ಕೆಲ ಕಂಪನಿಯಲ್ಲಿ ಬೋನಸ್, ದೀಪಾವಳಿ ಉಡುಗೊರೆ ಮೂಲಕ ಭಾರಿ ಸದ್ದು ಮಾಡುತ್ತದೆ. ಆದರೆ ಇಲ್ಲೊಂದು ಕಂಪನಿ ವಿಶೇಷ. ಹಾರ್ಡ್ ವರ್ಕ್ ಮಾಡುವ ಉದ್ಯೋಗಿಗಳಿಗೆ ಟಾಟಾ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್, ಹೋಂಡಾ ಆ್ಯಕ್ಟೀವಾ ಸ್ಕೂಟರ್ ಉಡುಗೊರೆಯಾಗಿ ನೀಡುತ್ತದೆ. ಈ ಕಂಪನಿ ಯಾವುದು ಗೊತ್ತಾ?
ಚೆನ್ನೈ(ಡಿ.22) ನೀವು ಮಾಡುತ್ತಿರುವ ಕೆಲಸ, ಪರಿಶ್ರಮವನ್ನು ಕಂಪನಿ ಗುರುತಿಸುತ್ತಿಲ್ಲವೇ? ಎಷ್ಟೇ ಕೆಲಸ ಮಾಡಿದರೂ ಕಂಪನಿ ಬಾಯಿ ಮಾತಿಗೂ ಗುಡ್ ಎಂದಿಲ್ಲವೇ? ಹಾಗಾದರೆ ಇಲ್ಲೊಂದು ಕಂಪನಿ ಇದೆ. ಇಲ್ಲಿ ನೀವು ಕಠಿಣ ಪರಿಶ್ರಮದಿಂದ, ಪ್ರಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ನಿಮಗೆ ಟಾಟಾದ ಒಂದೊಳ್ಳೆ ಕಾರು, ರಾಯಲ್ ಫೀಲ್ಡ್ ಬೈಕ್, ಹೋಂಡಾ ಆ್ಯಕ್ಟೀವಾ ಸ್ಕೂಟರ್ ಇದರಲ್ಲಿ ಯಾವುದಾದರು ಒಂದು ಉಡುಗೊರೆಯಾಗಿ ಸಿಗಲಿದೆ. ಇದೀಗ ಇದೇ ಕಂಪನಿ ಈ ವರ್ಷ ಹಾರ್ಡ್‌ವರ್ಕ್ ಮಾಡಿದ 20 ಉದ್ಯೋಗಿಗಳಿಗೆ ಕಾರು, ಬೈಕ್ ಹಾಗೂ ಸ್ಕೂಟರ್ ಉಡುಗೊರೆಯಾಗಿ ನೀಡಿದೆ.
ಇದು ಚೆನ್ನೈ ಮೂಲಕ ಸರ್ಮೌಂಟ್ ಲಾಜಿಸ್ಟಿಕ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ. ಹೆಸರೇ ಹೇಳುವಂತೆ ಇದು ಲಾಜಿಸ್ಟಿಕ್ ಕಂಪನಿ. ಇಲ್ಲಿನ ಸವಾಲು ಬೆಟ್ಟದಷ್ಟು. ಶಿಪ್ಪಿಂಗ್, ತಕ್ಕ ಸಮಯದಲ್ಲಿ ಪೂರೈಕೆ, ಪಾರದರ್ಶಕತೆ, ಗ್ರಾಹಕರ ಜೊತೆ ಉತ್ತಮ ಸಂಬಂಧ ಬೆಳೆಸುವುದು ಸೇರಿದಂತೆ ಹಲವು ಸವಾಲುಗಳಿವೆ. ಇದರ ನಡುವೆ ಟಾರ್ಗೆಟ್, ವರ್ಷದಿಂದ ವರ್ಷಕ್ಕೆ ಮತ್ತಷ್ಟು ಪ್ರಗತಿ ಸಾಧಿಸಲೇಬೇಕಾದ ಅನಿವಾರ್ಯತೆ, ಗ್ರಾಹಕರ ಸಮಸ್ಯೆಗಳು, ಕೊಂದು ಕೊರತೆಗಳನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿಯೂ ಉದ್ಯೋಗಿಗಳ ಮೇಲಿದೆ. ಈ ಎಲ್ಲಾ ಒತ್ತಡದ ನಡುವೆ ಹಾರ್ಡ್ ವರ್ಕ್ ಮಾಡಿದ ಉದ್ಯೋಗಿಗಳಿಗೆ ಕಂಪನಿ ದುಬಾರಿ ಮೌಲ್ಯದ ವಾಹನಗಳನ್ನು ಉಡುಗೊರೆಯಾಗಿ ನೀಡಿದೆ.
