ಚೀನಿಯರಿಂದ ಮತ್ತೆ ರಾಡ್‌ ರೌಡಿಸಂ: ಒಪ್ಪಂದದ ಉಲ್ಲಂಘನೆ ಸ್ಪಷ್ಟ!

By Kannadaprabha NewsFirst Published Jun 27, 2020, 8:00 AM IST
Highlights

ಚೀನಿಯರಿಂದ ಮತ್ತೆ ರಾಡ್‌ ರೌಡಿಸಂ| ಅರುಣಾಚಲ ಪ್ರದೇಶ ಗಡಿಯಲ್ಲಿ ರಾಡ್‌ ಹೊತ್ತ ಸೈನಿಕರು| ಗಡಿಯಲ್ಲಿ ಶಸ್ತಾ್ರಸ್ತ್ರ ಹೊಂದುವಂತಿಲ್ಲ ಎಂಬ ಒಪ್ಪಂದದ ಉಲ್ಲಂಘನೆ ಸ್ಪಷ್ಟ

ನವದೆಹಲಿ(ಜೂ.27): ಇತ್ತೀಚೆಗೆ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಕಬ್ಬಿಣದ ರಾಡ್‌ನಿಂದ 20 ಭಾರತೀಯ ಯೋಧರ ಹತ್ಯೆ ಮಾಡಿದ್ದ ಚೀನಿ ಯೋಧರು, ಇದೀಗ ಅರುಣಾಚಲಪ್ರದೇಶ ಗಡಿಯಲ್ಲೂ ಇದೇ ರೀತಿಯ ದಾಳಿಗೆ ಸಜ್ಜಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್‌: ಚೀನಾಕ್ಕೆ ಭಾರತದ ಕಟು ಎಚ್ಚರಿಕೆ!

ಇತ್ತೀಚೆಗೆ ಅರುಣಾಚಲ ಪ್ರದೇಶ ಕಮೆಂಗ್‌ ವಲಯದಲ್ಲಿ ಭಾರತೀಯ ಯೋಧರಿಗೆ ಚೀನಾ ಯೋಧರು ಮುಖಾಮುಖಿಯಾದ ವೇಳೆ, ಚೀನಿಯ ಯೋಧರ ಬ್ಯಾಕ್‌ಪ್ಯಾಕ್‌ನಲ್ಲಿ ಕಬ್ಬಿಣದ ರಾಡ್‌ಗಳು ಪತ್ತೆಯಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇದರಿಂದಾಗಿ ತಾವು ಗಡಿಯಲ್ಲಿ ಯಾವುದೇ ಶಸ್ತಾ್ರಸ್ತ್ರ ಹಿಡಿದು ತಿರುಗಾಡಲ್ಲ. ಭಾರತದ ಯೋಧರೇ ಜಗಳ ಕಾಯುತ್ತಾರೆ ಎಂಬ ಚೀನಾ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ.

'ಚೀನಾ ವಸ್ತು ಬಾಯ್ಕಾಟ್ ಮಾಡಿ': ಗಡಿಯತ್ತ ಹೊರಟು ನಿಂತ ಯೋಧ ಹೇಳಿದ್ದಿಷ್ಟು

ಭಾರತ-ಚೀನಾ ಒಪ್ಪಂದದ ಪ್ರಕಾರ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಯಾವುದೇ ಶಸ್ತ್ರಗಳನ್ನು ಬಳಸುವಂತಿಲ್ಲ. ಆದರೆ ಈ ಒಪ್ಪಂದವನ್ನು ಯೋಧರು ಮುರಿದಿದ್ದಾರೆ. ಇದಕ್ಕೆ ಕಾರಣರಾದ ಕಮಾಂಡರ್‌ಗಳ ವಿರುದ್ಧ ಚೀನಾ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಭಾರತದ ಅಧಿಕಾರಿಗಳು ಆಗ್ರಹಿಸಿದ್ದಾರೆ.

click me!