ಸಾಮಾಜಿಕ ಜಾಲತಾಣಗಳಲ್ಲಿ ಎಲೆಮರೆಯ ಕಾಯಿಯಂತಿರುವ ಹಲವು ಪ್ರತಿಭೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇನ್ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ ಸ್ಕ್ರಾಲ್ ಮಾಡುತ್ತಿದ್ದಂತೆ ಹೊಸಹೊಸ ಪ್ರತಿಭೆಗಳು, ಪ್ರಯತ್ನಗಳು, ಸ್ಮಾರ್ಟ್‌ನೆಸ್‌ಗಳ ವಿಡಿಯೋಗಳು ಕಾಣಿಸುತ್ತಿರುತ್ತವೆ. ಅದೇ ರೀತಿ ಈಗ ಸಾಮಾನ್ಯ ಗೃಹಿಣಿಯೊಬ್ಬರ ಸುಂದರ ಕಂಠಸಿರಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗೃಹಿಣಿಯ ಪ್ರತಿಭೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡು ಬಾಲಿವುಡ್‌ನ 70, 80, ರ ದಶಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
ತಾಯಿಯ ಸುಮಧುರ ಕಂಠದ ಅರಿವಿರುವ ಮಗು ತಾಯಿಗೆ ಒಂದು ಹಾಡು ಹೇಳುವಂತೆ ಮನವೊಲಿಸುತ್ತಾಳೆ. ಮೊದಲಿಗೆ ಒಪ್ಪದ ತಾಯಿ ಮಗುವಿನ ಒತ್ತಾಯದ ನಂತರ ಹಾಡು ಹಾಡುತ್ತಾಳೆ. 1970ರ ದಶಕದ ಬಾಲಿವುಡ್ ಸಿನಿಮಾದ ಮೇರೆ ನೈನಾ ಸಾವನ್ ಭಾಡೋನ್ ಹಾಡನ್ನು ಮಹಿಳೆ ಹಾಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಈ ರೋಮ್ಯಾಂಟಿಕ್ ಹಾಡಿನಲ್ಲಿ ಮೂಡಿ ಬಂದ ಮಹಿಳೆ ಆಕರ್ಷಕ ಕಂಠಸಿರಿಗೆ ಅಂತರ್ಜಾಲದಲ್ಲಿ ಅನೇಕರು ಫಿದಾ ಆಗಿದ್ದಾರೆ.
ಚಪಾತಿ ಮಾಡುತ್ತಿರುವ ಅಮ್ಮನ ಬಳಿ ಬಂದ ಮಗು ಒಂದ ಹಾಡು (Song) ಹಾಡುವಂತೆ ಒತ್ತಾಯಿಸುತ್ತಾಳೆ. ಆಗ ಮಹಿಳೆ ಚಪಾತಿ ಮಾಡುತ್ತಲೇ ಸುಂದರವಾಗಿ ಹಾಡು ಹಾಡುತ್ತಾಳೆ. ಹಾಗಂತ ಈ ಮಹಿಳೆ ಯಾವುದೇ ತರಬೇತಿ ಪಡೆದಿಲ್ಲ. ಅದಾಗ್ಯೂ ನೆಲದ ಮೇಲೆ ಕುಳಿತುಕೊಂಡು ಚಪಾತಿ ಮಾಡುತ್ತಾ ಸೊಗಸಾಗಿ ಹಾಡುತ್ತಿರುವುದನ್ನು ನೋಡಿದರೆ ಬಹುತೇಕರು ತಮ್ಮ 70 ಅಥವಾ 80 ದಶಕಕ್ಕೆ ಜಾರಿದ್ದಾರೆ.
ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!
ಒಟ್ಟಿನಲ್ಲಿ ಈ ಹಾಡು ಲತಾ ಮಂಗೇಶ್ಕರ್ ಅವರನ್ನು ನೆನಪು ಮಾಡಿದೆ. ಒಬ್ಬ ಬಳಕೆದಾರ ಇದು ತುಂಬಾ ಸುಂದರವಾಗಿದೆ ಎಂದು ಬರೆದರೆ, ಮತ್ತೊಬ್ಬರು ಹಿಂದಿಯಲ್ಲಿ, ಇದು ತುಂಬಾ ಮೋಡಿ ಮಾಡುವಂತಿದೆ. ಅವಳು ವೃತ್ತಿಪರ ತರಬೇತಿಯನ್ನು ಪಡೆದರೆ, ಅವಳು ಯಶಸ್ವಿಯಾಗಿ ಹಿನ್ನೆಲೆ ಗಾಯಕಿಯಾಗಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದು ನಾನು ಅಂತರ್ಜಾಲದಲ್ಲಿ ಕಂಡ ಅತ್ಯಂತ ಅದ್ಭುತವಾದ ವಿಷಯ ಇದು ಎಂದು ಮತ್ತೊಬ್ಬರು ಹೇಳಿದ್ದಾರೆ. ಮೇರೆ ನೈನಾ ಸಾವನ್ ಭಾಡೋನ್ (Mere Naina Sawan Bhadon) ಅನ್ನು ದಿವಂಗತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು 1976 ರ ಚಲನಚಿತ್ರ ಮೆಹಬೂಬಾಗಾಗಿ ಹಾಡಿದ್ದರು. ಮೆಹಾಬೂಬಾ ಸಿನಿಮಾದಲ್ಲಿ ರಾಜೇಶ್ ಖನ್ನಾ (Rajesh Khanna) ಮತ್ತು ಹೇಮಾ ಮಾಲಿನಿ (Hema Malini)ಕಾಣಿಸಿಕೊಂಡಿದ್ದಾರೆ.
ಮುಂಬೈ-ಕೊಚ್ಚಿ-ಹೈದ್ರಾಬಾದ್‌ನಲ್ಲಿ ವಿಕ್ರಾಂತ್ ರೋಣ, ರಾ..ರಾ ರಕ್ಕಮ್ಮ ಎಂದ ಮಂಗ್ಲಿ..!
ಕೆಲ ದಿನಗಳ ಹಿಂದೆ ವಯೋವೃದ್ಧ ದಂಪತಿಗಳು ಹಾರ್ಮೋನಿಯಂ ಜೊತೆ ವಾದ್ಯವನ್ನು ಬಾರಿಸುತ್ತಾ 'ಚಿಟ್ಟಿ ಆಯಿ ಹೈ' ಹಾಡನ್ನು ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರು ಸಂಜಯ್ ದತ್ (Sanjay datt) ನಟಿಸಿದ 1986 ರ 'ನಾಮ್' (Naam) ಚಲನಚಿತ್ರದ ಪಂಕಜ್ ಉಧಾಸ್ (Pankaj Udhas) ಅವರು ಹಾಡಿದ ಜನಪ್ರಿಯ ಹಾಡಾದ 'ಚಿಟ್ಟಿ ಆಯಿ ಹೈ' ಹಾಡನ್ನು ಸೊಗಸಾಗಿ ಹಾಡಿದ್ದು, ದಂಪತಿಯ ಈ ಹಾಡಿಗೆ ನೋಡುಗರು ಭೇಷ್ ಎಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವೀಡಿಯೊವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
2 ಲಕ್ಷಕ್ಕೂ ಅಧಿಕ ಜನ ಈ ಹಾಡನ್ನು ಲೈಕ್ ಮಾಡಿದ್ದಾರೆ. ವೀಡಿಯೋದಲ್ಲಿ ಚಾಪೆಯೊಂದರ ಮೇಲೆ ಕಾಲು ಮಡಚಿ ಕುಳಿತಿರುವ ಈ ದಂಪತಿಯ ಸೊಗಸಾದ ಹಾಡು ನೋಡುಗರನ್ನು ಸೆಳೆಯುತ್ತಿದೆ. ಅಜ್ಜ ಹಾರ್ಮೋನಿಯಂ ಬಾರಿಸುತ್ತಿದ್ದರೆ, ಅಜ್ಜಿ ತನ್ನ ಡ್ಯಾಫ್ಲಿ ಬಾರಿಸುತ್ತಾ ಹಾಡುತ್ತಿದ್ದಾರೆ. ಅವರ ಧ್ವನಿಗಳು ಯಾವುದೇ ಸಂಗೀತಾ ಪರಿಣಿತರಿಗೂ ಕಮ್ಮಿ ಇದ್ದಂತಿರಲಿಲ್ಲ. ಜೊತೆಗೆ ಆವರು ಆಯ್ಕೆ ಮಾಡಿದ ಹಿಟ್ ಹಾಡು ಅವರ ಧ್ವನಿಯ ಮಾಧುರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ವೃದ್ಧ ದಂಪತಿಯ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದು, ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