undefined
ಅನಂತ್ ಅಂಬಾನಿ-ರಾಧಿಕಾಗೆ ಗಿಫ್ಟ್ ಸಿಕ್ಕ 650 ಕೋಟಿ ರೂ ಮೌಲ್ಯದ ದುಬೈ ಮನೆ ಹೇಗಿದೆ?
ಈ ವರ್ಷದಲ್ಲಿ ಶ್ರದ್ಧೆಯಿಂದ, ಕರಿಣ ಪರಿಶ್ರಮವಹಿಸಿದ ಉದ್ಯೋಗಿಗಳನ್ನು ಗುರುತಿಸಿ ಉಡುಗೊರೆ ನೀಡಲಾಗಿದೆ. ವಿಶೇಷ ಅಂದರೆ ಕೆಲ ಉದ್ಯೋಗಿಗಳಿಗೆ ಟಾಟಾ ನೆಕ್ಸಾನ್ ಕಾರು ಸಿಕ್ಕಿದೆ. ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್, ಹೋಂಡಾ ಆ್ಯಕ್ಟೀವಾ ಸ್ಕೂಟರ್ ಉಡುಗೊರೆಯಾಗಿ ನೀಡಿದ್ದಾರೆ. ಕಂಪನಿಯ ಈ ಉಡುಗೊರೆಯಿಂದ ನೌಕರರು ಫುಲ್ ಖುಷಿಯಾಗಿದ್ದಾರೆ. ತಮ್ಮ ತಮ್ಮೊಳಗೆ ಸ್ಪರ್ಧಾ ಮನೋಭಾವದಿಂದಕೆಲಸ ಮಾಡುತ್ತಿದ್ದಾರೆ.
ಕಾರು ಉಡುಗೊರೆ ಕುರಿತು ಕಂಪನಿ ಪ್ರತಿಕ್ರಿಯಿಸಿದೆ. ಕಂಪನಿಯಲ್ಲಿ ಹಲವು ಉದ್ಯೋಗಿಗಳಿದ್ದಾರೆ. ಎಲ್ಲರಲ್ಲೂೂ ಸ್ಪರ್ಧಾ ಮನೋಭಾವ ಬರಬೇಕು. ಉತ್ತಮವಾಗಿ ಕೆಲಸ ಮಾಡಬೇಕು. ಇದಕ್ಕೆ ಪ್ರಚೋದನೆಯಾಗಿ, ಪ್ರೇರಣೆಯಾಗಿ ಉಡುಗೊರೆ ನೀಡಿದ್ದೇವೆ. ಉದ್ಯೋಗಿಗಳ ಕಠಿಣ ಪರಿಶ್ರಮದಿಂದ ಕಂಪನಿ ಬೆಳೆದು ನಿಂತಿದೆ. ಹೀಗಾಗಿ ಅವರ ಪರಿಶ್ರಮಕ್ಕೆ ಪ್ರತಿಫಲ ನೀಡಿದ್ದೇವೆ ಎಂದಿದೆ. ಇದರಿಂದ ಉಡುಗೊರೆ ಸಿಗದೆ ಇತರ ಉದ್ಯೋಗಿಗಳೂ ಪ್ರೇರಣೆ ಸಿಗಲಿದೆ. ವರ್ಷ ವರ್ಷ ಉಡುಗೊರೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಎಲ್ಲರೂ ಈ ರೀತಿ ಉಡುಗೊರೆ ಪಡೆಯುವಂತಾಗಲಿ ಅನ್ನೋದು ನಮ್ಮ ಆಶಯ ಎಂದಿದ್ದಾರೆ.
