ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಪುಣೆ ಪ್ರೊಫೆಸರ್! ಮರು ಪರೀಕ್ಷೆ ಯಾವಾಗ? ಇಲ್ಲಿದೆ ದಿನಾಂಕ

Kannadaprabha News   | Kannada Prabha
Published : May 16, 2026, 06:12 AM IST
NEET Paper Leak Pune Professor Identified as Mastermind Re Exam Date Announced

ಸಾರಾಂಶ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಮಹಾರಾಷ್ಟ್ರದ ಲಾತೂರು ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿಯನ್ನು ಬಂಧಿಸಿದೆ. ಪ್ರಶ್ನೆಪತ್ರಿಕೆ ರೂಪಿಸುವ ತಂಡದಲ್ಲಿದ್ದ ಈತ, ಲಕ್ಷಾಂತರ ರೂಪಾಯಿ ಪಡೆದು ಪ್ರಶ್ನೆಗಳನ್ನು ಲೀಕ್ ಮಾಡಿದ್ದ ಸಿಬಿಐ ತನಿಖೆಯಿಂದ ಬಯಲು

ನವದೆಹಲಿ (ಮೇ.16): ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನು ಹತ್ತಿರುವ ಸಿಬಿಐ, ಮಹಾರಾಷ್ಟ್ರದ ಲಾತೂರು ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕನೊಬ್ಬನನ್ನು ಶುಕ್ರವಾರ ಬಂಧಿಸಿದೆ. ಈತ ಪ್ರಶ್ನೆಪತ್ರಿಕೆ ರೂಪಿಸುವ ತಂಡದಲ್ಲಿದ್ದು, ತನ್ನ ಮನೆಯಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪ್ರಶ್ನೆಗಳನ್ನು ಲೀಕ್‌ ಮಾಡಿದ್ದ ಎಂಬ ಆಘಾತಕಾರಿ ಮಾಹಿತಿಯನ್ನು ಬಯಲಿಗೆಳೆದಿದೆ.

ಪಿ.ವಿ. ಕುಲಕರ್ಣಿ ಬಂಧಿತ ಪ್ರಾಧ್ಯಾಪಕ. ಈತ ಹಲವು ವರ್ಷಗಳಿಂದ ನೀಟ್‌ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ. ಏಪ್ರಿಲ್‌ ಕೊನೆಯ ವಾರದಲ್ಲಿ ತನ್ನ ಮನೆಯಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಮೇ 3ರಂದು ನಡೆಯಲಿರುವ ಪರೀಕ್ಷೆಯ ಪ್ರಶ್ನೆ ಮತ್ತು ಉತ್ತರಗಳನ್ನು ತಿಳಿಸಿಕೊಟ್ಟಿದ್ದ. ಮೇ 14ರಂದು ಸಿಬಿಐನಿಂದ ಬಂಧಿಸಲ್ಪಟ್ಟ ಮತ್ತೊಬ್ಬ ಆರೋಪಿ ಮನೀಷಾ ವಾಘ್ಮೋರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದ. ವಿದ್ಯಾರ್ಥಿಗಳು ಇವರಿಗೆ ಲಕ್ಷಾಂತರ ರುಪಾಯಿಗಳನ್ನು ಪಾವತಿಸಿದ್ದರು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ ಹಲವೆಡೆ ಶೋಧ ನಡೆಸಿ, ಹತ್ತಾರು ದಾಖಲೆ, ಮೊಬೈಲ್‌ ಫೋನ್‌ಗಳು ಹಾಗೂ ಇತರ ಉಪಕರಣಗಳನ್ನು ವಶಕ್ಕೆ ಪಡೆದಿದೆ. ಈ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bhojshala Mosque verdict: ಭೋಜಶಾಲಾ ಮಸೀದಿ ಅಲ್ಲ, ಮಂದಿರ: ಮ.ಪ್ರ. ಹೈಕೋರ್ಟ್‌ ಮಹತ್ವದ ತೀರ್ಪು, ಹಿಂದುಗಳ ವಾದಕ್ಕೆ ಜಯ
CJI on unemployed youth: ಕೆಲ ನಿರುದ್ಯೋಗಿ ಯುವಕರು ಜಿರಳೆ ಇದ್ದಂತೆ: ಸಿಜೆಐ ಹೇಳಿಕೆಗೆ ದೇಶಾದ್ಯಂತ ಚರ್ಚೆ!