ರಾಜಸ್ಥಾನದ ಉದಯಪುರದಲ್ಲಿ ಮಗನೊಬ್ಬ ಮಹಿಳಾ ಮಾಂತ್ರವಾದಿ ಮಾತಿನ ಮೇರೆಗೆ ತನ್ನ ತಾಯಿಯನ್ನೇ ಕೊಂದು ನದಿ ದಂಡೆಯಲ್ಲಿ ಹೂತಿಟ್ಟಿದ್ದಾನೆ. 2 ವರ್ಷಗಳ ನಂತರ ಪೊಲೀಸರು ಆರೋಪಿಗಳ ಮಾರ್ಗದರ್ಶನದ ಮೇರೆಗೆ ಮೃತ ಮಹಿಳೆಯ ಮೂಳೆಗಳನ್ನು ಪತ್ತೆ ಹಚ್ಚಿದ್ದಾರೆ.
ರಾಜಸ್ಥಾನ (ಡಿ.22): ದೇಶಾದ್ಯಂತ ಮಾಂತ್ರವಾದಿಗಳು ಜನರನ್ನು ವಂಚಿಸುವ ಮತ್ತು ಮೂರ್ಖರನ್ನಾಗಿ ಮಾಡುವ ಹಲವು ಪ್ರಕರಣಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಜನರು ಇವರ ಮಾತಿಗೆ ಮರುಳಾಗಿ ಲಕ್ಷಾಂತರ ರೂ. ಹಣ ಹಾಳು ಮಾಡುತ್ತಾರೆ. ಇನ್ನು ಕೆಲವರು ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂತಹದ್ದೇ ಒಂದು ಪ್ರಕರಣ ರಾಜಸ್ಥಾನದ ಉದಯಪುರದಿಂದ ವರದಿಯಾಗಿದೆ. ಇಲ್ಲಿ ಮಗನೊಬ್ಬ ಮಹಿಳಾ ಮಾಂತ್ರವಾದಿ ಮಾತಿನ ಮೇರೆಗೆ ತನ್ನ ತಾಯಿಯನ್ನೇ ಕೊಂದು ನದಿ ದಂಡೆಯಲ್ಲಿ ಹೂತಿಟ್ಟಿದ್ದಾನೆ.
2 ವರ್ಷಗಳ ನಂತರ ಮೂಳೆಗಳು ಪತ್ತೆ:
ಈ ಘಟನೆ ನಡೆದಿದ್ದು 2 ವರ್ಷಗಳ ಹಿಂದೆ. ಈಗ ಪೊಲೀಸರು ಆರೋಪಿಗಳ ಮಾರ್ಗದರ್ಶನದ ಮೇರೆಗೆ ಮೃತ ಮಹಿಳೆಯ ಮೂಳೆಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಮೃತ ಮಹಿಳೆಯ ಮಗ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಉದಯಪುರ ಎಸ್ಪಿ ಯೋಗೇಶ್ ಗೋಯಲ್ ಅವರ ಪ್ರಕಾರ, 2022ರ ಸೆಪ್ಟೆಂಬರ್ 8ರಂದು ರಿಷಭದೇವ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕನ್ಹಯ್ಯಾಲಾಲ್ ತನ್ನ ತಂದೆ ಸುಖಲಾಲ್ ಜೊತೆಗೆ ಪೊಲೀಸ್ ಠಾಣೆಗೆ ಬಂದು ತನ್ನ ತಾಯಿ ಸಂಗೀತಾ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದನು. ಆದರೆ, ಎಷ್ಟೇ ಹುಡುಕಿದರೂ ಪೊಲೀಸರಿಗೆ ಆಕೆಯ ಸುಳಿವೇ ಸಿಗದೇ ಸುಮ್ಮನಾಗಿದ್ದರು.
