ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನದ ಪರೀಕ್ಷೆಯಲ್ಲಿ ಬಾಲಿವುಡ್ ಸ್ಟಾರ್ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್‌ರ ಮಗನ ಹೆಸರನ್ನು ಕೇಳಲಾಗಿದೆ.
ಮಧ್ಯಪ್ರದೇಶ (ಡಿ. 25): ಮಧ್ಯಪ್ರದೇಶದ ಖಂಡ್ವಾ (Khandwa) ನಗರದ ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನದ ಪರೀಕ್ಷೆಯಲ್ಲಿ ಬಾಲಿವುಡ್ ಸ್ಟಾರ್ ದಂಪತಿ ಕರೀನಾ ಕಪೂರ್ (Kareena Kapoor) ಹಾಗೂ ಸೈಫ್ ಅಲಿ ಖಾನ್‌ರ (Saif Ali Khan) ಮಗನ ಹೆಸರನ್ನು ಕೇಳಲಾಗಿದೆ. ಅಹಿಲ್ಯಾಬಾಯಿ ಹೋಳ್ಕರ್, ಶಿವಾಜಿಯಂತಹ ಮಹಾನ್ ವ್ಯಕ್ತಿಗಳು, ಐತಿಹಾಸಿಕ ಅಂಶಗಳನ್ನು ಪರೀಕ್ಷೆಯಲ್ಲಿ ಕೇಳದೇ ಇಂತಹ ವಿಷಯವನ್ನು ಪರೀಕ್ಷೆಯಲ್ಲಿ ಕೇಳಿದ್ದಕ್ಕೆ ಪಾಲಕರು ಕಿಡಿಕಾರಿದ್ದಾರೆ. ಶಾಲೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಷಯ ಮನಗಂಡ ಜಿಲ್ಲಾ ಶಿಕ್ಷಣಾಧಿಕಾರಿ ಸಂಜೀವ್ ಭಾಲೇರಾವ್, ಶಾಲೆಗೆ ಶೋಕಾಸ್ ನೋಟಿಸ್ ಕಳುಹಿಸಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಪರೀಕ್ಷೆಯಲ್ಲಿನ ಪ್ರಶ್ನೆ ಏನಾಗಿತ್ತು?
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಪ್ರಶ್ನೆ ಪತ್ರಿಕೆಯ ಚಿತ್ರವು ವಿಭಾಗದಲ್ಲಿ ಐದು ಪ್ರಶ್ನೆಗಳಿವೆ ಎಂದು ತೋರಿಸುತ್ತದೆ: "ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಗನ ಪೂರ್ಣ ಹೆಸರನ್ನು ಬರೆಯಿರಿ - Write the full name of the son of Kareena Kapoor and Saif Ali Khan". ವಾಸ್ತವವಾಗಿ, ಐದನೇ ಪ್ರಶ್ನೆಯು ವಿವಾದಾತ್ಮಕವಾಗಿದ್ದು "ಉತ್ತರ ಕೊರಿಯಾದ ಸರ್ವಾಧಿಕಾರಿ ಯಾರು?" ಎಂದು ಕೇಳಲಾಗಿದೆ. ಪೆರೀಕ್ಷೆಯಲ್ಲಿ ನೀಡಲಾದ ಪ್ರಶೆ ಪತ್ರಿಕೆ ಈ ರೀತಿ ಇದೆ.
ಡಿಸೆಂಬರ್ 20, 2016 ರಂದು ಮುಂಬೈನಲ್ಲಿ ಜನಿಸಿದ ತೈಮೂರ್ ಯಾವಾಗಲೂ ಲೈಮ್‌ಲೈಟ್‌ನಲ್ಲಿದ್ದಾನೆ. ಇಷ್ಟೇ ಅಲ್ಲ, ಅವನು ಅತ್ಯಂತ ನೆಚ್ಚಿನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬ, ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ತೈಮೂರ್ ಅಚ್ಚು ಮೆಚ್ಚು. ತೈಮೂರ್ ಜನನಕ್ಕೂ ಮುನ್ನವೇ ಮಾಧ್ಯಮಗಳಲ್ಲಿ ಆತನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಲ್ಲದೇ ತೈಮೂರ್ ಎಂಬ ಹೆಸರಿಗೂ ಸಾಕಷ್ಟು ಪರ ವಿರೋಧದ ಅಭಿಪ್ಯಾಯಗಳು ವ್ಯಕ್ತವಾಗಿದ್ದವು. ಬಾಲಿವುಡ್ ಸ್ಟಾರ್‌ಗಳಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಈ ವರ್ಷ ಎರಡನೇ ಮಗುವಿಗೆ ಪೋಷಕರಾಗಿದ್ದಾರೆ.
