ಅಂದು ನೀವು ಕೊಟ್ಟಿದ್ರಿ.. ಇಂದು ನಾವು ಕೊಡ್ತೆವೆ.. ಕೊರೋನಾ ನೆರವಿಗೆ ಮುಂದೆ ಬಂದ ಚೀನಾ

By Suvarna NewsFirst Published Apr 23, 2021, 11:20 PM IST
Highlights

ಭಾರತದಲ್ಲಿ ಕೊರೋನಾ ಅಬ್ಬರ/ ನೆರವಿಗೆ ಬರುತ್ತೇನೆ ಎಂದ ಚೀನಾ/ ಕಳೆದ ವರ್ಷ ಭಾರತ  ನೆರವು ನೀಡಿತ್ತು/ ವೈದ್ಯಕೀಯ ಸಲಕರಣೆ ನೀಡುತ್ತೇವೆ

ಬೀಜಿಂಗ್( ಏ 23)  ಗಡಿ ವಿಚಾರದಲ್ಲಿ ಚೀನಾ ದಿನನಿತ್ಯ ಒಂದಲ್ಲಾ ಒಂದು ಕ್ಯಾತೆಯನ್ನು ತೆಗೆಯುತ್ತಲೇ ಬಂದಿದ್ದರೂ ಇದೀಗ ಕೊರೋನಾ ವಿಚಾರದಲ್ಲಿ ಸಹಾಯ ಮಾಡುತ್ತೇನೆ ಎಂದು ಬಂದಿದೆ.

ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟ ನಮಗೆ ಗೊತ್ತಿದೆ. ವೈದ್ಯಕೀಯ ಸರಬರಾಜುಗಳ ತಾತ್ಕಾಲಿಕ ಕೊರತೆ  ನಿವಾರಣೆ ಜತೆಗೆ ಉಳಿದ ನೆರವು ನೀಡಲು ಸಿದ್ಧರಿದ್ಧೇವೆ ಎಂದು ಆಹ್ವಾನ ಕೊಟ್ಟಿದೆ.

ಭಾರತಕ್ಕೆ ಪಾಕಿಸ್ತಾನದಿಂದ ಆಂಬುಲೆನ್ಸ್  ನೆರವು

2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನ ಭಾರತವೇ ಕಳುಹಿಸಿ ಕೊಟ್ಟಿತ್ತು. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್  ಮಾತನಾಡಿ, ಕೊರೋನಾ ಮನುಕುಲದ ಶತ್ರುವಾಗಿದ್ದು ಎಲ್ಲ ರಾಷ್ಟ್ರಗಳು ಒಂದಾಗಿ ಹೋರಾಟ ಮಾಡಬೇಕಿದೆ ಎಂದಿದ್ದಾರೆ.

kಳೆದ ವರ್ಷ, ಚೀನಾದಲ್ಲಿ COVID-19  ಅಬ್ಬರಿಸುತ್ತಿದ್ದಾಗ ಬೀಜಿಂಗ್‌ಗೆ ವೈದ್ಯಕೀಯ ಸಾಮಗ್ರಿಗಳೊಂದಿಗೆ ಸಹಾಯ ಮಾಡಿದ ದೇಶಗಳ ಪಟ್ಟಿಗೆ ಭಾರತ ಸೇರಿಕೊಂಡಿತ್ತು, ಮುಖವಾಡಗಳು, ಕೈಗವಸುಗಳು ಮತ್ತು ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ 15 ಟನ್  ವಸ್ತುಗಳನ್ನು ನೀಡಲಾಗಿತ್ತು.  ಫೆಬ್ರವರಿ 2020 ರಲ್ಲಿ ನೀಡಲಾಗಿತ್ತು. ಪಾಕಿಸ್ತಾನದ ಎದಿ ಫೌಂಡೇಶನ್ ಭಾರತದ ನೆರವಿಗೆ ನಿಲ್ಲುತ್ತೇನೆ ಎಂದು ಹೇಳಿತ್ತು.

click me!