undefined
ಮಂತ್ರವಾದಿ ಮಾತಿನ ಮೇರೆಗೆ ತಾಯಿ ಕೊಂದ:
ಈ ಪ್ರಕರಣವನ್ನು ಬಯಲಿಗೆಳೆದ ಪೊಲೀಸರು ಆರೋಪಿಗಳಾದ ಕನ್ಹಯ್ಯಾಲಾಲ್, ಮಹಿಳಾ ಮಾಂತ್ರವಾದಿ ರೋಡ್ಕಿ ಮತ್ತು ಕನ್ಹಯ್ಯಾಲಾಲ್ ಸಹಚರ ಜೀವಾ ಎಂಬುವವರನ್ನು ಬಂಧಿಸಿದ್ದಾರೆ. ಕಳೆದ 8 ವರ್ಷಗಳ ಹಿಂದೆ ಕನ್ಹಯ್ಯಾಲಾಲ್‌ನ ತಂದೆ ಸುಖಲಾಲ್‌ನ ಮೊದಲ ಪತ್ನಿ ಮೃತಪಟ್ಟಿದ್ದರು. ನಂತರ, ಅವರು ಸಂಗೀತಾ ಎಂಬ ಮಹಿಳೆಯನ್ನು 2ನೇ ಮದುವೆ ಆಗಿದ್ದರು. ಈ ಮದುವೆಯ ನಂತರ ಸುಖಲಾಲ್ ಮನೆಯಲ್ಲಿ ತುಂಬಾ ಜನರಿಗೆ ಅನಾರೋಗ್ಯ ಕಾಡಲಾರಂಭಿಸಿತು. ಆಗ ಮಗ ಕನ್ಹಯ್ಯಾಲಾಲ್ ಈ ಬಗ್ಗೆ ತುಂಬಾ ಚಿಂತಿತನಾಗಿದ್ದನು.
ಇದನ್ನೂ ಓದಿ: 'ನನ್ನ ಗರ್ಲ್‌ಫ್ರೆಂಡ್ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ ಸ್ವ್ಯಾಪಿಂಗ್ ದಂಧೆ!
ಈ ವೇಳೆ ಅವನು ಮಹಿಳಾ ಮಂತ್ರವಾದಿಯೊಬ್ಬಳನ್ನು ಸಂಪರ್ಕ ಮಾಡುತ್ತಾನೆ. ಆಕೆ ಕನ್ಹಯ್ಯಾಲಾಲ್‌ಗೆ, ಅವನ ಎರಡನೇ ತಾಯಿ ಸಂಗೀತಾ ನಿಮ್ಮ ಮನೆಯ ಮೇಲೆ ಮಾಟ-ಮಂತ್ರ ಮಾಡಿಸಿದ್ದಾರೆ. ಇದರಿಂದ ಇಡೀ ಮನೆ ಹಾಳಾಗುತ್ತದೆ ಎಂದು ಹೇಳಿದ್ದಳು. ಇದಕ್ಕೆ ಪರಿಹಾರ ಏನು ಮಾಡಿಸಬೇಕು ಎಂದು ಕೇಳಿದಾಗ ನೀನು ನಿನ್ನ ಮಲತಾಯಿಯನ್ನು ಕೊಂದು ಆಕೆಯ ಶವವನ್ನು ಹೂಳಬೇಕು ಮಹಿಳಾ ಮಂತ್ರವಾದಿ ಸಲಹೆ ನೀಡಿದ್ದಳು.
ಕೊಲೆಯ ರಹಸ್ಯ ಬಯಲು: ಪೊಲೀಸರ ಪ್ರಕಾರ, ತಾಯಿಯನ್ನು ಕೊಂದ ನಂತರ ಕನ್ಹಯ್ಯಾಲಾಲ್ ಊರನ್ನು ಬಿಟ್ಟು ಹೋಗಿದ್ದನು. ಆದರೆ, ಪೊಲೀಸರಿಗೆ ಅವನು ಯಾವುದೋ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನವಿತ್ತು. ಹೀಗಾಗಿ ಪೊಲೀಸರು ನಿರಂತರವಾಗಿ ಅವನನ್ನು ಹಿಂಬಾಲಿಸುತ್ತಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಅವನು ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಆನ್‌ಲೈನ್ ಗೇಮ್ ಸಾಲ ತೀರಿಸಲು ದರೋಡೆ; ಮರ ಕತ್ತರಿಸುವ ಯಂತ್ರದಿಂದ ಅಡ್ಡ ಬಂದವರನ್ನು ಕತ್ತರಿಸಿದ ಇಬ್ರಾಹಿಂ!