ಚೆನ್ನೈ ಪೊಲೀಸರಿಂದ ಕೇರಳ ಸ್ಟೋರಿ ವಿಶೇಷ ಸ್ಕ್ರೀನಿಂಗ್‌ಗೆ ತಡೆ, ಸೆನ್ಸಾರ್‌ ಬೋರ್ಡ್‌ ಕಿಡಿ!

By Santosh Naik  |  First Published May 10, 2023, 1:17 PM IST


ಕೇರಳ ಸ್ಟೋರಿ ಚಿತ್ರಕ್ಕೆ ತಮಿಳುನಾಡಿನಲ್ಲಿ ಅನಧಿಕೃತ ಬ್ಯಾನ್‌ ಮಾಡಲಾಗಿದೆ. ಈ ನಡುವೆ ಚಿತ್ರದ ವಿಶೇಷ ಸ್ಕ್ರೀನಿಂಗ್‌ಅನ್ನು ಚೆನ್ನೈ ಪೊಲೀಸ್‌ ತಡೆದ ಕಾರಣಕ್ಕೆ ಸೆನ್ಸಾರ್‌ ಮಂಡಳಿ ತಮಿಳುನಾಡು ಪೊಲೀಸರ ವಿರುದ್ಧ ಕಿಡಿಕಾರಿದದೆ.


ಚೆನ್ನೈ (ಮೇ.10): ಕಳಪೆ ಕಲೆಕ್ಷನ್‌ ಹಾಗೂ ರಾಜ್ಯಾದ್ಯಂತ ಜನರ ಪ್ರತಿಭಟನೆಗಳ ಕಾರಣಕ್ಕಾಗಿ ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ಅನಧಿಕೃತ ಬ್ಯಾನ್‌ ಹಾಕಲಾಗಿದೆ. ಈ ನಡುವೆ  ರಾಜ್ಯದ ಬಿಜೆಪಿಯ ಹಿರಿಯ ನಾಯಕರನ್ನು ಆಹ್ವಾನಿಸಿದ್ದ ಚಿತ್ರದ ವಿಶೇಷ ಪ್ರದರ್ಶನವನ್ನು ಚೆನ್ನೈ ಪೊಲೀಸರು ಬುಧವಾರ ತಡೆದಿದ್ದಾರೆ. ಮೇ 10 ರಂದು ಬೆಳಿಗ್ಗೆ, ಚೆನ್ನೈನ ಜನಪ್ರಿಯ ಪ್ರಿವ್ಯೂ ಥಿಯೇಟರ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಯೋಜಿಸಲಾಗಿತ್ತು ಮತ್ತು ಪ್ರದರ್ಶನಕ್ಕೆ ಬಿಜೆಪಿಯ ಹಿರಿಯ ರಾಜಕಾರಣಿಗಳು ಸೇರಿದಂತೆ ಹಲವಾರು ಜನರನ್ನು ಆಹ್ವಾನಿಸಲಾಯಿತು. ವಿಶೇಷ ಪ್ರದರ್ಶನವನ್ನು ವೀಕ್ಷಿಸಲು ಸುಮಾರು 10-12 ಜನರು ಬಂದಿದ್ದರು ಎಂದು ವರದಿಯಾಗಿದೆ. ಆದರೆ, ಚೆನ್ನೈ ಪೊಲೀಸರು ಮಧ್ಯಪ್ರವೇಶಿಸಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರದರ್ಶನವನ್ನು ನಿಲ್ಲಿಸಿದರು ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಅವರೊಂದಿಗೆ ಮಾತನಾಡಿದಾಗ, ವಿಶೇಷ ಪ್ರದರ್ಶನವನ್ನು ಬಿಜೆಪಿ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಮೇ 5 ರಂದು ಕೇರಳ ಸ್ಟೋರಿ ಬಿಡುಗಡೆಯಾದಾಗ ತಮಿಳುನಾಡಿನಾದ್ಯಂತ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು.

ನಾಮ್ ತಮಿಳರ್ ಕಚ್ಚಿ ನಾಯಕ ಸೀಮಾನ್ ಅವರು ಮೇ 6 ರಂದು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದು, ಚಿತ್ರಮಂದಿರಗಳಿಂದ ಚಿತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರದರ್ಶನಗಳು ಮುಂದುವರಿದರೆ, ತಮ್ಮ ಪಕ್ಷದ ಸದಸ್ಯರು ಥಿಯೇಟರ್‌ಗಳ ಪರದೆಯನ್ನು ಹರಿಯಲಿದ್ದು, ಚಿತ್ರಮಂದಿರಗಳನ್ನು ಧ್ವಂಸ ಮಾಡಲಿರುವುದಾಗಿ ಘೋಷಿಸಿದ್ದರು. ಇದರಿಂದಾಗಿ ತಮಿಳುನಾಡಿನ ಥಿಯೇಟರ್ ಮಾಲೀಕರು ಮೇ 7 ರಿಂದ ಚಿತ್ರದ ಪ್ರದರ್ಶನವನ್ನು ನಿಲ್ಲಿಸಲು ನಿರ್ಧಾರ ಮಾಡಿದ್ದರು.

ಭಾರತೀಯ ನಿರ್ಮಾಪಕರ ಸಂಘವು ಕೇರಳ ಸ್ಟೋರಿ ನಿಷೇಧದ ಕುರಿತು ರಾಜ್ಯಗಳ ನಿಷೇಧಕ್ಕೆ ತೀವ್ರ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಸೆನ್ಸಾರ್‌ಗಳನ್ನು ಮಾಡಿದ ನಂತರವೂ ಚಲನಚಿತ್ರಗಳನ್ನು ಪ್ರದರ್ಶಿಸುವ ಹಕ್ಕನ್ನು ನಿರಾಕರಿಸುವ ಈ ವಿದ್ಯಮಾನವನ್ನು ಸಂಬಂಧಿತ ಅಧಿಕಾರಿಗಳು ಪರಿಶೀಲಿಸಬೇಕಾಗಿದೆ ಎಂದು ಅದು ಹೇಳಿದೆ.ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಸದಸ್ಯೆ ವಾಣಿ ತ್ರಿಪಾಠಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೇರಳ ಸ್ಟೋರಿ ಮೇಲಿನ ನಿರ್ಬಂಧಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 

Tap to resize

Latest Videos

ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ

"ನೀವು ಪ್ರೇಕ್ಷಕರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ, ಅದು ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಚಿತ್ರದ ಭವಿಷ್ಯವನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ, ನಾನು ಅದನ್ನು ನಿರ್ಧರಿಸಲು ಸಾಧ್ಯವಿಲ್ಲ, ನಿರ್ಮಾಪಕ ಕೂಡ ನಿರ್ಧರಿಸಲು ಸಾಧ್ಯವಿಲ್ಲ. ಚಿತ್ರ ತಮ್ಮ ಭಾವನೆಗಳೊಂದಿಗಿದೆಯೇ ಎನ್ನುವುದನ್ನು ನಿರ್ಧಾರ ಮಾಡುವುದು ಅಲ್ಲಿನ ಜನರು. ಚಿತ್ರ ಏನು ಹೇಳುತ್ತದೆ ಎನ್ನುವುದನ್ನು ಜನರೊಂದಿಗೆ ಸಂಪರ್ಕ ಸಾಧಿಸುವುದು ಸಿನಿಮಾ ಮಾತ್ರ ಎಂದು ವಾಣಿ ತ್ರಿಪಾಠಿ ಹೇಳಿದ್ದಾರೆ.

 

ಬ್ಯಾನ್ ಒತ್ತಡ ನಡುವೆ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ!

click me!