ಈ ರೀತಿಯ ಉಡುಗೊರೆ ನೀಡುವುದರಿಂದ ಕಂಪನಿಯ ಉತ್ಪಾದನೆ ಹೆಚ್ಚಿದೆ. ಸರ್ವೀಸ್ ಗುಣಮಟ್ಟ ಹೆಚ್ಚಾಗಿದೆ. ಎಲ್ಲರೂ ತಮ್ಮ ಬೆಸ್ಟ್ ನೀಡಲು ಬಯಸುತ್ತಾರೆ. ಎಲ್ಲಾ ಉದ್ಯೋಗಿಗಳು ಹಾರ್ಡ್‌ವರ್ಕ್ ಮಾಡುತ್ತಿದ್ದರೆ. ಕಾರು, ಬೈಕ್ ಉಡುಗೊರೆ ಪಡೆಯವರು ಚೆನ್ನಾಗಿ ಕೆಲಸ ಮಾಡಿಲ್ಲ ಅಂತಲ್ಲ, ಕೆಲ ಮಾನದಂಡಗಳನ್ನು ನಿರ್ಧರಿಸಿ ಉಡುಗೊರೆ ನೀಡಲಾಗುತ್ತದೆ. ಮುಂದಿನ ವರ್ಷ ಮತ್ತಷ್ಟು ಉದ್ಯೋಗಿಗಳು ಉಡುಗೊರೆ ಪಡೆಯಲಿ ಎಂದು ಕಂಪನಿ ಹಾರೈಸಿದೆ.
ಹಲವರಿಗೆ ದೀಪಾವಳಿ ಗಿಫ್ಟ್ ನೀಡಿದ ಮುಕೇಶ್ ಅಂಬಾನಿಗೆ RBIನಿಂದ ಬಂತು ಅತೀ ದೊಡ್ಡ ಉಡುಗೊರೆ!
ಈ ಸುದ್ದಿ ತಿಳಿಯುತ್ತಿದ್ದಂತೆ ಹಲವು ಈ ಕಂಪನಿಯಲ್ಲಿ ಕೆಲಸ ಇದೆಯಾ ಎಂದು ಕರೆ ಮಾಡಿದ್ದಾರೆ. ಕಂಪನಿ ಇದೀಗ ಹಲವು ಕರೆ, ರೆಸ್ಯೂಮ್ ಸ್ವೀಕರಿಸುತ್ತಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಕಂಪನಿ ವೆಬ್‌ಸೈಟ್‌ಗೆ ತೆರಳಿ ಕೆಲಸ ಖಾಲಿ ಇದೆಯಾ ಎಂದು ಹುಡುಕುವವರ ಸಂಖ್ಯೆಯೂ ಹೆಚ್ಚಾಗಿದೆ. ಕಂಪನಿಯ ಒಂದು ನಡೆಯಿಂದ ಅತ್ತ ಉದ್ಯೋಗಿಗಳು ಖುಷಿಯಾಗಿದ್ದಾರೆ, ಇತ್ತ ಕಂಪನಿ ಕೂಡ ಉತ್ತಮ ಸಾಧನೆ ಮಾಡುತ್ತಿದೆ. ಇದರ ಜೊತೆಗೆ ಭಾರತದ ಎಲ್ಲಾ ಕಡೆ ಸದ್ದು ಮಾಡುತ್ತಿದೆ.