INX ಮೀಡಿಯಾ ಹಗರಣ ಪ್ರಕರಣದಲ್ಲಿ ಇಡಿ ಕುಣಿಕೆಗೆ ಸಿಲುಕಿದ್ದ ಮಾಜಿ ಹಣಕಾಸು ಸಚಿವ| ಕೊಂಚ ನೆಮ್ಮದಿ ಎನ್ನುವಷ್ಟರಲ್ಲಿ ಮತ್ತೆ ಚಿದು ಕೊರಳಿಗೆ ವಿಮಾನಯಾನ ಹಗರಣದ ಕುಣಿಕೆ
ನವದೆಹಲಿ[ಜ.04]: ಐಎನ್‌ಎಕ್ಸ್ ಹಾಗೂ ಏರ್‌ಸೆಲ್ ಮ್ಯಾಕ್ಸಿಸ್ ಹಗರಣ ಸಂಬಂಧ 100 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲಿನಲ್ಲಿದ್ದ, ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂಗೆ ಮತ್ತೊಂದು ಹಗರಣದ ಕಳಂಕ ಮೆತ್ತಿಕೊಳ್ಳುವ ಸಾಧ್ಯತೆ ಇದೆ. ಯುಪಿಎ ಅವಧಿಯಲ್ಲಿ ನಡೆದ ವಿಮಾನಯಾನ ಹಣಕಾಸು ಅವ್ಯವಹಾರಗಳ ಕುರಿತಂತೆ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ 6 ತಾಸು ವಿಚಾರಣೆಗೆ ಒಳಪಡಿಸಿದೆ.
ನಿಮಗೆ ವಾರ್ ಮಾಡುವುದು ಹೇಗೆಂದು ಹೇಳಿಕೊಟ್ಟರೆ..ರಾವತ್ ವಿರುದ್ಧ ಚಿದಂಬರಂ ವಾಗ್ದಾಳಿ!
undefined
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣದಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಚಿದಂಬರಂ ಉನ್ನತ ಮಟ್ಟದ ಸಚಿವರ ಸಮಿತಿ ಮುಖ್ಯಸ್ಥರಾಗಿದ್ದ ವೇಳೆ, ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಸಮಯ ನಿಗದಿ ಮಾಡಿದ ವಿಷಯ, 70000 ಕೋಟಿ ರು. ವೆಚ್ಚದಲ್ಲಿ 110 ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದರಿಂದಲೇ ಏರ್‌ಇಂಡಿಯಾ ಭಾರೀ ನಷ್ಟಕ್ಕೆ ತುತ್ತಾಗುವಂತಾಯಿತು ಎಂಬ ಆರೋಪವಿದೆ.
ಇದೇ ಪ್ರಕರಣದಲ್ಲಿ ಅಂದಿನ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರನ್ನೂ ಕೆಲ ಸಮಯದ ಹಿಂದೆ ಇಡಿ ವಿಚಾರಣೆಗೆ ಒಳಪಡಿಸಿತ್ತು.
8, 7, 6.6 5.8, 5, 4.5: ಜೈಲಿನಿಂದ ಹೊರಬಂದು ಸಂಖ್ಯೆ ಎಣಿಸಿದ ಚಿದಂಬರಂ!