ಗಾಳಿಪಟ ಹಾರಿಸುವ ವೇಳೆ ಗಾಳಿಯಲ್ಲಿ ಹಾರಿದ ವ್ಯಕ್ತಿ!
ಕೊಲಂಬೋ(ಡಿ.23): ಶ್ರೀಲಂಕಾದಲ್ಲಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅಕ್ಷರಶಃ ದಾರದಲ್ಲಿ ನೇತಾಡಿದಂತಹ ಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ. ಶ್ರೀಲಂಕಾ (Sri Lanka)ದ ಜಾಫ್ನಾ (Jaffna) ಜಿಲ್ಲೆಯಲ್ಲಿರುವ ಪಾಯಿಂಟ್ ಪೆಡ್ರೊದಲ್ಲಿ ಒಂದು ಮಗುವಿನ ತಂದೆ ಗಾಳಿಪಟವನ್ನು ಹಾರಿಸುತ್ತಿದ್ದಾಗ, ಎಲ್ಲಿಂದಲೂ ಬೀಸಿ ಬಂದ ದೊಡ್ಡ ಗಾಳಿಯ ಪರಿಣಾಮ ಅವರು ಕೂಡ ಗಾಳಿಪಟದ ಜೊತೆ ಮೇಲೇರಿ ಹಗ್ಗದೊಂದಿಗೆ ನೇತಾಡುವಂತಾದ ಘಟನೆ ನಡೆದಿದೆ. ನದರಸಾ ಮನೋಹರನ್ (Nadarasa Manoharan) ಎಂಬುವವವರೇ ಹೀಗೆ ಮೇಲೆ ಹಾರಲ್ಪಟ್ಟ ವ್ಯಕ್ತಿಯಾಗಿದ್ದು, ಸುಮಾರು 30 ರಿಂದ 40 ಅಡಿಗಳಷ್ಟು ಎತ್ತರಕ್ಕೆ ಅವರು ಹಾರಲ್ಪಟ್ಟಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೋಹರನ್ ಅವರ ದೊಡ್ಡ ಗಾಳಿಪಟಕ್ಕೆ ಜೋಡಿಸಲಾದ ಸೆಣಬಿನ ಹಗ್ಗದಲ್ಲಿ ನೇತಾಡುತ್ತಿರುವುದು ಕಾಣಿಸುತ್ತಿದೆ. ನಂತರ ಸ್ವಲ್ಪ ಹೊತ್ತಿನಲ್ಲೇ ಮನೋಹರನ್ ಅವರು ಕೆಳಗೆ ಬಿದ್ದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರನ್ನು ಸ್ಥಳೀಯ ಪಾಯಿಂಟ್ ಪೆಡ್ರೊ ಆಸ್ಪತ್ರೆ (Point Pedro Hospital) ಗೆ ದಾಖಲಿಸಲಾಗಿದೆ. ವಿಡಿಯೋ ನೋಡಿ
ಇದನ್ನೂ ಓದಿ:
1) ಈ ಹುಡುಗಿ ತಲೆಯಲ್ಲಿರುವುದು ಹೂವಲ್ಲ ಹಾವು..? ಹಾವನ್ನೇ ಹೂವಂತೆ ಸುತ್ತಿಕೊಂಡ ಮಹಿಳೆ
2) KFC Chicken: ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ
3) ಮೊದಲ ಬಾರಿ ಕೊಕಾಕೋಲಾದ ರುಚಿ ನೋಡಿದ ಕಂದನ ರಿಯಾಕ್ಷನ್ ನೋಡಿ