ರಾಜ್ಯಪಾಲರ ಭಾಷಣ ಮಾಡ್ತಿರುವಾಗಲೇ ಕುಸಿದು ಬಿದ್ದ ಪೊಲೀಸ್​ ಕಮಿಷನರ್​: ಶಾಕಿಂಗ್​ ವಿಡಿಯೋ ವೈರಲ್

Published : Jan 27, 2025, 06:38 PM ISTUpdated : Jan 28, 2025, 10:07 AM IST
ರಾಜ್ಯಪಾಲರ ಭಾಷಣ ಮಾಡ್ತಿರುವಾಗಲೇ ಕುಸಿದು ಬಿದ್ದ ಪೊಲೀಸ್​ ಕಮಿಷನರ್​: ಶಾಕಿಂಗ್​ ವಿಡಿಯೋ ವೈರಲ್

ಸಾರಾಂಶ

ಕೆಲ ಪೊಲೀಸರ ದುರ್ನಡತೆಯಿಂದ ಇಡೀ ಇಲಾಖೆಗೆ ಕಳಂಕ ಬಂದರೂ, ಹಲವರು ಪ್ರಾಣಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ವಿಐಪಿ ಕರ್ತವ್ಯದಲ್ಲಿ ಪೊಲೀಸರು ಕಷ್ಟ ಅನುಭವಿಸುತ್ತಾರೆ. ಗಣರಾಜ್ಯೋತ್ಸವದಂದು ಕೇರಳದ ಪೊಲೀಸ್ ಆಯುಕ್ತರು ಕುಸಿದ ಘಟನೆ ಇದಕ್ಕೆ ಸಾಕ್ಷಿ. ರಾಜ್ಯಪಾಲರ ನಿರ್ಲಕ್ಷ್ಯ ಟೀಕೆಗೆ ಗುರಿಯಾಗಿದೆ.

ಹಲವಾರು ಸಂದರ್ಭಗಳಲ್ಲಿ ಪೊಲೀಸ್​​ ಇಲಾಖೆಯನ್ನು ಜನಸಾಮಾನ್ಯರು ಬಾಯಿಗೆ ಬಂದಂತೆ ಬೈಯುವುದು ಉಂಟು. ಪೊಲೀಸರನ್ನು ಕೂಡ ಮನಸೋ ಇಚ್ಛೆ ಬೈಯುತ್ತಾರೆ. ರಸ್ತೆ ಬದಿಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರಿಂದಲೂ 5-10 ರೂಪಾಯಿ ಚಂದಾ ವಸೂಲಿ ಮಾಡುವುದು, ಬೇಕಾಬಿಟ್ಟೆ ಅಂಗಡಿಗಳಿಗೆ ಹೋಗಿ ಪುಕ್ಕಟೆಯಾಗಿ ತಿನ್ನುವುದು... ಇಂಥ ಕೆಲವು ಕೆಲಸಗಳನ್ನು ಕೆಲವು ಪೊಲೀಸರು ಮಾಡುವ ಕಾರಣದಿಂದ ಇಡೀ ಪೊಲೀಸ್ ಇಲಾಖೆಯನ್ನೇ ಕೆಟ್ಟ ದೃಷ್ಟಿಯಿಂದ ನೋಡುವ ದೊಡ್ಡ ವರ್ಗವೇ ಇದೆ. ಆದರೆ ಹಲವು ಸಂದರ್ಭಗಳಲ್ಲಿ ಪೊಲೀಸರು ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಹೋರಾಡುವುದನ್ನು ಕೂಡ ಯಾರೂ ಮರೆಯಬಾರದು. ಆ ಕೆಲಸ ಅಷ್ಟು ಸುಲಭದ್ದಲ್ಲ.

ಅದೇ ರೀತಿ ವಿಶೇಷ ಸಂದರ್ಭಗಳಲ್ಲಿ, ವಿಐಪಿಗಳ ರಕ್ಷಣೆಗೆ ಪೊಲೀಸರು ಬಿಸಿಲು, ಮಳೆಯೆನ್ನದೇ, ದಿನಪೂರ್ತಿ ನಿಂತುಕೊಂಡೇ ಇರುವ ಪ್ರಸಂಗಗಳೂ ಎದುರಾಗುತ್ತವೆ. ಟೈಂಗೆ ಸರಿಯಾಗಿ ಬಾರದ ಹಲವು ವಿಐಪಿ ಎನ್ನಿಸಿಕೊಂಡವರಿಗಾಗಿ ಎಷ್ಟೋ ಗಂಟೆ ಮೊದಲೇ ಆ ಜಾಗದ ಪರಿಶೀಲನೆಯಿಂದ ಹಿಡಿದು, ಈ ದೊಡ್ಡ ಮನುಷ್ಯರು ಬರುವವರೆಗೆ, ಅವರು ಭಾಷಣಮಾಡಿ ಹೋಗುವವರೆಗೂ ಪೊಲೀಸ್​ ಇಲಾಖೆಯ ಜವಾಬ್ದಾರಿ ಬಹಳ ದೊಡ್ಡದ್ದಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನೀರು, ಅನ್ನ, ಆಹಾರ ಏನೂ ಇರದೆ ಇರುವ ಸ್ಥಿತಿಯೂ ಬರುತ್ತದೆ. ಎಷ್ಟೇ ಅನಾರೋಗ್ಯವಿದ್ದರೂ, ಅದನ್ನು ಲೆಕ್ಕಿಸದೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಕಾರ್ಯಕ್ರಮ ಮುಗಿಯುವವರೆಗೂ ನಿಂತುಕೊಂಡೇ ಇರುವ ಸ್ಥಿತಿಯೂ ಪೊಲೀಸ್​ ಅಧಿಕಾರಿಗಳಿಗೆ ಬರುವುದು ಉಂಟು.

