ಕಾಂಗ್ರೆಸ್ ನಾಯಕ ಧರ್ಮೇಂದ್ರ ರಾಥೋಡ್ ವಿರುದ್ಧ ಇಡಿ ಮತ್ತು ಆದಾಯ ತೆರಿಗೆ ಇಲಾಖೆ ನಡೆಸಿದ ರೇಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ "ಕೆಂಪು ಡೈರಿ" ಯನ್ನು ಇಟ್ಟುಕೊಂಡಿದ್ದೆ ಎಂದು ಮಾಧ್ಯಮದ ಎದುರು ಮಾತನಾಡುವಾಗ ರಾಜಸ್ಥಾನ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.
ಜೈಪುರ (ಜುಲೈ 24, 2023): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಮುನಿಸು ಹೈಕಮಾಂಡ್ ಆದೇಶದ ಮೇರೆಗೆ ತಣ್ಣಗಾಗಿದೆ. ಆದರೂ, ಅಲ್ಲಿನ ಕಾಂಗ್ರೆಸ್‌ನಲ್ಲಿ ಮತ್ತೊಂದು ಭಿನ್ನಮತ ಶುರುವಾಗಿದೆ. ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧವೇ ಅಲ್ಲಿನ ಶಾಸಕ ರಾಜೇಂದ್ರ ಗುಧಾ ತಿರುಗಿ ಬಿದ್ದಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಸಂಕಷ್ಟದಿಂದ ಪಾರು ಮಾಡಿದ್ದೇನೆ. ಆದರೆ ಸ್ವತಃ ವಿವರಿಸಲು ಅವಕಾಶ ನೀಡದೆ ನನ್ನನ್ನು ತೆಗೆದುಹಾಕಲಾಗಿದೆ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ರಾಜೇಂದ್ರ ಗುಧಾ ಭಾನುವಾರ ಹೇಳಿಕೊಂಡಿದ್ದಾರೆ. ಜುಂಜುನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾಜೇಂದ್ರ ಗುಧಾ ಇಲ್ಲದಿದ್ದರೆ ಮುಖ್ಯಮಂತ್ರಿ ಜೈಲಿನಲ್ಲಿರುತ್ತಿದ್ದರು.
ಇದನ್ನು ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಚಾಟ್ ಜಿಪಿಟಿ ಫಾರ್ಮುಲಾ: ತಮಿಳುನಾಡಲ್ಲಿ ಅಣ್ಣಾಮಲೈ ‘ಚೆನ್ನೈ ಎಕ್ಸ್‌ಪ್ರೆಸ್’ ರಾಜಕೀಯ!
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಧರ್ಮೇಂದ್ರ ರಾಥೋಡ್ ವಿರುದ್ಧ ಇಡಿ ಮತ್ತು ಆದಾಯ ತೆರಿಗೆ ಇಲಾಖೆ ನಡೆಸಿದ ರೇಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ "ಕೆಂಪು ಡೈರಿ" ಯನ್ನು ಇಟ್ಟುಕೊಂಡಿದ್ದೆ ಎಂದು ಮಾಧ್ಯಮದ ಎದುರು ಮಾತನಾಡುವಾಗ ಹೇಳಿದ್ದಾರೆ.
"ಮುಖ್ಯಮಂತ್ರಿ ಕರೆ ಮಾಡಿ, ಏನೇ ಆಗ್ಲಿ ‘’ಕೆಂಪು ಡೈರಿ’’ಯನ್ನು ಎತ್ತಿಟ್ಟುಕೊಳ್ಳುವಂತೆ ನನ್ನನ್ನು ಕೇಳಿದರು’’ ಎಂದು ಶಾಸಕರು ಹೇಳಿದರೂ ಆ ಡೈರಿಯಲ್ಲಿದ್ದ ವಿವರಗಳ ಬಗ್ಗೆ ಅವರು ಹೇಳಿಕೆ ನೀಡ್ಲಿಲ್ಲ. ಹಾಗೂ, ನೀವು ಡೈರಿಯನ್ನು ಸುಟ್ಟು ಹಾಕಿದ್ದೀರಾ ಎಂದು ಮುಖ್ಯಮಂತ್ರಿಗಳು ಪದೇ ಪದೇ ಕೇಳುತ್ತಿದ್ದರು ಮತ್ತು ಅದರಲ್ಲಿ ದೋಷಾರೋಪಣೆಯಿಲ್ಲದಿದ್ದರೆ ಸಿಎಂ ಹಾಗೆ ಮಾಡುತ್ತಿರಲಿಲ್ಲ ಎಂದೂ ಅವರು ಹೇಳಿದರು.
ಇದನ್ನೂ ಓದಿ: ರಾಜಸ್ಥಾನ ಸಿಎಂ ಹಾಗೂ ಪುತ್ರನಿಗೆ ಸಂಕಷ್ಟ: ಬಿಜೆಪಿ ಸಂಸದರಿಂದ ಇ.ಡಿ.ಗೆ ದೂರು
ಈ ಮಧ್ಯೆ, ಮಾಜಿ ಸಚಿವರ ಈ ಹೇಳಿಕೆ ಗುರಿಯಾಗಿಸಿ, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. "ರಾಜೇಂದ್ರ ಗುಧಾ ಅವರು ಕಾಂಗ್ರೆಸ್-ಗೆಹ್ಲೋಟ್ ಸರ್ಕಾರದ ಕಾಳ ಕೃತ್ಯಗಳನ್ನು ಒಳಗೊಂಡಿರುವ ರೆಡ್ ಡೈರಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. "ಭ್ರಷ್ಟಾಚಾರದ ಕರಾಳ ಕೃತ್ಯಗಳು ಮತ್ತು ಮಹಿಳಾ ದೌರ್ಜನ್ಯಗಳ ಬಗ್ಗೆ ಸತ್ಯ ತಿಳಿದವರು ಈಗ ಈ ಬಗ್ಗೆ ಉತ್ತರಿಸುತ್ತಾರೆಯೇ?" ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟ್ವೀಟ್ ಮಾಡಿದ್ದಾರೆ.
ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜೇಂದ್ರ ಗುಧಾ ಅವರನ್ನು ಶುಕ್ರವಾರ ಸಂಜೆ ವಜಾಗೊಳಿಸಲಾಗಿತ್ತು. ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿಷಯವಾಗಿ ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ವಿರುದ್ಧವೇ ಟೀಕೆ ಮಾಡಿದ ಬಳಿಕ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಸಹ ಬಿಜೆಪಿ ಟೀಕೆ ಮಾಡಿದ್ದು, ಸತ್ಯ ಹೇಳಿದ್ದಕ್ಕೆ ಶಿಕ್ಷೆ ನೀಡಿದೆ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಈ ರಾಜ್ಯದಲ್ಲಿ ಇನ್ಮುಂದೆ ಕೇವಲ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ಪಡೀಬಹುದು!