ಛತ್ತೀಸ್‌ಗಢದಲ್ಲಿ ಬಹುತೇಕ ನಕ್ಸಲ್ ನಾಯಕರ ಫಿನಿಶ್: ಈಗ ಶಾಂತಿ ಮಾತುಕತೆಗೆ ಸರ್ಕಾರಕ್ಕೆ ನಕ್ಸಲರ ಮನವಿ

Published : Sep 18, 2025, 07:42 AM IST
Chhattisgarh Naxalites Ready for Peace

ಸಾರಾಂಶ

Maoists Offer Ceasefire in Chhattisgarh:ಛತ್ತೀಸ್‌ಗಢದಲ್ಲಿ ಸರ್ಕಾರದ ನಿರಂತರ ಕಾರ್ಯಾಚರಣೆಯಿಂದ ದುರ್ಬಲಗೊಂಡಿರುವ ನಕ್ಸಲರು, ತಾತ್ಕಾಲಿಕ ಕದನ ವಿರಾಮ ಘೋಷಿಸಿ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. 

ಛತ್ತೀಸ್‌ಗಢದಲ್ಲಿ ಶಾಂತಿ ಮಾತುಕತೆಗೆ ನಕ್ಸಲರ ಪತ್ರ:

ರಾಯ್ಪುರ: ನಕ್ಸಲ್‌ ಮುಕ್ತ ದೇಶ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಅಭಿಯಾನ ನಡೆಸುತ್ತಿರುವ ಹೊತ್ತಿನಲ್ಲೇ ಛತ್ತೀಸ್‌ಗಢದಲ್ಲಿ ಸಕ್ರಿಯರಾಗಿರುವ ನಕ್ಸಲರು ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ತಾವು ತಾತ್ಕಾಲಿಕವಾಗಿ ಸಶಸ್ತ್ರ ಹೋರಾಟ ಸ್ಥಗಿತಗೊಳಿಸಿದ್ದು, ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ಇಚ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಾ ಕದನವಿರಾಮ ಘೋಷಿಸಬೇಕು ಎಂದು ನಕ್ಸಲ್‌ ಅಭಯ್‌ ಹೆಸರಿನಲ್ಲಿ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಾಗಿದೆ.

ಕೇಂದ್ರದ ಕಠಿಣ ಕಾರ್ಯಾಚರಣೆಯಿಂದ ಕಂಗಾಲಾದ ನಕ್ಸಲರು

ಈ ನಡುವೆ ಪತ್ರದ ಸತ್ಯಾಸತ್ಯತೆ ಬಗ್ಗೆ ನಮಗೆ ಇನ್ನೂ ಖಚಿತವಾಗಿಲ್ಲ. ಅದು ಖಚಿತವಾದ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಪ್ರಸಕ್ತ ದೇಶದಲ್ಲೇ ಅತಿ ಹೆಚ್ಚು ನಕ್ಸಲ್‌ ಚಟುವಟಿಕೆ ಹೊಂದಿರುವ ಛತ್ತೀಸ್‌ಗಢದಲ್ಲಿ ನಕ್ಸಲ್‌ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರೀ ಕಾರ್ಯಾಚರಣೆ ಕೈಗೊಂಡಿವೆ.

ಇದುವರೆಗೂ ಛತ್ತೀಸ್‌ಗಢದಲ್ಲಿ 380 ನಕ್ಸಲರ ಹತ್ಯೆ, 1000ಕ್ಕೂ ಹೆಚ್ಚು ನಕ್ಸಲರ ಬಂಧನ

ಪರಿಣಾಮ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯವೊಂದಲ್ಲೇ 380 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದು, 1200ಕ್ಕೂ ಹೆಚ್ಚು ನಕ್ಸಲರನ್ನು ಬಂಧಿಸಲಾಗಿದೆ. 1000ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ. ಸಂಘಟನೆಯ ಬಹುತೇಕ ನಾಯಕರು ಸಾವನ್ನಪ್ಪಿದ್ದು, ಅವರ ಆರ್ಥಿಕ ಸಂಪನ್ಮೂಲ ಬತ್ತಿಹೋಗಿದೆ. ಜೊತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕಾರಣ ಜನಬೆಂಬಲ ಕೂಡಾ ನಿಂತು ಹೋಗಿದೆ. ಹೀಗಾಗಿ ನಕ್ಸಲರು ಹೋರಾಟ ತ್ಯಜಿಸಿ ಶಾಂತಿಯತ್ತ ಮುಖ ಮಾಡಿಬಹುದು ಎನ್ನಲಾಗಿದೆ.

ಇದನ್ನೂ ಓದಿ: ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ: ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಇದನ್ನೂ ಓದಿ: ಹುಡುಗಿ ನೋಡಲು ಬಂದು ಆಕೆಯ ಸೀರೆ ಬಿಚ್ಚಿ ಮೇಕಪ್ ಉಜ್ಜಿ ನೋಡಿದ ಗಂಡಿನ ಕಡೆಯವರು: ಆಮೇಲೇನಾಯ್ತು ನೋಡಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