22 ಹಾವು, ಹಲ್ಲಿಗಳನ್ನ ತುಂಬಿಕೊಂಡು ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದ ಮಹಿಳೆ ಅಂದರ್

By Anusha Kb  |  First Published May 4, 2023, 2:46 PM IST

ಹಾವು ಹಲ್ಲಿಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಮಲೇಷ್ಯಾದ ಕೌಲಾಲಂಪುರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯೊಬ್ಬರನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.


ಹಾವು ಹಲ್ಲಿಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಮಲೇಷ್ಯಾದ ಕೌಲಾಲಂಪುರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯೊಬ್ಬರನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆ 22 ಹಾವು ಹಾಗೂ ಹಲ್ಲಿ ಊಸರವಳ್ಳಿಗಳನ್ನು ಒಂದೇ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ತಂದಿದ್ದಳು. ಇದು ಕೌಲಾಲಂಪುರದ  ವಿಮಾನ ನಿಲ್ದಾಣದ ಸ್ಕ್ಯಾನರ್‌ನಲ್ಲಿಯೂ  ಕಾಣಿಸದೇ ಇದ್ದಿದ್ದು ಅಚ್ಚರಿ ಮೂಡಿಸಿದೆ. 

ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಣೆಯಾಗಿ ಬಂದಂತಹ ಚಿನ್ನ ಚಿನ್ನದ ಬಿಸ್ಕೆಟ್, ಪೇಸ್ಟ್‌ ಆಗಾಗ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಬೀಳುತ್ತದೆ.  ಇನ್ನು ವಿದೇಶಕ್ಕೆ ಹೋದವರು ಸ್ವದೇಶಕ್ಕೆ ಮರಳುವಾಗ ಅಲ್ಲಿನ ಚಾಕೋಲೇಟ್ ಪರ್ಫ್ಯೂಮ್  ಮುಂತಾದವುಗಳನ್ನು ತೆಗೆದುಕೊಂಡು ಬರುವುದನ್ನು ನೀವು ನೋಡಿರಬಹುದು. ಆದರೆ ಈ ಮಹಿಳೆ  ಒಂದೆರಡಲ್ಲ ಬರೋಬ್ಬರಿ 22 ಹಾವುಗಳನ್ನು ಹಿಡಿದು ಬ್ಯಾಗ್‌ಗೆ ತುಂಬಿಕೊಂಡು ಬಂದಿದ್ದಾಳೆ. ಈಕೆಯ ಈ ನಡೆಯಿಂದ ಚೆನ್ನೈನಲ್ಲಿ ಏರ್‌ಪೋರ್ಟ್‌ ಸಿಬ್ಬಂದಿಯೇ ಬೆಚ್ಚಿ ಬಿದ್ದಿದ್ದು, ವಿಮಾನ ನಿಲ್ದಾಣಕ್ಕೆ ಹಾವು ಹಿಡಿಯುವವರನ್ನು ಕರೆಸಿದ್ದಾರೆ.

Tap to resize

Latest Videos

Bengaluru: ಮಕ್ಕಳನ್ನು ಕದ್ದು ನಿದ್ದೆ ಮಾತ್ರೆ ನೀಡಿ ಭಿಕ್ಷಾಟನೆಗೆ ಬಳಕೆ: ಬಾಡಿಗೆ ಆಧಾರದಲ್ಲಿ ಮಹಿಳೆಯರ ಭಿಕ್ಷೆ

