಲಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ದೈತ್ಯ ಗಾತ್ರದ ಅಳಿಲು ಪಶ್ಚಿಮ ಬಂಗಾಳದ ಬುಕ್ಸಾದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೀವು ಗುರುತಿಸಬಲ್ಲಿರಾ ಎಂದು ಅವರು ಕೇಳಿದ್ದಾರೆ. ಸೆರೆಯಾಗಿರುವ ಫೋಟೋದಲ್ಲಿ ಈ ದೈತ್ಯ ಗಾತ್ರದ ಅಳಿಲು ಮರದ ಕಾಂಡವನ್ನೇರಿ ನಿಂತಿದೆ. ಈ ಪೋಸ್ಟ್ ಅನೇಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಇದು ಮಲಬಾರ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಮಲಯನ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ತಾವು ಕ್ಯಾಮರಾದಲ್ಲಿ ಸೆರೆ ಹಿಡಿದ ಇಂತಹದ್ದೇ ದೈತ್ಯ ಅಳಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ 78 ರೀತಿಯ ಪಕ್ಷಿಗಳು ಪತ್ತೆ: ಇಷ್ಟೊಂದು ವೈವಿಧ್ಯತೆ ಭಾರತದಲ್ಲಿ ಮಾತ್ರ
ಕೆಲವರು ಹೀಗೆ ತಮಗೆ ದೈತ್ಯ ಅಳಿಲುಗಳು ಕಾಣಿಸಿಕೊಂಡ ಸಂದರ್ಭವನ್ನು ನೆನಪು ಮಾಡಿಕೊಂಡಿದ್ದು, ಇದು ನಿಜವಾಗಿಯೂ ಸುಂದರವಾಗಿದೆ. ಕೆಲವು ವರ್ಷಗಳ ಹಿಂದೆ ನಾನು ಒಮ್ಮೆ ತಿರುಪತಿಗೆ ಭೇಟಿ ನೀಡಿದ್ದ ವೇಳೆ ಈ ರೀತಿ ದೈತ್ಯ ಅಳಿಲನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅಲ್ಲದೇ 10 ರಿಂದ 15 ವರ್ಷಗಳ ಹಿಂದೆ ಮುಂಬೈನ ವೆರ್ಸೊವಾ ಅಂಧೇರಿ ಪಶ್ಚಿಮದಲ್ಲೊಯೂ ಇದೇ ರೀತಿಯ ದೊಡ್ಡ ಗಾತ್ರದ ಅಳಿಲೊಂದು ಕಾಣ ಸಿಕ್ಕಿತ್ತು. ಇದು ಮಹಾರಾಷ್ಟ್ರ (Maharashtra), ಕರ್ನಾಟಕ (Karnataka), ಗೋವಾ (Goa) ಮತ್ತು ಕೊಂಕಣದ ಪಶ್ಚಿಮ ಘಟ್ಟಗಳ (western ghat) ಪ್ರದೇಶಕ್ಕೆ ಸೀಮಿತವಾಗಿರುವ ವಿಭಿನ್ನ ಪ್ರಭೇದದ ಅಳಿಲು ಎಂದು ನಾನು ನಂಬುತ್ತೇನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ನಾನು ಇದೇ ರೀತಿಯ ಅಳಿಲನ್ನು ಒಡಿಶಾದಲ್ಲಿ ನೋಡಿದ್ದೇನೆ. ಇವುಗಳು ತೇಗದ ಮರದಲ್ಲಿ ಅತ್ತಿಂದಿತ್ತ ಓಡಾಡಲು ಇಷ್ಟ ಪಡುತ್ತವೆ. ಇವುಗಳ ಓಡಾಟ ಅತೀ ವೇಗವಾಗಿರವುದರಿಂದ ನನ್ನ ಬಳಿ ಯಾವುದೇ ಫೋಟೋಗಳಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಮಲಬಾರ್ ದೈತ್ಯ ಅಳಿಲುಗಳಾಗಿದ್ದು, ನಾನು ಇದ್ದನ್ನು ಅಸ್ಸಾಂನ ಹೂಲ್ಲೊಂಗಪರ್ ಗಿಬ್ಬನ್ ಸ್ಯಾಂಕ್ಚುವರಿಯಲ್ಲಿ (Hoollongapar Gibbon Sanctuary) ನೋಡಿದ್ದಾಗಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಪಶ್ಚಿಮಘಟ್ಟ ಪ್ರದೇಶದಲ್ಲಿ ನಾನು ಹಿಂದೆಂದು ಕಂಡಿರದ ಇವುಗಳ ನಾನು ಮೊದಲ ಬಾರಿ ನೋಡಿದೆ. ಮರದ ಕೊಂಬೆಯಿಂದ ಕೊಂಬೆಗೆ ಇವು ಜಿಗಿಯುವ ವೇಳೆ ಉಂಟಾದ ಸದ್ದಿಗೆ ಏನಿರಬಹುದು ಎಂದು ನಾನು ನೋಡಿದಾಗ ಈ ದೈತ್ಯ ಅಳಿಲು ಕಂಡು ಬಂತು ಎಂದು ಅವರು ಕಾಮೆಂಟ್ ಮಾಡಿದ್ದಾರೆ.
Astrology Tips: ಅಳಿಲು ಮನೆಗೆ ಬಂದ್ರೆ ಶುಭವೋ? ಅಶುಭವೋ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