ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಮೇಘಸ್ಫೋಟ, ಹಲವು ಭಕ್ತರ ಸಾವು!

By Suvarna News  |  First Published Jul 8, 2022, 8:07 PM IST
  • ಜಮ್ಮು ಮತ್ತು ಕಾಶ್ಮೀರ ಹಿಮಾಲಯನ್ ವಲಯದಲ್ಲಿ ಮೇಘಸ್ಫೋಟ
  • ಒಂದೇ ಸಮನೆ ಉಕ್ಕಿ ಹರಿದ ನದಿಗಳು, ಹಲವರು ಭಕ್ತರಿಗೆ ಗಾಯ
  • ರಕ್ಷಣಾ ಕಾರ್ಯ ಚುರುಕು, ಮತ್ತಷ್ಟು ಆತಂಕ

ಕಾಶ್ಮೀರ(ಜು.08): ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದೆ. ಒಂದೇ ಸಮನೇ ಸುರಿದ ಭಾರಿಯಿಂದ ಭೀಕ್ರ ಪ್ರವಾಹ ಸೃಷ್ಟಿಯಾಗಿದೆ. ಹೀಗಾಗಿ ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದೆ. ಇದರಿಂದ ಶಿಬಿರಗಳು ಕೊಚ್ಚಿ ಹೋಗಿದೆ. ಮಳೆಗೆ 8ಕ್ಕೂ ಹೆಚ್ಚು ಅಮರನಾಥ ಯಾತ್ರಾರ್ಥಿಗಳು ನಿಧನರಾಗಿದ್ದಾರೆ.  50ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.

ಗಾಯಗೊಂಡ ಹಲವರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ. 

Tap to resize

Latest Videos

ಪವಿತ್ರ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಬಳಿ ಒಂದೇ ಸಮನೆ ನದಿಗಳು ಉಕ್ಕಿ ಹರಿದಿದೆ. ಬೆಟ್ಟ ಗುಡ್ಡಗಳು ಕುಸಿದೆ.ನದಿಗಳ ರಭಸ ಹೆಚ್ಚಾಗಿದೆ. ಅಮರನಾಥ ಯಾತ್ರೆ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಗಳು ಚುರುಕುಗೊಂಡಿದೆ.

ಅಮರನಾಥ ಯಾತ್ರೆಗೆ ತೆರಳುವಿರಾ? ಈ ತಪ್ಪು ಮಾಡ್ಲೇಬೇಡಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ. ಇದೀಗ ಆತಂಕ ಮತ್ತಷ್ಟು ಹೆಚ್ಚಿದೆ.  ಇಂದು(ಜು.07) ಸಂದೆ 5.30ಕ್ಕೆ ಮೇಘಸ್ಫೋಟ ಸಂಭವಿಸಿದೆ. ಭಾರಿ ಮಳೆಗೆ ಮತ್ತೆ ಹಿಮಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗ ತತ್ತರಿಸಿದೆ. ವಿಪತ್ತು ನಿರ್ವಹಣಾ ತಂಡ, ಪೊಲೀಸ್ ಹಾಗೂ ಇತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ಸಕ್ರೀಯವಾಗಿದೆ. 

ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಅಮರನಾಥ ಯಾತ್ರೆ ನಿರ್ಬಂಧಿಸಲಾಗಿತ್ತು. 2 ವರ್ಷದ ಬಳಿಕ ಈ ಬಾರಿ ಅಮರನಾಥ ಯಾತ್ರೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಜೂನ್ 30 ರಿಂದ ಅಮರನಾಥ ಯಾತ್ರೆ ಆರಂಭಗೊಂಡಿದೆ,.

ಪವಿತ್ರ ವಾರ್ಷಿಕ ಅಮರನಾಥ ಯಾತ್ರೆಗೆ ಜೂನ್ 30 ರಂದು ಚಾಲನೆ ಸಿಕ್ಕಿತ್ತು. ಮೊದಲ ತಂಡದಲ್ಲಿ 4890 ಭಕ್ತರು ಯಾತ್ರೆ ಕೈಗೊಂಡಿದ್ದಾರೆ, ಈ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಬುಧವಾರ ಜಮ್ಮುವಿನ ಭಗವತಿ ನಗರ ಬೇಸ್‌ ಕ್ಯಾಂಪಿನಲ್ಲಿ ಚಾಲನೆ ನೀಡಿದ್ದರು. ಇವರೆಲ್ಲಾ ಜಮ್ಮುವಿನಿಂದ ಕಾಶ್ಮೀರದ ಪಹಲ್ಗಾಮ್‌ ಮತ್ತು ಬಲ್ಟಾಲ್‌ ಬೇಸ್‌ ಕ್ಯಾಂಪಿನತ್ತ ಸಾಗಲಿದ್ದಾರೆ. ಕೋವಿಡ್‌ ಕಾರಣದಿಂದಾಗಿ 2 ವರ್ಷಗಳ ಬಳಿಕ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. 43 ದಿನಗಳ ಯಾತ್ರೆಯು ಗುರುವಾರ ಆರಂಭವಾಗಿ ರಕ್ಷಾಬಂಧನ ದಿನ ಅಗಸ್ಟ್‌ 11 ರಂದು ಕೊನೆಗೊಳ್ಳಲಿದೆ.

ಪವಿತ್ರ ಅಮರನಾಥ ಯಾತ್ರೆ ಆರಂಭ, ಹಿಮಾಲಯದಲ್ಲಿ ಬಿಗಿ ಭದ್ರತೆ

ಭಾರಿ ಮಳೆಯಾಗುತ್ತಿರುವ ಕಾರಣ ಕಳೆದ ಕೆಲದಿನಗಳಿಂದ ಅಮರನಾಥ ಯಾತ್ರೆಗೆ ಭಾರಿ ತೊಡಕಾಗಿತ್ತು. ಆದರೆ ಇಂದು ಮೋಘಸ್ಫೋಟ ಸಂಭವಿಸಿದೆ. ಪವಿತ್ರ ಯಾತ್ರೆ ಇದೀಗ ಸ್ಥಗಿತಗೊಳ್ಳುವ ಆತಂಕ ಎದುರಿಸುತ್ತಿದೆ. ಇತ್ತ ಅಮರನಾಥ ಯಾತ್ರೆ ತೆರಳಿರುವ ಭಕ್ತರ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಭಕ್ತರನ್ನು ಸಂಪರ್ಕಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

click me!