ಪ್ರಕರಣದಲ್ಲಿ ಶಿಬಿರದ ಆಯೋಜಕರು, ಶಾಲೆಯ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು ವರದಿಗಾರ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ.
ಚೆನ್ನೈ (ಆ.20): ಕೋಲ್ಕತಾದ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವಾಗಲೇ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 13 ಶಾಲಾ ಬಾಲಕಿಯರ ಮೇಲೆ ನಕಲಿ ಎನ್‌ಸಿಸಿ ಕ್ಯಾಂಪ್‌ವೊಂದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬಂದರೂ, ಅದನ್ನು ಮುಚ್ಚಿಡಲು ಯತ್ನಿಸಿದ ಹೇಯ ಘಟನೆಯೂ ಆಗಿದೆ. ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲ, ಇಬ್ಬರು ಶಿಕ್ಷಕರು, ಕ್ಯಾಂಪ್ ಆಯೋಜಕರು ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಒಬ್ಬಳು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ, 12 ಮಂದಿಯನ್ನು ಲೈಂಗಿಕವಾಗಿ ಶೋಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೃಷ್ಣಗಿರಿಯ ಖಾಸಗಿ ಶಾಲೆಗೆ ಎನ್‌ಸಿಸಿ ಘಟಕ ನಡೆಸುವ ಅನುಮತಿ ಇರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಗುಂಪೊಂದು ಶಾಲೆಯಲ್ಲಿ ಒಂದು ಶಿಬಿರ ನಡೆಸಿದರೆ ಅರ್ಹತೆ ಸಿಗಲಿದೆ ಎಂದು ಹೇಳಿತ್ತು. ಆ ಗುಂಪಿನ ಪೂರ್ವಾಪರ ಬಗ್ಗೆ ಶಾಲಾ ಆಡಳಿತ ಮಂಡಳಿ ವಿಚಾರಣೆ ನಡೆಸಲು ಹೋಗಲಿಲ್ಲ. 17 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳು ಮೂರು ದಿವಸಗಳ ಶಿಬಿರಕ್ಕೆ ಹೆಸರು ನೋಂದಣಿ ಮಾಡಿಸಿದ್ದರು. ಬಾಲಕಿಯರನ್ನು ಶಾಲೆಯ ಸಭಾಂಗಣದ ಮೊದಲನೆ ಮಹಡಿಯಲ್ಲಿ ವಾಸ್ತವ್ಯ ಮಾಡಿಸಲಾಗಿತ್ತು. ಶಿಕ್ಷಕರನ್ನು ಶಿಬಿರದಿಂದ ಹೊರಗಿಡಲಾಗಿತ್ತು.
undefined
ಶಿಬಿರದಲ್ಲಿದ್ದಾಗ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ ಇದೇ ಗುಂಪು ಬೇರೆ ಕಡೆಯೂ ಇದೇ ರೀತಿ ನಕಲಿ ಶಿಬಿರ ನಡೆಸಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಖಿ ಕಟ್ಟಲು ತವರಿಗೆ ಹೊರಟ ಹೆಂಡತಿಯ ಮೂಗು ಕತ್ತರಿಸಿದ ಪಾಪಿ ಗಂಡ!
"ಶಾಲಾ ಅಧಿಕಾರಿಗಳಿಗೆ ಲೈಂಗಿಕ ಅಪರಾಧಗಳ ಬಗ್ಗೆ ತಿಳಿದಿದ್ದರು ಆದರೆ ಪೊಲೀಸರಿಗೆ ತಿಳಿಸುವ ಬದಲು ವಿಷಯವನ್ನು ಮುಚ್ಚಿಡಲು ನಿರ್ಧರಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ತಂಗದುರೈ ತಿಳಿಸಿದ್ದಾರೆ. ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕ್ರಮ ಕೈಗೊಂಡಿದೆ. ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಈ ಪ್ರಕರಣವು ಬಂದಿದೆ.
ಹುಬ್ಬಳ್ಳಿ ಶಾಲೇಲಿ ಮಕ್ಕಳಿಂದ ಮೀಟರ್ ಬಡ್ಡಿ ವ್ಯವಹಾರ: ದುಡ್ಡು ಕೊಡದದ್ದಕ್ಕೆ ಚಾಕುವಿನಿಂದ ಇರಿದ ಬಾಲಕ..!