ತಿಂಗಳಿಗೊಮ್ಮೆ ನಿಮ್ಮ ಆರೇಂಜ್ ಪರೀಕ್ಷಿಸಿ, ಯುವರಾಜ್ ಸಂಸ್ಥೆಯ ಸ್ತನ ಕ್ಯಾನ್ಸರ್ ಜಾಹೀರಾತಿಗೆ ಆಕ್ರೋಶ!

Published : Oct 24, 2024, 07:24 PM IST
ತಿಂಗಳಿಗೊಮ್ಮೆ ನಿಮ್ಮ ಆರೇಂಜ್ ಪರೀಕ್ಷಿಸಿ, ಯುವರಾಜ್ ಸಂಸ್ಥೆಯ ಸ್ತನ ಕ್ಯಾನ್ಸರ್ ಜಾಹೀರಾತಿಗೆ ಆಕ್ರೋಶ!

ಸಾರಾಂಶ

ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಯು ವಿ ಕ್ಯಾನ್ ಕ್ಯಾನ್ಸರ್ ಫೌಂಡೇಷನ್ ಸಂಸ್ಥೆ ನೀಡಿದ ಜಾಹೀರಾತಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಅತ್ಯಂತ ಕೆಟ್ಟ ಹಾಗೂ ಅಶ್ಲೀಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ದೆಹಲಿ(ಅ.24)  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಮಗಧೀರ. ಆದರೆ ಹಲವರಿಗೆ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಯುವರಾಜ್ ಸಿಂಗ್ ಯು ವಿ ಕ್ಯಾನ್ ಅನ್ನೋ ಸಂಸ್ಥೆ ಹುಟ್ಟು ಹಾಕಿ ಹಲವು ಕ್ಯಾನ್ಸರ್ ಪೀಡಿತರಿಗೆ ನೆರವಾಗುತ್ತಿದ್ದಾರೆ. ಆದರೆ ಇದೀಗ ಸ್ತನ ಕ್ಯಾನ್ಸರ್ ಕುರಿತು ಯು ವಿ ಕ್ಯಾನ್ ಸಂಸ್ಥೆ ನೀಡಿದ ಜಾಹೀರಾತಿಗೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಂಗಳಿಗೊಮ್ಮೆ ನಿಮ್ಮ ಆರೇಂಜ್ ಪರೀಕ್ಷಿಸಿಕೊಳ್ಳಿ ಎಂಬ ಜಾಹೀರಾತು ನೀಡಲಾಗಿದೆ. ದೆಹಲಿ ಮೆಟ್ರೋದಲ್ಲಿ ಹಾಕಿರುವ ಈ ಜಾಹೀರಾತು ಅಶ್ಲೀಲಕ್ಕೆ ಸಮ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

Confusedicius ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಜಾಹೀರಾತು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಯಾವ ರೀತಿಯ ಜಾಹೀರಾತು? ದೇಶದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವುದು ಹೇಗೆ? ಸ್ತನ ಕ್ಯಾನ್ಸರ್ ಅನ್ನೋ ಪದಗಳ ಬಳಕೆ ಮಾಡಿ ಜಾಗೃತಿ ಮೂಡಿಸಲು ಸಾಧ್ಯವಿಲ್ಲವೇ? ಈ ಜಾಹೀರಾತನ್ನು ದೆಹಲಿ ಮೆಟ್ರೋದಲ್ಲಿ ನೋಡಿದೆ. ಯಾವ ರೀತಿಯ ಜಾಗೃತಿ ಇದು. ತಿಂಗಳಿಗೊಮ್ಮೆ ನಿಮ್ಮ ಆರೇಂಜ್ ಪರೀಕ್ಷಿಸಿ ಅನ್ನೋದು ಎಲ್ಲಿಯ ಸಭ್ಯತೆ? ಯಾರು ಈ ರೀತಿಯ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಇದನ್ನು ಅನುಮತಿಸಿದವರು ಯಾರು? ಸಾರ್ವಜನಿಕವಾಗಿ ಈ ರೀತಿಯ ಜಾಗೃತಿ ಜಾಹೀರಾತು ಹಾಕಿ ಯಾರಿಗೆ ಮುಜುಗರ ಉಂಟು ಮಾಡುತ್ತೀದ್ದೀರಿ ಎಂದು ಟ್ವಿಟರ್ ಮೂಲಕ ಬಳಕೆದಾರ ಪ್ರಶ್ನಿಸಿದ್ದಾರೆ.

 

 

ಪದೇ ಪದೇ ಕಾಯಿಸಿದ್ರೆ ವಿಷವಾಗುವ 5 ಆಹಾರಗಳು

ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತಿನಲ್ಲಿ ಬಳಸಿರುವ ಪದಗಳು, ಕೆಟ್ಟ ಆಂದೋಲನದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಯುವರಾಜ್ ಸಿಂಗ್ ಯು ವಿ ಕ್ಯಾನ್ ಸಂಸ್ಥೆ ಈ ರೀತಿ ಕೆಟ್ಟ ಜಾಹೀರಾತು ಬಳಸಿರುವುದು ಹಲವರು ಆಕ್ರೋಶ ಹೆಚ್ಚಿಸಿದೆ. ತಕ್ಷಣವೇ ಈ ಜಾಹೀರಾತು ಹಿಂಪಡೆಯುವಂತೆ ಹಲವರು ವಾರ್ನಿಂಗ್ ನೀಡಿದ್ದರು. ಇಷ್ಟೇ ಅಲ್ಲ ದೆಹಲಿ ಮೆಟ್ರೋಗೂ ಸೋಶಿಯಲ್ ಮೀಡಯಾ ಮೂಲಕ ದೂರು ನೀಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ದೆಹಲಿ ಮಟ್ರೋ ತಕ್ಷಣ ಸ್ಪಂದಿಸಿದೆ. ದೆಹಲಿ ಮೆಟ್ರೊ ಒಳಗೆಡೆ ಹಾಕಿರುವ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಜಾಹೀರಾತನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಈ ಜಾಹೀರಾತು ಅಶ್ಲೀಲವಾಗಿದೆ ಅನ್ನೋದು ಮನಗಂಡಿದ್ದೇವೆ. ದೆಹಲಿ ಮೆಟ್ರೋ ಈ ರೀತಿಯ ಯಾವುದೇ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಈ ಜಾಗೃತಿ ಅಭಿಯಾನ ತೀರಾ ಕೆಳಮಟ್ಟದ್ದಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಮೆಟ್ರೋ ಸ್ಪಷ್ಟನೆ ನೀಡಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