ಅಸ್ಸಾಂ-ಮೇಘಾಲಯ ಸಂಘರ್ಷಕ್ಕೆ 6 ಜನ ಬಲಿ, ಇಂಟರ್ನೆಟ್‌ ಬಂದ್‌

By Kannadaprabha News  |  First Published Nov 23, 2022, 6:51 AM IST

ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಪಶ್ಚಿಮ ಕರ್ಬಿ ಆಂಗ್ಲಾಂಗ್‌ ಜಿಲ್ಲೆಯಲ್ಲಿ ಅಸ್ಸಾಂ ಅರಣ್ಯ ಸಿಬ್ಬಂದಿ ಹಾಗೂ ಮೇಘಾಲಯ ಜನರ ನಡುವೆ ಸಂಘರ್ಷ ನಡೆದಿದ್ದು, ಒಬ್ಬ ಫಾರೆಸ್ಟ್‌ ಗಾರ್ಡ್‌ ಸೇರಿ 6 ಜನರು ಸಾವನ್ನಪ್ಪಿದ್ದಾರೆ.


ಗುವಾಹಟಿ: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಪಶ್ಚಿಮ ಕರ್ಬಿ ಆಂಗ್ಲಾಂಗ್‌ ಜಿಲ್ಲೆಯಲ್ಲಿ ಅಸ್ಸಾಂ ಅರಣ್ಯ ಸಿಬ್ಬಂದಿ ಹಾಗೂ ಮೇಘಾಲಯ ಜನರ ನಡುವೆ ಸಂಘರ್ಷ ನಡೆದಿದ್ದು, ಒಬ್ಬ ಫಾರೆಸ್ಟ್‌ ಗಾರ್ಡ್‌ ಸೇರಿ 6 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಮುಂಜಾನೆ ಅಸ್ಸಾಂನಿಂದ ಮೇಘಾಲಯಕ್ಕೆ ಅಕ್ರಮವಾಗಿ ಮರಮಟ್ಟುಗಳನ್ನು ಸಾಗಿಸುತ್ತಿರುವ ಶಂಕೆ ಮೇರೆಗೆ ಟ್ರಕ್‌ ಅನ್ನು ಅಸ್ಸಾಂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಕ್ಕೆ ಗಲಾಟೆ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಮೇಘಾಲಯ ಗಡಿಗೆ ಹೊಂದಿಕೊಂಡಿರುವ ಅಸ್ಸಾಂ ಜಿಲ್ಲೆಗಳಲ್ಲಿ ಅಲರ್ಚ್‌ ಘೋಷಿಸಲಾಗಿದೆ. ಮೇಘಾಲಯದ 7 ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೊಬೈಲ್‌ ಇಂಟರ್‌ನೆಟ್‌ (mobile internet) ಅನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಆಗಿದ್ದೇನು?:

Tap to resize

Latest Videos

ಮಂಗಳವಾರ ನಸುಕಿನ 3 ಗಂಟೆಗೆ ಅಕ್ರಮವಾಗಿ ಮರಮುಟ್ಟನ್ನು ಮೇಘಾಲಯಕ್ಕೆ (Meghalaya) ಸಾಗಿಸಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸ್‌ ಅಧಿಕಾರಿಗಳು (Assam security personnel) ಟ್ರಕ್‌ವೊಂದನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೂ ಟ್ರಕ್‌ ಡ್ರೈವರ್‌ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಫಾರೆಸ್ಟ್‌ ಗಾರ್ಡ್‌ಗಳು ಟ್ರಕ್‌ ಟೈರ್‌ಗೆ ಗುಂಡು ಹಾರಿಸಿದರು ಹಾಗೂ ಡ್ರೈವರ್‌ ಸೇರಿ ಟ್ರಕ್‌ನಲ್ಲಿದ್ದ ಇನ್ನಿಬ್ಬರನ್ನು ವಶಕ್ಕೆ ತೆಗದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಉಳಿದವರು ಪರಾರಿಯಾದರು. ಈ ಬಗ್ಗೆ ಮಾಹಿತಿ ತಿಳಿದಿದ್ದೇ ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸಿದರು.

ಆದರೆ ನಸುಕಿನ ಸುಮಾರು 5 ಗಂಟೆ ವೇಳೆಗೆ ಮೇಘಾಲಯದಿಂದ ಹಲವಾರು ಜನರು ತಮ್ಮ ಆಯುಧಗಳೊಂದಿಗೆ ಸ್ಥಳಕ್ಕೆ ಬಂದು ಗಲಾಟೆ ಆರಂಭಿಸಿದ್ದಾರೆ. ಅಲ್ಲದೇ ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡು ಹಾರಿಸಿದ್ದು, ಈ ಗಲಾಟೆಯಲ್ಲಿ ಒಬ್ಬ ಫಾರೆಸ್ಟ್‌ ಗಾರ್ಡ್‌ ಸೇರಿ 6 ಜನರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ಅಸ್ಸಾಂ, ಬಾಂಗ್ಲಾ ನಿವಾಸಿಗಳ ಮೇಲೆ ಕ್ರಮಕೈಗೊಳ್ಳಿ: ಹಿಂಜಾವೇ ಮನವಿ

ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!

click me!