ಸತತ 10 ಗಂಟೆ ಕಾರ್ಯಾಚರಣೆಯಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದ ಮಗುವಿನ ರಕ್ಷಣೆ, ವಿಡಿಯೋ

Published : May 16, 2026, 12:20 PM IST
Borewell Rescue ANI

ಸಾರಾಂಶ

ಪುಟ್ಟ ಮಗು 300 ಅಡಿ ಆಳದ ಬೋರ್‌ವೆಲ್ ಬಿದ್ದ ಪರಿಣಾಮ ರಕ್ಷಣಾ ತಂಡಗಳು ಸತತ 10 ಗಂಟೆ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗು ರಕ್ಷಿಸಿದೆ. ಮಗುವನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರ್ಯಾಚರಣೆ ಹಾಗೂ ರಕ್ಷಣೆ ವಿಡಿಯೋ ಇಲ್ಲಿದೆ. 

ಹೋಶಿಯಾರ್‌ಪುರ್ (ಮೇ.16) ಭಾರತದಲ್ಲಿ ಪದೇ ಪದೇ ಬೋರ್‌ವೆಲ್ ದುರಂತಗಳು ನಡೆಯುತ್ತಲೇ ಇದೆ. ಈ ಪೈಕಿ ಕೆಲವೇ ಕೆಲವು ಕಾರ್ಯಾಚರಣೆಗಳು ಯಶಸ್ವಿಯಾಗಿದೆ. ಇದೀಗ ಪಂಜಾಬ್‌ನ ಹೊಶಿಯಾರ್‌ಪುರದಲ್ಲಿ ಮೂರು ವರ್ಷದ ಬಾಲಕ ಅಚಾನಕ್ಕಾಗಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಕುಟುಂಬಸ್ಥರು ಮಗನ ರಕ್ಷಣೆಗಾಗಿ ಕೂಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಕ್ಯಾಮೆರಾ, ಆಮ್ಲಜನಕ ಪೈಪ್‌ಗಳನ್ನು ಬೋರ್‌ವೆಲ್ ಒಳಕ್ಕೆ ನೀಡಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಮೂರು ವರ್ಷದ ಬಾಲಕನ ರಕ್ಷಣೆ ಮಾಡುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿದೆ.

90 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕ

ಶುಕ್ರವಾರ ಸಂಜೆ 4 ಗಂಟೆಗೆ 3 ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಭೂಮಿಯಿಂದ 90 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದ. ಪೋಷಕರು ನೆರವಿಗಾಗಿ ಕೂಗಿದ್ದಾರೆ. ಸ್ಥಳೀಯರು ಆಗಮಿಸಿದ್ದಾರೆ. ತಕ್ಷಣವೆ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿದೆ. ಎನ್‌ಡಿಆರ್‌ಏಫ್, ಎಸ್‌ಡಿಆರ್‌ಎಫ್, ಸ್ಥಳೀಯರು, ಜಿಲ್ಲಾಡಳಿತ, ಎನ್‌ಜಿಒ ಸೇರಿದಂತೆ ದೊಡ್ಡ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಜೆಸಿಬಿ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಇತ್ತ ಪೋಷಕರು ಮಗನ ರಕ್ಷಣೆಗಾಗಿ ಅಂಗಲಾಚುತ್ತಿದ್ದರೆ, ಇತ್ತ ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿ ಆತಂತಗಳು ಎದುರಾಗಿತ್ತು. ಒಂದೊಂದು ಗಂಟೆಗಳು ಉರುಳುತ್ತಿದ್ದಂತೆ ಪೋಷಕರು ಅಸ್ವಸ್ಥರಾಗಿದ್ದರು. ಆದರೆ ಮಗನ ರಕ್ಷಣೆಗಾಗಿ ಎದುರುನೋಡುತ್ತಾ ದೇವರ ಪ್ರಾರ್ಥಿಸುತ್ತಿದ್ದರು. ಇತ್ತ ರಕ್ಷಣಾ ತಂಡಗಳು ನಿರಂತರ 10 ಗಂಟೆ ಕಾರ್ಯಾಚರಣೆ ಮಾಡಿ 90 ಅಡಿ ಆಳಕ್ಕೆ ತೆರಳಿದೆ. ಬಳಿಕ ರಕ್ಷಣಾ ತಂಡಗಳು ಯಶಸ್ವಿಯಾಗಿದೆ.

 

 

ಬಾಲಕನ ಆಸ್ಪತ್ರೆ ದಾಖಳಿಸಿದ ತಂಡ

90 ಅಡಿ ಆಳದಿಂದ ಬಾಲಕನ ರಕ್ಷಣೆ ಮಾಡಿದ ತಂಡಗಳು ತಕ್ಷಣವೆ ಸ್ಥಳದಲ್ಲಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಸದ್ಯ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಗು ರಕ್ಷಿಸಿದ ಇಡೀ ರಕ್ಷಣಾ ತಂಡಕ್ಕೆ ಪೋಷಕರು ಕೈಮುಗಿದು ಧನ್ಯವಾದ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಮತಾ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್! ಬಿಹಾರ ಸಚಿವನ ಹೇಳಿಕೆ ವೈರಲ್!
ಲಿಫ್ಟ್ ಬಳಿ ಡಿಕ್ಕಿ, ಕ್ಷಮೆ ಕೇಳಿದ್ರೂ ಕೆನ್ನೆಗೆ ಬಾರಿಸಿದ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ!