ಭೂತಾನ್‌ನಲ್ಲಿ ಚೀನಾ ಡೋಕ್ಲಾಂ ಕಿರಿಕ್: ಭಾರತದ ಭದ್ರತೆಗೆ ಅಪಾಯ!

Published : Jan 13, 2022, 08:39 AM IST
ಭೂತಾನ್‌ನಲ್ಲಿ ಚೀನಾ ಡೋಕ್ಲಾಂ ಕಿರಿಕ್: ಭಾರತದ ಭದ್ರತೆಗೆ ಅಪಾಯ!

ಸಾರಾಂಶ

* ಡೋಕ್ಲಾಂ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ ಈ ಕುತಂತ್ರ * ಭೂತಾನ್‌ ಗಡಿಯಲ್ಲಿ ಚೀನಾ ಕಾಮಗಾರಿ: ಭಾರತಕ್ಕೆ ಆಪತ್ತು * 2 ಅಂತಸ್ತಿನ ಕಟ್ಟಡ ಸೇರಿ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ

ನವದೆಹಲಿ(ಜ.13): ವಿವಾದಿತ ಭೂತಾನ್‌ ಗಡಿ ಪ್ರದೇಶದ 6 ಕಡೆಗಳಲ್ಲಿ 2 ಅಂತಸ್ತಿನ ಕಟ್ಟಡಗಳು ಸೇರಿದಂತೆ ಒಟ್ಟಾರೆ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಚೀನಾ ಮತ್ತಷ್ಟುತ್ವರಿತಗೊಳಿಸಿದೆ. ಭೂತಾನ್‌ ಗಡಿಯಲ್ಲಿನ ಚೀನಾದ ಈ ಚಟುವಟಿಕೆಗಳನ್ನು ಖಚಿತಪಡಿಸುವ ಕ್ಯಾಪೆಲಾ ಸ್ಪೇಸ್‌ ಮತ್ತು ಪ್ಲಾನೆಟ್‌ ಲ್ಯಾಬ್ಸ್‌ನ ಉಪಗ್ರಹ ಫೋಟೋಗಳು ಅಮೆರಿಕದ ‘ಹಾಕ್‌ಐ360’ ದತ್ತಾಂಶ ವಿಶ್ಲೇಷಣಾ ಸಂಸ್ಥೆಗೆ ಲಭ್ಯವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚೀನಾದ ಈ ಅಭಿವೃದ್ಧಿ ಕಾಮಗಾರಿಗಳು 2017ರಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ 2 ತಿಂಗಳ ಶೀತಲ ಸಮರಕ್ಕೆ ಕಾರಣವಾಗಿದ್ದ ಡೋಕ್ಲಾಂ ಪ್ರದೇಶಕ್ಕೆ ಕೇವಲ 9 ರಿಂದ 27 ಕಿ.ಮೀ ಇದೆ. ಹೀಗಾಗಿ ಡೋಕ್ಲಾಂನ ಚಿಕನ್‌ ನೆಕ್‌ ಎಂದೇ ಖ್ಯಾತವಾಗಿರುವ ಪ್ರದೇಶದ ಮೇಲೆ ತನ್ನ ಸ್ವಾಮ್ಯ ಸಾಧಿಸಲು ಚೀನಾ ಈ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಭೂತಾನ್‌ನ ಪಶ್ಚಿಮ ಗಡಿಯ ಕೆಲವು ಸ್ಥಳಗಳಲ್ಲಿ ರಸ್ತೆ ಮತ್ತು ರೈಲು ಹಳಿಗಳು ನಿರ್ಮಾಣ ಮತ್ತು ಸ್ಥಳಗಳ ಶುಚೀಕರಣಗಳ ಮೂಲಕ ಚೀನಾ ನಿರ್ಮಾಣ ಕಾಮಗಾರಿ ಚಟುವಟಿಕೆಗಳನ್ನು 2020ರಿಂದಲೇ ಆರಂಭಿಸಿದ್ದು, 2021ರಲ್ಲಿ ಈ ಕಾಮಗಾರಿಗಳಿಗೆ ಹೆಚ್ಚು ಚುರುಕು ನೀಡಿರುವುದು ಉಪಗ್ರಹ ಫೋಟೋಗಳಿಂದ ದೃಢಪಟ್ಟಿದೆ. ಅಲ್ಲದೆ ಈ ಬಗ್ಗೆ ಅಧ್ಯಯನ ನಡೆಸಿದ ಇತರೆ ಇಬ್ಬರು ತಜ್ಞರು, ಚೀನಾ ಕೈಗೊಂಡಿರುವ ಕಾಮಗಾರಿಗಳು ಭೂತಾನ್‌ ಮತ್ತು ಚೀನಾ ಮಧ್ಯೆ ವಿವಾದಕ್ಕೆ ಕಾರಣವಾದ ಸುಮಾರು 110 ಚದರ ಕಿ.ಮೀ ವ್ಯಾಪ್ತಿಯ ಭಾಗದಲ್ಲೇ ಇವೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