ತರಕಾರಿ ತರಲು ಹೋಗಿದ್ದ ಅರೆಸೇನಾ ಕಮಾಂಡರ್‌ನ ಕೊಡಲಿಯಿಂದ ಕೊಚ್ಚಿಕೊಂದ ನಕ್ಸಲರು

Published : Feb 19, 2024, 10:25 AM ISTUpdated : Feb 19, 2024, 10:26 AM IST
ತರಕಾರಿ ತರಲು ಹೋಗಿದ್ದ ಅರೆಸೇನಾ ಕಮಾಂಡರ್‌ನ ಕೊಡಲಿಯಿಂದ ಕೊಚ್ಚಿಕೊಂದ ನಕ್ಸಲರು

ಸಾರಾಂಶ

 ನಕ್ಸಲ್ ಪೀಡಿತ ಛತ್ತಿಸ್‌ಗಢದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತರಕಾರಿ ತರಲು ಹೋಗಿದ್ದ ವೇಳೆ ಛತ್ತೀಸ್‌ಗಢ ಅರೆಸೇನಾ ಪಡೆಯ ಕಮಾಂಡರ್‌ ಒಬ್ಬರನ್ನು ನಕ್ಸಲರು ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ರಾಯ್ಪುರ: ನಕ್ಸಲ್ ಪೀಡಿತ ಛತ್ತಿಸ್‌ಗಢದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತರಕಾರಿ ತರಲು ಹೋಗಿದ್ದ ವೇಳೆ ಛತ್ತೀಸ್‌ಗಢ ಅರೆಸೇನಾ ಪಡೆಯ ಕಮಾಂಡರ್‌ ಒಬ್ಬರನ್ನು ನಕ್ಸಲರು ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ರಾಜ್ಯದ ನಕ್ಸಲ್‌ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಮೃತ ಯೋಧನನ್ನು ಕಂಕೇರ್‌ ಜಿಲ್ಲೆಯ ಭಾನು ಪ್ರತಾಪ್‌ಪುರದ ತೇಜ್‌ ರಾಮ್‌ ಭುವಾರ್ಯ ಎಂದು ಗುರುತಿಸಲಾಗಿದೆ.  ತನ್ನ ಕ್ಯಾಂಪ್‌ನಿಂದ ತರಕಾರಿ ತರಲು ಹೋಗುತ್ತಿದ್ದ ವೇಳೆ ಮಾವೋವಾದಿಗಳು ಈತನನ್ನು ಅಡ್ಡಗಟ್ಟಿ ದಾಳಿ ಮಾಡಿ ಕೊಡಲಿಯಿಂದ ಹೊಡೆದು ಸಾಯಿಸಿ ಪರಾರಿಯಾಗಿದ್ದಾರೆ. ಈ ಘಟನೆಯನ್ನು ಮೃತನ ಸಹಾಯಕರು ತಮ್ಮ ಸಿಬ್ಬಂದಿಗೆ ತಿಳಿಸಿ ಕರೆತರುವ ವೇಳೆಗೆ ಯೋಧನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಕೊಲೆಗಡುಕರ ಪತ್ತೆಗೆ ಬಲೆ ಬೀಸಿದ್ದಾರೆ.

ಸಂದೇಶ್‌ಖಾಲಿ ದೌರ್ಜನ್ಯ: ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಗಳ ಮಹಿಳೆಯರ ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಅತ್ಯಂತ ಗಂಭೀರ ಎಂದಿರುವ ಪರಿಶಿಷ್ಟ ಸಮುದಾಯದ ರಾಷ್ಟ್ರೀಯ ಆಯೋಗ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡಿದೆ.

