ಸಿನಿಮಾ ಥಿಯೇಟರ್‌ನಲ್ಲಿ ಮಹಿಳೆಗೆ ಕಚ್ಚಿದ ಇಲಿ: ಪ್ರೇಕ್ಷಕಿಗೆ 67 ಸಾವಿರ ರೂ. ಪರಿಹಾರ ನೀಡಲು ಸೂಚನೆ

By BK Ashwin  |  First Published May 4, 2023, 3:48 PM IST

ಸಿನಿಮಾ ಪ್ರದರ್ಶನದ ವೇಳೆ ಮಹಿಳೆಯ ಪಾದಕ್ಕೆ ಕಚ್ಚಿದ ನಂತರ ಸಿನಿಮಾ ಹಾಲ್‌ ಸೇವೆಯಲ್ಲಿ ಲೋಪವಿದೆ ಎಂದು ಚಿತ್ರಮಂದಿರ ನಿರ್ವಾಹಕರ ವಿರುದ್ಧ ಗ್ರಾಹಕರ ವೇದಿಕೆಯನ್ನು ಆಕೆ ಸಂಪರ್ಕಿಸಿದ್ದರು. ಅಲ್ಲದೆ, ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲದೆ, ಮಾನಸಿಕ ಸಂಕಟ, ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ಒಟ್ಟು ₹ 6,00,000 ನೀಡುವಂತೆ ಮಹಿಳೆ ಕೋರಿದ್ದರು.


ಗುವಾಹಟಿ (ಮೇ 4, 2023): ಐದು ವರ್ಷಗಳ ಹಿಂದೆ ಸಿನಿಮಾ ನೋಡುತ್ತಿದ್ದಾಗ ಇಲಿ ಕಚ್ಚಿ ಚಿಕಿತ್ಸೆ ಪಡೆದ ಮಹಿಳೆಗೆ ಪರಿಹಾರ ನೀಡುವಂತೆ ಗುವಾಹಟಿಯ ಸಿನಿಮಾ ಹಾಲ್‌ನ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಮಹಿಳೆ ನೀಡಿದ್ದ ದೂರಿನ ಹಿನ್ನೆಲೆ ಆಕೆಯ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕಾಮರೂಪ್‌ನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಗುವಾಹಟಿಯ ಗಲೇರಿಯಾ ಚಿತ್ರಮಂದಿರದ ಅಧಿಕಾರಿಗಳಿಗೆ ಮಹಿಳೆಯ ವೈದ್ಯಕೀಯ ವೆಚ್ಚ, ನೋವು ಮತ್ತು ಮಾನಸಿಕ ಸಂಕಟದ ಪರಿಹಾರ ಮತ್ತು ಪ್ರಕರಣದ ಪ್ರಕ್ರಿಯೆಗಳ ವೆಚ್ಚದ ಮರುಪಾವತಿಯಾಗಿ ಒಟ್ಟು ₹ 67,282.48 ಪಾವತಿಸುವಂತೆ ಏಪ್ರಿಲ್ 25 ರಂದು ಸೂಚಿಸಿದೆ. 

ಸಿನಿಮಾ ಪ್ರದರ್ಶನದ ವೇಳೆ ಮಹಿಳೆಯ ಪಾದಕ್ಕೆ ಕಚ್ಚಿದ ನಂತರ ಸಿನಿಮಾ ಹಾಲ್‌ ಸೇವೆಯಲ್ಲಿ ಲೋಪವಿದೆ ಎಂದು ಚಿತ್ರಮಂದಿರ ನಿರ್ವಾಹಕರ ವಿರುದ್ಧ ಗ್ರಾಹಕರ ವೇದಿಕೆಯನ್ನು ಆಕೆ ಸಂಪರ್ಕಿಸಿದ್ದರು. ಅಲ್ಲದೆ, ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲದೆ, ಮಾನಸಿಕ ಸಂಕಟ, ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ಒಟ್ಟು ₹ 6,00,000 ನೀಡುವಂತೆ ಮಹಿಳೆ ಕೋರಿದ್ದರು.  ಮಾರ್ಚ್ 2019 ರಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Tap to resize

Latest Videos

ಇದನ್ನು ಓದಿ: ಇಲಿ ಹಿಡಿಯಲು ಹಾವನ್ನೇ ಬಿಟ್ಟ ವಿಡಿಯೋ ವೈರಲ್‌: ಸ್ಮಾರ್ಟ್‌ ಐಡಿಯಾ ಎಂದ ನೆಟ್ಟಿಗರು..!

