ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ/ ಕಲ್ಲಿನ ಕೆತ್ತನೆಗಳ ಸ್ವಚ್ಛತಾ ಕಾರ್ಯ ಆರಂಭ/ ದೆಹಲಿಯಿಂದ ಆಗಮಿಸಿರುವ ತಂಡ/ 90 ದಶಕದಿಂದಲೂ ಮಾಡಿಟ್ಟಿರುವ ಕೆತ್ತನೆ
ಅಯೋಧ್ಯಾ (ಜೂ. 26) ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ದೆಹಲಿಯಿಂದ ಆಗಮಿಸಸಿರುವ 15 ಜನರ ತಂಡ ರಾಮಮಂದಿರಕ್ಕಾಗಿ ಕೆತ್ತನೆ ಮಾಡಿಟ್ಟಿರುವ ಕಲ್ಲುಗಳ ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದೆ.
90 ರ ದಶಕದಿಂದಲೂ ಕೆತ್ತನೆ ಮಾಡಿರುವ ಕಲ್ಲುಗಳು ಇಲ್ಲಿಯೇ ಇದ್ದವು. ಬಾಬ್ರಿ ಮಸೀದಿ ಧ್ವಂಸಕ್ಕೂ ಎರಡು ವರ್ಷ ಮುನ್ನವೇ ಕಲ್ಲುಗಳ ಕೆತ್ತನೆ ಆರಂಭವಾಗಿತ್ತು.
undefined
ಕಲ್ಲುಗಳನ್ನು ಗುಜರಾತ್ ನಿಂದ ಅಯೋಧ್ಯೆಗೆ ತರಲಾಗಿತ್ತು. ಸಂಜಯ್ ಜೇಡಿಯಾ ಎನ್ನುವವರು ಈ ಕಲ್ಲುಗಳ ಸ್ವಚ್ಛತೆ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಕಲ್ಲುಗಳೂ ಹೊಳಪಿಗೆ ಬರಲು ಸುಮಾರು ನಾಲ್ಕು ತಿಂಗಳು ಹಿಡಿಯಬಹುದು ಎಂದು ಅವರು ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣವಾದ ಮೇಲೆ ಹೇಗಿರಲಿದೆ?
ಬಿಜೆಪಿ ಹೊರತುಪಡಿಸಿ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸರ್ಕಾರ ಇದ್ದಾಗಲೂ ಕೆಲಸ ನಡೆದೇ ಇತ್ತು. ರಾಮಜನ್ಮಭೂಮಿ ಮಹಾತೀರ್ಪಿಗೆ ಒಂದು ತಿಂಗಳು ಇರುವಾಗ ಕೆಲಸ ನಿಲ್ಲಿಸಲಾಗಿತ್ತು ಎಂದು ರಾಮಜನ್ಮಭೂಮಿ ಟ್ರಸ್ಟ್ ನ ತ್ರಿಲೋಕಿನಾಥ್ ಪಾಂಡೆ ತಿಳಿಸುತ್ತಾರೆ.
ದಶಕಗಳ ಕಾಲ ವಿಚಾರಣೆ ನಡೆದಿದ್ದ ಅಯೋಧ್ಯೆ ರಾಮಜನ್ಮಭೂಮಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ಮಹಾತೀರ್ಪು ನೀಡಿತ್ತು.