ವಿವಾದದಲ್ಲಿ ಸೈಫ್​ ಇರಿತ ಪ್ರಕರಣ! ಹೇಳಿಕೆ ಕೊಟ್ಟಿದ್ಯಾರು? FIR ಇಲ್ಲದೇ ವಿಮೆ ಹಣ ಬಂದದ್ಹೇಗೆ? ತನಿಖೆಗೆ ಆದೇಶ

ಇದೀಗ ಅಂಥದ್ದೇ ಒಂದು ಶಾಕಿಂಗ್​ ವಿಡಿಯೋ ವೈರಲ್​ ಆಗಿದೆ. ನಿನ್ನೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದ ರಾಜ್ಯಪಾಲರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಥಾಮ್ಸನ್ ಜೋಸ್ ಕುಸಿದು ಬಿದ್ದಿದ್ದಾರೆ. ಇವರು ನಿಂತಿರುವ ಪರಿ ನೋಡಿದರೆ  ತೀರಾ ಬಳಲಿರುವಂತೆ  ಕಾಣಿಸುತ್ತಿದೆ. ರಾಜ್ಯಪಾಲರು ತಿರುವನಂತಪುರಂ ಸೆಂಟ್ರಲ್ ಕ್ರೀಡಾಂಗಣದಲ್ಲಿ   ಗಣರಾಜ್ಯೋತ್ಸವ ಪರೇಡ್ ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಥಾಮ್ಸನ್ ಜೋಸ್ ತೀರಾ ಬಳಲಿ, ನಿಂತುಕೊಳ್ಳಲು ಸಾಧ್ಯವಾಗದೇ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಲ್ಲಿರುವ ಇತರರು ಕೂಡಲೇ ಅವರನ್ನು ಎತ್ತಿಕೊಂಡು ಹೋಗಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಪಾಲರು ನಿಂತ ಸ್ಥಳದಿಂದ ಅಲ್ಲಾಡದೇ ಇರುವುದು ಸೋಷಿಯಲ್​  ಮೀಡಿಯಾದಲ್ಲಿ ಟೀಕೆಗೆ ಗ್ರಾಸವಾಗಿದೆ. ಪೊಲೀಸರ ಹಣೆಬರಹ ಅಷ್ಟೇ. ಈ ವಿಐಪಿಗಳಿಗೆ ಕಾವಲು ಕಾಯಲು ಬೇಕು ಅಷ್ಟೇ. ಆದರೆ ಇಂಥ ಉನ್ನತ ಮಟ್ಟದ ಅಧಿಕಾರಿಗಳಿಗೆ  ಹೀಗೆ ಆದರೂ ಅವರಿಗೆ ಸಹಾಯ ಮಾಡಲು ಅವರ ಸ್ಟೇಟಸ್​ ಅಡ್ಡ ಬರುತ್ತದೆ ಎಂದೆಲ್ಲಾ ಟ್ರೋಲ್​ ಮಾಡಲಾಗುತ್ತಿದೆ. ಇನ್ನು ಪೊಲೀಸ್​ ಕಮಿಷನರ್​ ಅವರನ್ನು  ಸಹೋದ್ಯೋಗಿಗಳು ತಕ್ಷಣ ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಿದರು. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪಡೆದು ಪುನಃ ಅವರು ಕರ್ತವ್ಯಕ್ಕೆ ಹಾಜರಾದರು! ಈ ವಿಡಿಯೋ ಅನ್ನು ರಿಪೋರ್ಟರ್​ ಎನ್ನುವ ಇನ್​ಸ್ಟಾಗ್ರಾಮ್​  ಪುಟದಲ್ಲಿ ಶೇರ್​ ಮಾಡಲಾಗಿದೆ. 

ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್​ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್