ಮಕ್ಕಳು ಒಂದಲ್ಲ, ಎರಡಲ್ಲ, ಕನಿಷ್ಟ ಮೂರಕ್ಕಿಂತ ಹೆಚ್ಚಿರಬೇಕು. ಇದು ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ನೀಡಿದ ಕರೆ. ಇಷ್ಟೇ ಅಲ್ಲ ಚುನಾವಣೆಗೆ ಸ್ಪರ್ಧಿಸಲು ಈ ನಿಯಮ ಅನ್ವಯ ಮಾಡಲು ನಾಯ್ಡು ಮುಂದಾಗಿದ್ದಾರೆ. ಸರ್ಕಾರದ ಸವಲತ್ತು ಸೇರಿದಂತೆ ಹಲವು ಯೋಜನೆಗಳನ್ನು ಇದೇ ಮಕ್ಕಳ ಸಂಖ್ಯೆ ಆಧಾರದಲ್ಲಿ ವಿತರಿಸಲು ಮುಂದಾಗಿದ್ದಾರೆ. ನಾಯ್ಡು ಕರೆಯಿಂದ ಇದೀಗ ಭಾರಿ ಚರ್ಚೆ ಶುರುವಾಗಿದೆ.
ವಿಶಾಖಪಟ್ಟಣಂ(ಅ.21) ಮಗು ಒಂದೇ ಸಾಕು ಅನ್ನೋದು ಈಗನ ಬಹುತೇಕ ಪೋಷಕರ ಮಾತು. ಇತ್ತ ಸರ್ಕಾರಗಳು ಕೂಡ ಜನಸಂಖ್ಯಾ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದರ ನಡವೆ ಒಂದಲ್ಲ, ಎರಡಲ್ಲ, ಮನೆ ತುಂಬ ಮಕ್ಕಳಿರಬೇಕು ಅನ್ನೋ ಹಳೇ ಕಾನ್ಸೆಪ್ಟನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೆ ತಂದಿದ್ದಾರೆ. ಪ್ರತಿ ಕುಟುಂಬ 2ಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯಬೇಕು. ಈ ಮೂಲಕ ದಕ್ಷಿಣ ಭಾರತದಲ್ಲಿ ಎದುರಾಗಿರುವ ಜನಸಂಖ್ಯ ಅಸಮತೋಲನ ಸರಿಪಡಿಸಲು ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.
ಸ್ಥಳೀಯ ಚುನಾವಣೆಗೆ ಸ್ಪರ್ಧಿಸಲು ಒಬ್ಬನೇ ಮಗನಾಗಿದ್ದರೆ ಅವಕಾಶವಿಲ್ಲ, ಕನಿಷ್ಠ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸ್ಪರ್ಧಿಸಲು ಅವಕಾಶ. ಇಷ್ಟೇ ಅಲ್ಲ ಸರ್ಕಾರದ ಸವಲತ್ತು ಸಿಗಬೇಕಾದರೆ ಮಕ್ಕಳ ಸಂಖ್ಯೆ ಎರಡಕ್ಕಿಂತ ಹೆಚ್ಚಿರಬೇಕು. ಈ ನಿಯಮ ತರುವುದಾಗಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಆಂಧ್ರ ಪ್ರದೇಶ ಪ್ರಮುಖವಾಗಿ ಜನಸಂಖ್ಯಾ ಅಸಮೋತಲನ ಎದುರಿಸುತ್ತಿದೆ. ಇದು ಹಲವು ಸವಾಲುಗಳು ಹಾಗೂ ಸಂಕಷ್ಟಗಳಿಗೆ ಕಾರಣವಾಗಲಿೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳಲು ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.
ವಯಸ್ಕರು 'Dreams come true ಆಗೋದು ಬೇಡಪ್ಪ' ಅನ್ನೋದು ಇದೊಂದಕ್ಕೆ ಮಾತ್ರ!
ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಇದಕ್ಕೆ ದಕ್ಷಿಣ ಭಾರತ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ನೀಡಿದ ಕೊಡುಗೆ ಕಾರಣ. ಇದರಿಂದ ರಾಜ್ಯಗಳಿಗೆ ಅಪಾರ ನಷ್ಟ ಎದುರಾಗಲಿದೆ. ಹೀಗಾಗಿ ಮನೆಯಲ್ಲಿ ಕನಿಷ್ಠ2 ಅಥವಾ ಅದಕ್ಕಿತಂ ಹೆಚ್ಚು ಮಕ್ಕಳಿರುವಂತೆ ನೋಡಿಕೊಳ್ಳಬೇಕು. ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೂ ಪೂರಕವಾಗಿದೆ. ಜೊತೆಗೆ ಜನಸಂಖ್ಯಾ ಅಸಮತೋಲನ ಸರಿದೂಗಿಸಲು ನೆರೆವಾಗಲಿದೆ ಎಂದಿದ್ದಾರೆ.
ಚೀನಾ, ಜಪಾನ್ ಸೇರಿದಂತೆ ಯರೋಪಿಯನ್ ರಾಷ್ಟ್ರಗಳಲ್ಲಿ ಹಿರಿಯರು ಹಾಗೂ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಯುವಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ಈ ದೇಶಗಳು ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಮಾನವ ಸಂಪನ್ಮೂಲ, ದೇಶದ ಉತ್ಪಾದಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಯುವ ಸಮೂಹದ ಕೊರೆತೆ ಪ್ರಮುಖವಾಗಲಿದೆ. ಹೀಗಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ವಯಸ್ಸಾದ, ಹಿರಿಯರು ಮಾತ್ರ ಮನೆಯಲ್ಲಿದ್ದಾರೆ. ಯುವ ಸಮೂಹ, ಮಕ್ಕಳೆಲ್ಲಾ ನಗರ ಪ್ರದೇಶಗಳಲ್ಲಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಹೆಚ್ಚು ಮಕ್ಕಳ ಪಡೆಯುವುದು ಉತ್ತರವಾಗಲಿದೆ.
ಮಕ್ಕಳಿಗೆ 5 ವರ್ಷ ತುಂಬುವುದರೊಳಗೆ ಈ ಬದುಕಿನ ಪಾಠ ಕಲಿಸೋದ ಮರೀಬೇಡಿ!