ಪಡಿತರ ಹಗರಣದಲ್ಲಿ ಇ.ಡಿ. ದಾಳಿಗೆ ಒಳಗಾಗಿದ್ದ ಟಿಎಂಸಿ ನಾಯಕ ಶಹಜಹಾನ್‌ ಮತ್ತು ಆತನ ನೂರಾರು ಬೆಂಬಲಿಗರು ಸಂದೇಶ್‌ಖಾಲಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಮತ್ತು ಹಿಂದೂ ಸಮುದಾಯದವರ ಮಹಿಳೆಯರನ್ನು ಅಪಹರಿಸಿ ಟಿಎಂಸಿ ಕಚೇರಿಯಲ್ಲೇ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯದ ರಾಷ್ಟ್ರೀಯ ಆಯೋಗದ ನಿಯೋಗ ಸಂದೇಶ್‌ಖಾಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಪರಿಶೀಲನೆ ವೇಳೆ ಕಂಡುಬಂದ ಅಂಶ ಮತ್ತು ಅಂಶಗಳ ಆಧಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯೋಗ ರಾಷ್ಟ್ರಪತಿಗೆ ವರದಿ ಸಲ್ಲಿಸಿದೆ. ವರದಿ ಸಲ್ಲಿಕೆ ಬಳಿಕ ಆಯೋಗದ ಅಧ್ಯಕ್ಷ ಅರುಣ್‌ ಹಲ್ದಾರ್‌ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ನಾವು ಶಿಫಾರಸು ಮಾಡಿದ್ದೇವೆ. ರಾಜ್ಯದಲ್ಲಿನ ಕ್ರಿಮಿನಲ್‌ಗಳು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಪೊಲೀಸರಿಗೆ 20 ವರ್ಷಗಳಿಂದ ಬೇಕಾಗಿದ್ದ ನಕ್ಸಲ್‌ನನ್ನು ಹಿಡಿದುಕೊಟ್ಟ ಕೇರಳದ ಕಾಡಾನೆ!

ಕಾಂಗ್ರೆಸ್‌, ಬಿಜೆಪಿಗೆ ತಡೆ:

ಈ ನಡುವೆ ಸಂದೇಶ್‌ಖಾಲಿಗೆ ತೆರಳಲು ಯತ್ನಿಸಿದ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಕಾಂಗ್ರೆಸ್‌ ನಿಯೋಗ ಮತ್ತು ಬಿಜೆಪಿ ಸಂಸದರ ನಿಯೋಗವನ್ನು ಬಂಗಾಳ ಪೊಲೀಸರು ತಡೆದಿದ್ದಾರೆ. ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ನೀಡಿ ಪೊಲೀಸರು ತಡೆಯೊಡ್ಡಿದ್ದಾರೆ.

ಸಂದೇಶ್‌ಖಾಲಿಗೆ ಬಂಗಾಳದ ಸಚಿವರ ಭೇಟಿ

ಕೋಲ್ಕತಾ: ಕಳೆದೆರಡು ವಾರಗಳಿಂದ ಪ್ರಕ್ಷುಬ್ಧ ವಾತಾವರಣದಲ್ಲಿರುವ ಸಂದೇಶ್‌ಖಾಲಿ ಪ್ರದೇಶಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಮೂವರು ಸಚಿವರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. ಇದೇ ವೇಳೆ ಕಂದಾಯ ಇಲಾಖೆಯು ಜನರು ಸಮಸ್ಯೆಗಳನ್ನು ಆಲಿಸಲು ಶಿಬಿರಗಳನ್ನು ತೆರೆದಿದ್ದು, ಆ ಮೂಲಕ ಜನರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದೆ. ಆದರೆ ಕೇಂದ್ರ ಸಚಿವರನ್ನೊಳಗೊಂಡ ಬಿಜೆಪಿ ನಿಯೋಗ ಸಂದೇಶ್‌ ಖಾಲಿಗೆ ಭೇಟಿ ನೀಡಲು ಪ್ರಯತ್ನ ನಡೆಸಿತ್ತಾದರೂ ಅವರಿಗೆ ಜಿಲ್ಲಾಡಳಿತ ಗಡಿಯಲ್ಲೇ ತಡೆ ನೀಡಿದೆ. ಸಂದೇಶ್‌ಖಾಲಿಯಲ್ಲಿ ಹಲವು ದಿನಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಕ್ರಮ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಛತ್ತೀಸ್‌ಗಢದಲ್ಲಿ ಮತಯಂತ್ರ ಸಾಗಿಸುತ್ತಿದ್ದ ವಾಹನ ಸ್ಪೋಟಿಸಿದ ನಕ್ಸಲರು; ಯೋಧ ಬಲಿ: 2 ರಾಜ್ಯಗಳಲ್ಲಿ ಉತ್ತಮ ಮತದಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!