ಮಂತ್ರಿ ಮಗನ ಪ್ರಶ್ನೆ ಮಾಡಿದ್ದ ಸುನೀತಾಗೆ ಪೊಲೀಸ್ ಭದ್ರತೆ

By Suvarna NewsFirst Published Jul 16, 2020, 6:13 PM IST
Highlights

ಮಾಸ್ಕ್ ಹಾಕದ ಮಿನಿಸ್ಟರ್ ಮಗನ ತಡೆದಿದ್ದ ಮಹಿಳಾ ಸಿಬ್ಬಂದಿ/ ಪ್ರಾಣ ಬೆದರಿಕೆ ಹಿನ್ನೆಲೆ ಸುನೀತಾ ಯಾದವ್ ಗೆ ಪೊಲೀಸ್ ಭದ್ರತೆ/ ಸಚಿವರ ಮಗನ ವಿರುದ್ಧ ದೂರು ದಾಖಲಿಸಿದ ಎನ್‌ಸಿಪಿ

ಅಹಮದಾಬಾದ್(ಜು.  16)  ಮಾಸ್ಕ್ ಧರಿಸದೇ ಕೊರೋನಾ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಗುಜರಾತ್ ಸಚಿವರೊಬ್ಬರ ಪುತ್ರನ ತಡೆದಿದ್ದಕ್ಕೆ ಈ ಮಹಿಳಾ ಪೊಲೀಸ್ ಸಿಬ್ಬಂದಿ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂದಿತ್ತು. ಇದೀಗ  ಮಹಿಳಾ ಸಿಬ್ಬಂದಿ ಸುನೀತಾ ಯಾದವ್ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ಸಿಬ್ಬಂದಿ ಮೇಲೆ ದೌರ್ಜನ್ಯ ಮಾಡಿದ ಮಂತ್ರಿ ಮಗನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)  ಪೊಲೀಸ್ ದೂರು ನೀಡಿದೆ. ಕಳೆದ ಬುಧವಾರ ರಾತ್ರಿ 10.30  ರ ವೇಳೆ ಸೂರತ್ ನಲ್ಲಿ ಸಚಿವರ ಪುತ್ರನನ್ನು ಸಿಬ್ಬಂದಿ ಪ್ರಶ್ನೆ ಮಾಡಿದ್ದರು.  ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಮಂತ್ರಿ ಮಗನನನ್ನು ಸಿಬ್ಬಂದಿ ಪ್ರಶ್ನೆ ಮಾಡಿದ್ದರು.

ಅತ್ಯಾಚಾರ ಆರೋಪಿಯಿಂದ ಲಂಚ ಪಡೆದ ಮಹಿಳಾ ಪಿಎಸ್‌ಐ

ಪ್ರಶ್ನೆ ಮಾಡಿದ ಕಾನ್ಸ್ಟೇಬಲ್ ಸುನೀತಾ ಯಾದವ್ ಗೆ ಸಚಿವರ ಪುತ್ರ ಧಮ್ಕಿ ಹಾಕಿದ್ದ. ಸುನೀತಾ ಮೇಲಿನ ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳದೆ ಸಿಬ್ಬಂದಿಯಿಂದಲೇ  ರಾಜೀನಾಮೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಗುಜರಾತ್ ಆರೋಗ್ಯ ಸಚಿವ ಕುಮಾರ್ ಕನಾನಿಯ ಪುತ್ರ ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿ ಸುನೀತಾ ನಡುವೆ ನಡೆದ ವಾಗ್ವಾದದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  

click me!