ಪಾಸ್‌ಪೋರ್ಟ್‌ ಡೆಲಿವರಿ ನೀಡಲು ಬಂದ ಪೋಸ್ಟ್‌ಮ್ಯಾನ್‌, 500 ರೂಪಾಯಿ ನೀಡದ ಕಾರಣಕ್ಕೆ ಮೊದಲ ಪುಟವನ್ನೇ ಹರಿದು ಹಾಕಿದ!

By Santosh NaikFirst Published Oct 21, 2024, 2:46 PM IST
Highlights

ಪಾಸ್‌ಪೋರ್ಟ್‌ ಡೆಲಿವರಿ ಮಾಡಲು ಬಂದ ಪೋಸ್ಟ್‌ಮ್ಯಾನ್‌ 500 ರೂಪಾಯಿ ಲಂಚ ಕೇಳಿದ್ದಾನೆ. ಈ ವೇಳೆ ವ್ಯಕ್ತಿ 500 ರೂಪಾಯಿ ನೀಡಲು ನಿರಾಕರಿಸಿದ್ದಕ್ಕೆ ಆತನ ಪಾಸ್‌ಪೋರ್ಟ್‌ನ ಮೊದಲ ಪುಟವನ್ನೇ ಪೋಸ್ಟ್‌ಮ್ಯಾನ್‌ ಹರಿದು ಹಾಕಿರುವ ಘಟನೆ ನಡೆದಿದೆ.

ಲಕ್ನೋ (ಅ.21):  ಪಾಸ್‌ಪೋರ್ಟ್‌ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ, ಇಂಡಿಯಾ ಪೋಸ್ಟ್‌ನಿಂದ ಇದು ನಾವಿರುವ ಸ್ಥಳಕ್ಕೆ ಡೆಲಿವರಿ ಆಗುತ್ತದೆ. ಪೋಸ್ಟ್‌ಮ್ಯಾನ್‌ ಇದನ್ನು ತಂದುಕೊಡುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ, ಉತ್ತರ ಪ್ರದೇಶದ ಲಕ್ನೋದಲ್ಲಿ ಪಾಸ್‌ಪೋರ್ಟ್‌ ತಂದುಕೊಟ್ಟ ಪೋಸ್ಟ್‌ಮ್ಯಾನ್‌ 500 ರೂಪಾಯಿ ಲಂಚ ಕೇಳಿದ್ದಾನೆ. ಆದರೆ, ವ್ಯಕ್ತಿ ಲಂಚ ಕೊಡಲು ನಿರಾಕರಿಸಿದ್ದಕ್ಕೆ, ಪಾಸ್‌ಪೋರ್ಟ್‌ನ ಬಾರ್‌ ಕೋಡ್‌ ಸೇರಿದಂತೆ ಇತರ ಮುಖ್ಯ ವಿವರ ಇರುವ ಮೊದಲ ಪುಟವನ್ನೇ ಹರಿದು ಹಾಕಿರುವ ಘಟನೆ ನಡೆದಿದೆ.ಆ ಬಳಿಕ ದೂರುದಾರ ಮತ್ತು ಅವರ ಗೆಳೆಯರು ಪೋಸ್ಟ್ ಆಫೀಸ್‌ಗೆ ಹೋಗಿ ವಿಚಾರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಲಕ್ನೋದ ಮಲಿಹಾಬಾದ್‌ನಲ್ಲಿ ಈ ಘಟನೆ ನಡೆದಿದೆ. ರವೀಂದ್ರ ಗುಪ್ತಾ ಅನ್ನೋ ಪೋಸ್ಟ್‌ಮ್ಯಾನ್ ವಿರುದ್ಧ ಸುಶೀಲ್ ಅನ್ನೋ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದುಡ್ಡು ಕೊಡದಿದ್ರೆ ಪಾಸ್‌ಪೋರ್ಟ್‌ ಕೊಡಲ್ಲ ಅಂತ ಪೋಸ್ಟ್‌ಮ್ಯಾನ್ ಬೆದರಿಕೆ ಹಾಕಿದ್ದಾನೆ ಅಂತ ಸುಶೀಲ್ ದೂರಿನಲ್ಲಿ ಹೇಳಿದ್ದಾರೆ. ದುಡ್ಡು ಕೊಡದಿದ್ದಕ್ಕೆ ಬಾರ್‌ಕೋಡ್ ಇರೋ ಪುಟ ಹರಿದ ಅಂತ ಯುವಕ ಹೇಳಿದ್ದಾನೆ. ಸರ್ಕಾರ ಸಂಬಳ ಕೊಡ್ತಿದಾರಲ್ಲ, ಆಮೇಲೆ ಯಾಕೆ ಬಡ ಜನರಿಂದ ದುಡ್ಡು ಕಿತ್ತುಕೊಳ್ಳೋದು ಅಂತ ಪೋಸ್ಟ್ ಆಫೀಸ್‌ಗೆ ಪ್ರತಿಭಟನೆಗೆ ಬಂದವರು ಕೇಳ್ತಿರೋದು ವಿಡಿಯೋದಲ್ಲಿ ದಾಖಲಾಗಿದೆ.

Latest Videos

ಬಿಗ್‌ ಬಾಸ್‌ಗೆ ಶಿಶಿರ್‌ ಶಕುನಿ, ರಂಜಿತ್‌ ಅಮಾಯಕ, ಭವ್ಯಾ ಖಾಲಿ ದೋಸೆ ಎಂದ ಜಗದೀಶ್‌!

ಉತ್ತರ ಪ್ರದೇಶದ ಮುಖ್ಯಮಂತ್ರಿ, ಯುಪಿ ಪೊಲೀಸ್, ಅಂಚೆ ಇಲಾಖೆ ಇವರ ಪೇಜ್‌ಗಳನ್ನ ಟ್ಯಾಗ್ ಮಾಡಿ ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪಾಸ್ಪೋರ್ಟ್ ಕೊಡೋಕೆ ನಮ್ಮ ಹತ್ರನೂ ಪೋಸ್ಟ್‌ಮ್ಯಾನ್ ದುಡ್ಡು ಕೇಳಿದ್ದ ಅಂತ ವಿಡಿಯೋ ಕೆಳಗೆ ಕೆಲವರು ಕಮೆಂಟ್ ಮಾಡಿದ್ದಾರೆ.

'ಬಾಡಿಗೆ ಮನೆಯೇ ಬೆಸ್ಟ್‌..' ಎಂದಿದ್ದ ನಿಖಿಲ್‌ ಕಾಮತ್‌ ಯು-ಟರ್ನ್‌, ಸ್ವಂತ ಮನೆ ಖರೀದಿ ಮಾಡಿದ ಜೀರೋದಾ ಮಾಲೀಕ

लखनऊ मलिहाबाद कसमंडी कला डाकिया पासपोर्ट के लिए मांगा 500 रुपया न मिलने पर पीछे का पेज बारकोड वाला किया फाड़ कर गायब गरीब प्रार्थी ने एक-एक पाई जोड़कर बनवाया था इंटरनेशनल पासपोर्ट हर डाक का लेता 100 रुपया pic.twitter.com/UDwqcdFtcs

— Ram kishor Yadav (@RamkishorY11689)

 

click me!