
ಡೆಹ್ರಾಡೂನ್, (ಏ.23): ಉತ್ತರಾಖಂಡ್‌ನಲ್ಲಿ ಮತ್ತೆ ಹಿಮಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಋಷಿಗಂಗಾದಲ್ಲಿ ಏಕಾಏಕಿ ಪ್ರವಾಹದಲ್ಲಿ ಏರಿಕೆಯಾಗಿದೆ.
ಇಂಡೋ-ಚೀನಾ ಗಡಿಯ ಭಾಗದಲ್ಲಿರುವ ಜೋಷಿಮಠ್ ಬಳಿ ಘಟನೆ ಸಂಭವಿಸಿದ್ದು, ಗಂಗಾನದಿಯಲ್ಲಿ ಎರಡು ಅಡಿ ನೀರು ಏರಿಕೆಯಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ.
ಉತ್ತರಖಂಡ ಹಿಮಸ್ಫೋಟ; ಕೊಚ್ಚಿ ಹೋದ ಸೇತವೆಯನ್ನು 8 ದಿನದಲ್ಲಿ ನಿರ್ಮಿಸಿದ ಸೇನೆ!
ಈ ಕುರಿತು ಗಡಿ ರಸ್ತೆ ಕಾರ್ಯಪಡೆಯ ಕಮಾಂಡರ್ ಕರ್ನಲ್ ಮನೀಶ್ ಕಪಿಲ್ ಮಾಹಿತಿ ನೀಡಿದ್ದು, 'ಚಮೋಲಿ ಜಿಲ್ಲೆಯ ಜೋಶಿಮಠ ಬಳಿ ಭಾರತ-ಚೀನಾ ಗಡಿಯಲ್ಲಿ ದೊಡ್ಡ ಹಿಮನದಿ ಸ್ಫೋಟಗೊಂಡಿದೆ. ಈ ಹಿಮನದಿ ಐಟಿಬಿಪಿಯ 8 ಬಿಎನ್ ಪೋಸ್ಟ್ ಬಳಿ ಮಲಾರಿ ಮತ್ತು ಸುಮ್ನಾ ನಡುವೆ ಸ್ಫೋಟಗೊಂಡಿದೆ. ಇದು ತುಂಬಾ ದೊಡ್ಡದಾಗಿದ್ದು, ಇದರಿಂದಾಗಿ ದೊಡ್ಡ ಅಪಘಾತವೂ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.
ಆದ್ರೆ, ಇದುವರೆಗೂ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟದ ಬಗ್ಗೆ ವರದಿಯಾಗಿಲ್ಲ. ಸುದ್ದಿ ತಿಳಿದು, ಐಟಿಬಿಪಿ ಯೋಧರು ಜಾಗರೂಕರಾಗಿದ್ದಾರೆ ಮತ್ತು ತಗ್ಗು ಪ್ರದೇಶಗಳ ಮೇಲೆ ನಿಗಾ ಇಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