
ಲಡಾಖ್(ಜು.16); ಚೀನಾ ಖ್ಯಾತೆ, ಲಡಾಖ್ ಗಡಿ ಸಂಘರ್ಷದಿಂದ ಉದ್ಭವವಾಗಿದ್ದ ಯುದ್ಧದ ವಾತಾವರಣವನ್ನು ಶಮನಗೊಳಿಸಲು ಭಾರತ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಜುಲೈ 14 ರಂದು ನಾಲ್ಕನೇ ಸುತ್ತಿನ ಸೇನಾ ಮಾತುಕತೆ ನಡೆದಿದೆ. ಭಾರತೀಯ ಸೇನೆ ಹಾಗೂ ಚೀನಾ ಸೇನೆ ಮಹತ್ವದ ಮಾತುಕತೆ ನಡೆಸಿದೆ. ಭಾರತದ ಚುಸುಲ್ ವಲಯದಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ.
ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಅವಮಾನ; ತಪ್ಪು ಮುಚ್ಚಿಡಲು ಚೀನಾ ಯತ್ನ!.
ಲಡಾಖ್ ಗಡಿಯಲ್ಲಿ ಚೀನಾ ಹೆಚ್ಚುವರಿ ಸೇನೆ, ಶಸ್ತ್ರಾಸ್ತ್ರ ಜಮಾವಣೆ, ಯುದ್ದ ವಿಮಾನ, ಟ್ಯಾಂಕರ್‌ಗಳನ್ನು ನಿಲ್ಲಿಸಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಗಡಿಯಲ್ಲಿ ಚೀನಾ ಸೇನೆ ತನ್ನ ಎಲ್ಲಾ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಭಾರತೀಯ ಸೇನೆ ಮಾತುಕತೆ ವೇಳೆ ಚೀನಾ ಸೇನಾಧಿಕಾರಿಗೆ ಸೂಚಿಸಿದೆ.
ಗಡಿಯ 3 ಸ್ಥಳದಿಂದ ಚೀನಾ ವಾಪಸ್: ಇನ್ನೊಂದೇ ಬಾಕಿ!
ಈ ಮಾತುಕತೆಯಲ್ಲಿ ಭಾರತ ಹಾಗೂ ಚೀನಾ ಎರಡು ದೇಶಗಳು ಗಡಿಯಲ್ಲಿನ ಕಾರ್ಯಚಟುವಟಿಕೆ ನಿಲ್ಲಿಸಲು ಒಪ್ಪಿವೆ. ಆದರೆ ಚೀನಾ ಹಿಂಬಾಗಿಲ ಮೂಲಕ ಕಸರಸತ್ತು ನಡೆಸುತ್ತದೆ. ಇದೇ ಕಾರಣ ಈ ಘರ್ಷಣೆ ನಡೆದಿದೆ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಹಿರಿಯ ಕಮಾಂಡರ್ ಗಡಿಯ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಇಷ್ಟೇ ಅಲ್ಲ, ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆ ಮುಂದುವರಿಸಲು ಭಾರತ ಒತ್ತಾಯಿಸಿದೆ.
ಪ್ಯಾಂಗಾಂಗ್ ಸರೋವರದ ಗಡಿಯಿಂದ ಚೀನಾ ಸೇನೆ ಹಿಂದೆ ಸರಿಯುವುದಾಗಿ ಜುಲೈ 4 ರಂದು ನಡೆದ ಮಿಲಿಟರಿ ಮಾತುಕತೆಯಲ್ಲಿ ಹೇಳಿತ್ತು. ಆದರೆ ಚೀನಾ ಸೇನೆ ಹಿಂದೆ ಸರಿದಿಲ್ಲ. ಈ ಕುರಿತು ಇತ್ತೀಚೆಗಿನ ಮಾತುಕತೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. 4 ಗಡಿ ವಲಯದಲ್ಲಿ ಚೀನಾ ಸೇನೆ ಅತಿಕ್ರಮಣ, ಯುದ್ಧದ ಭೀತಿ ಸೃಷ್ಟಿಸುತ್ತಿದೆ. ಮಾತುಕತೆಯಲ್ಲಿ ಹೇಳಿದ ಹಾಗೇ ಚೀನಾ ಮಾಡುತ್ತಿಲ್ಲ. ಹೀಗಾಗಿ ಪರಿಣಾಮ ಎದುರಿಸಬೇಕಾದಿತು ಎಂದು ಭಾರತೀಯ ಸೇನೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