ಅನೈರ್ಮಲ್ಯ ಪರಿಸರ
ಅಕ್ಟೋಬರ್ 20, 2018 ರಂದು ರಾತ್ರಿ 9 ಗಂಟೆಗೆ ಗುವಾಹಟಿಯ ಗ್ಯಾಲೇರಿಯಾ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ವೀಕ್ಷಿಸಲು ಕುಟುಂಬ ಸಮೇತ ತೆರಳಿದ್ದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಸಿನಿಮಾ ಮಧ್ಯಂತರದ ನಂತರ ಕಾಲಿಗೆ ಏನೋ ಕಚ್ಚಿದಂತಾಗಿದೆ ಎಂದು ಆಕೆ ದೂರು ನೀಡಿದ್ದರು. ಅಲ್ಲದೆ, ಈ ಬಗ್ಗೆ ಚಿತ್ರ ಮಂದಿರದ ಸಿಬ್ಬಂದಿಗೆ ತಿಳಿಸಿದ್ರೂ ಅವರು ಪ್ರಥಮ ಚಿಕಿತ್ಸೆ ಅಥವಾ ಇನ್ನಾವುದೇ ರೀತಿಯ ಸಹಾಯವನ್ನು ನೀಡಲು ನಿರಾಕರಿಸಿದ ನಂತರ ತಕ್ಷಣವೇ ಸಿನಿಮಾ ಹಾಲ್‌ನಿಂದ ನಿರ್ಗಮಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಹೋಗಿದ್ದೆ ಎಂದೂ ಆಕೆ ಹೇಳಿಕೊಂಡಿದ್ದರು. 

ಇನ್ನು, ಆಕೆಗೆ ರಕ್ತಸ್ರಾವವಾಗಿದ್ದು, ಅದಕ್ಕೆ ಕಾರಣವೇನು ಎಂಬುದು ಪತ್ತೆಯಾಗದ ಕಾರಣ ಆಸ್ಪತ್ರೆಯವರು ಆಕೆಯನ್ನು ನಿಗಾದಲ್ಲಿ ಇರಿಸಿದ್ದರು. ಈ ಹಿನ್ನೆಲೆ ತಾನು ಬಲವಾದ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು, ಇದು ಕೆಲಸದಲ್ಲಿ ಆಕೆಯ ದಕ್ಷತೆಯ ಮೇಲೆ ಪರಿಣಾಮ ಬೀರಿದೆ ಎಂದು ದೂರುದಾರ ಮಹಿಳೆ ತಿಳಿಸಿದ್ದರು. ಹಾಗೂ, ಸಿನಿಮಾ ಹಾಲ್ ತುಂಬಾ ಅನೈರ್ಮಲ್ಯದಿಂದ ಕೂಡಿದ್ದು, ಸೀಟಿನ ಹಿಂದೆ ಪಾಪ್‌ಕಾರ್ನ್ ಬಾಕ್ಸ್‌ಗಳು, ಖಾಲಿ ಬಾಟಲಿಗಳು ಮತ್ತು ಇತರ ತ್ಯಾಜ್ಯ ಸಂಗ್ರಹವಾಗಿದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಲಿಗಳು 580 ಕೆಜಿ ಗಾಂಜಾ ಭಕ್ಷಿಸಿವೆ ಎಂದ ಪೊಲೀಸ್: ಸಾಕ್ಷಿ ನೀಡಲು ಕೋರ್ಟ್‌ ತಾಕೀತು 

ಇನ್ನು, “ಸಿನಿಮಾ ಹಾಲ್‌ನಲ್ಲಿ ಇಲಿಗಳು ಅಪಾಯಕಾರಿ ಎಂದು ಗ್ಯಾಲೇರಿಯಾ ಸಿನಿಮಾದ ಪರಿಚಾರಕರು ಒಪ್ಪಿಕೊಂಡರು. ನಂತರ, ದೂರುದಾರರಿಗೆ ಹಾವು ಅಲ್ಲ, ಇಲಿ ಕಚ್ಚಿದೆ ಎಂದು ವೈದ್ಯರು ಸಹ ದೃಢಪಡಿಸಿದರು ಮತ್ತು ಆಂಟಿ ರೇಬಿಸ್ ಹಾಗೂ ಇತರ ಔಷಧಿಗಳನ್ನು ನೀಡಿದರು’’ ಎಂದು ದೂರುದಾರ ಮಹಿಳೆಯ ವಕೀಲರಾದ ಅನಿತಾ ವರ್ಮಾ ಬುಧವಾರ ತಿಳಿಸಿದ್ದರು. ಈ ಮಧ್ಯೆ, "ಗುವಾಹಟಿಯ ಅನೇಕ ಸಿನಿಮಾ ಥಿಯೇಟರ್‌ಗಳು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ನಿರ್ವಹಿಸುವುದಿಲ್ಲ" ಎಂದೂ ಆ ಮಹಿಳೆ ಹೇಳಿದ್ದಾರೆ. 

ಇದನ್ನೂ ಓದಿ: ಆರ್ಡರ್‌ ಮಾಡಿದ್ದ ಸೂಪ್‌ನಲ್ಲಿ ದಂಪತಿಗೆ ಸಿಕ್ತು ಇಲಿ: ವಿಡಿಯೋ ವೈರಲ್

click me!