ವಿಮಾನದಲ್ಲಿ ಈ ಹಾವುಗಳು ಹೊರಗೆ ಬಂದಿಲ್ಲ ಅನ್ನೋದೇ ದೊಡ್ಡ ಪುಣ್ಯ.  ಒಂದು ಹಾವು ಕಾಣಿಸಿಕೊಂಡ್ರೆನೇ ನಾವೆಲ್ಲಾ ಹಾರಿ ಬಿದ್ದು, ಆ ಜಾಗದಿಂದ ಓಡಲು ನೋಡ್ತೇವೆ. ಆದರೆ ಈಕೆ ಅಷ್ಟೊಂದು ಹಾವನ್ನು ಚೆನ್ನಾಗಿ ಪ್ಯಾಕ್ ಮಾಡಿ  ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಚೆನ್ನೆಗೆ ಬಂದಿದ್ದು ಅಚ್ಚರಿ ಮೂಡಿಸಿದೆ. ಆದರೆ ಚೆನ್ನೈ ನಿಲ್ದಾಣದಲ್ಲಿ ಈಕೆಯ ಆಟ ನಡೆದಿಲ್ಲ. 

ಏಪ್ರಿಲ್ 28 ರಂದು ಈ ಘಟನೆ ನಡೆದಿದ್ದು, ಚೆನ್ನೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಫೋಟೋ ಸಮೇತ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.   ಕೌಲಾಲಂಪುರ ವಿಮಾನ ನಿಲ್ದಾಣದ ಸೆಕ್ಯೂರಿಟಿ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಮಹಿಳೆಯೊಬ್ಬಳು 22 ಹಾವುಗಳು ಹಾಗೂ ಊಸರವಳ್ಳಿಗಳನ್ನು ಬ್ಯಾಗ್‌ನಲ್ಲಿ ತುಂಬಿಸಿ ಕಳ್ಳಸಾಗಣೆ ಮಾಡಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai International Airport) ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈಕೆ ಕೌಲಾಲಂಪುರದಿಂದ (Kualalampur)  AK13 ವಿಮಾನದಲ್ಲಿ  ಬಂದಿದ್ದಳು. ಆಕೆಯ ಬಳಿ ಇದ್ದ ಬ್ಯಾಗೊಂದನ್ನು ಪರಿಶೀಲಿಸಿದಾಗ ಹಾವುಗಳು ಕಾಣಿಸಿಕೊಂಡಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, 1962ರ ಕಸ್ಟಮ್ಸ್ ಕಾಯ್ದೆ ಹಾಗೂ 1972ರ ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ  ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಟ್ವಿಟ್ ಮಾಡಲಾಗಿದೆ. 

18 ದಿನಗಳಲ್ಲಿ ಕೋಟಿ ಮೌಲ್ಯದ ಚಿನ್ನ ವಶ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚಿದ ಗೋಲ್ಡ್ ಸ್ಮಗ್ಲಿಂಗ್!

ಸರೀಸೃಪಗಳ ಸಂಖ್ಯೆ ಅಧಿಕವಾಗಿದ್ದರಿಂದ  ಯಾರೂ ನಿಭಾಯಿಸಲು ಸಾಧ್ಯವಾಗದ ಕಾರಣ ಅಧಿಕಾರಿಗಳು ಹಾವು ಹಿಡಿಯುವವರನ್ನು ಕರೆಯಬೇಕಾಯಿತು ಎಂದು ವರದಿಗಳು ತಿಳಿಸಿವೆ. ವಿಮಾನ ನಿಲ್ದಾಣದ ಸಿಬ್ಬಂದಿ ಹಾವುಗಳನ್ನು ಸುರಕ್ಷಿತ ಪೆಟ್ಟಿಗೆಗಳಿಗೆ ವರ್ಗಾಯಿಸುವ ಮೊದಲು ಹಾವುಗಳನ್ನು ಹಿಡಿಯಲು ಕೊಕ್ಕೆ ಮತ್ತು ಸ್ಕೂಪ್ ಅನ್ನು ಬಳಸುವ ದೃಶ್ಯಾವಳಿ ವೈರಲ್ ಆಗಿದೆ.

On 28.04.23, a female pax who arrived from Kuala Lumpur by Flight No. AK13 was intercepted by Customs.
On examination of her checked-in baggage, 22 Snakes of various species and a Chameleon were found & seized under the Customs Act, 1962 r/w Wildlife Protection act, 1972 pic.twitter.com/uP5zSYyrLS

— Chennai Customs (@ChennaiCustoms)

 

click me!