ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಯುವಕನೋರ್ವ ಈ ರಷ್ಯನ್ ಮಹಿಳೆಯ ಹಿಂದೆ ಮುಂದೆ ಸುಳಿದಾಡಿ ಡಾನ್ಸ್ ಮಾಡುತ್ತಾ ಕಿರುಕುಳ ನೀಡಿದ್ದಾನೆ.
ದೇಶದಲ್ಲಿರುವ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ಅನೇಕ ವಿದೇಶಿಗರು ಆಗಮಿಸುತ್ತಲೇ ಇರುತ್ತಾರೆ. ಹಾಗೆಯೇ ದೇಶದ ಪ್ರವಾಸಿ ತಾಣಗಳಲ್ಲಿ ಒಂದಾದ ಇಂಡಿಯಾ ಗೇಟ್ ಬಳಿ ಆಗಮಿಸಿದ ರಷ್ಯನ್ ಮಹಿಳೆಗೆ ಯುವಕನೋರ್ವ ಕಿರುಕುಳ ನೀಡಿದ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಯುವಕನೋರ್ವ ಈ ರಷ್ಯನ್ ಮಹಿಳೆಯ ಹಿಂದೆ ಮುಂದೆ ಸುಳಿದಾಡಿ ಡಾನ್ಸ್ ಮಾಡುತ್ತಾ ಕಿರುಕುಳ ನೀಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಯುವಕನ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಸಚಿನ್ ರಾಜ್ ಎಂದು ಗುರುತಿಸಲಾಗಿದೆ. ಈತ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ.
ವೈರಲ್ ಆದ ವಿಡಿಯೋದಲ್ಲಿ ಕಾಣುವಂತೆ ಯುವಕ ವಿದೇಶಿ ಮಹಿಳೆಗೆ ಇಂಡಿಯಾ ಗೇಟ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಡಾನ್ಸ್ ಮಾಡುವಂತೆ ಪೋರ್ಸ್ ಮಾಡಿದ್ದಾನೆ. ರಷ್ಯನ್ ಮಹಿಳೆ ಇಂಡಿಯಾ ಗೇಟ್ ಮುಂದೆ ಫೋಟೋ ತೆಗೆಯುತ್ತಾ ನಿಂತಿದ್ದರೆ, ಅಲ್ಲಿಗೆ ಬಂದ ಈ ಯುವಕ ಆ ಯುವತಿಯನ್ನು ಪಬ್ಲಿಕ್‌ನಲ್ಲಿ ಡಾನ್ಸ್ ಮಾಡುವಂತೆ ಹೇಳಿದ್ದಾನೆ. ಆದರೆ ಆಕೆ ಈತನ ಆಟಕ್ಕೆ ಸೊಪ್ಪು ಹಾಕಿಲ್ಲ, ಜೊತೆಗೆ ಆಕೆಗೆ ಒಂತರ ಕಿರಿಕಿರಿ ಉಂಟಾಗಿದ್ದು, ಅದು ಆಕೆಯ ಮೊಗದಲ್ಲಿ ಕಾಣುತ್ತಿದೆ. ಆದರೂ ಯುವಕ ಆಕೆಯನ್ನು ಡಾನ್ಸ್ ಮಾಡುವಂತೆ ಒತ್ತಾಯ ಮುಂದುವರಿಸಿದ್ದು, ಇದರಿಂದ ಗಲಿಬಿಲಿಗೊಂಡ ಯುವತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಇದೇ ವೇಳೆ ಯುವತಿಯ ಪೋಷಕರು ಕೂಡ ಅಲ್ಲೇ ಇದ್ದು, ಅಸಮಾಧಾನ ಅವರ ಮೊಗದಲ್ಲಿ ಕಾಣುತ್ತಿದೆ. ಇದು ವೈಯಕ್ತಿಕ ಜಾಗದ ( personal space) ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ತನ್ನನ್ನೇ ಮದುವೆಯಾಗಿ ಸುದ್ದಿಯಾದವಳು ತನ್ನನ್ನೇ ಕೊಂದಳು: ಟಿಕ್‌ಟಾಕ್ ಸ್ಟಾರ್ ಸುಸೈ*ಡ್
ಈ ವೀಡಿಯೋಗೆ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಬಂದಿದ್ದು, ಅನೇಕರು ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರ ಒಪ್ಪಿಗೆ ಪಡೆಯದೇ ವೀಡಿಯೋ ಮಾಡಿದ್ದಲ್ಲದೇ ಈ ಯುವಕ ಕ್ಷಮೆಯನ್ನೂ ಕೇಳದೇ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹರಿ ಬಿಟ್ಟಿದ್ದಾನೆ. ಅಲ್ಲದೇ ವಿದೇಶಿಯರಿಗೆ ನೀಡುವ ಈ ರೀತಿಯ ಕಿರುಕುಳಗಳು ಬರೀ ಆತನ ಮಾತ್ರವಲ್ಲ, ಇಡೀ ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈತ ತನ್ನ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹಲವು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ. ಬಹುತೇಕ ವಿಡಿಯೋಗಳಲ್ಲಿ ಈತ ಅಪರಿಚಿತರು, ವಯಸ್ಸಾದವರು ಹಾಗೂ ಸಂಬಂಧ ಇಲ್ಲದವರಿಗೆ ತರಲೆ ಮಾಡಿ ಮಜಾ ತೆಗೆದುಕೊಳ್ಳುತ್ತಿರುವ ವೀಡಿಯೋಗಳೇ ಆಗಿವೆ.
ಆಕಾಶದಲ್ಲಿ ಬರ್ತ್‌ಡೇಯಂತೆ! ಯೂಟ್ಯೂಬಲ್ಲಿ ವ್ಯೂಸ್ ಬರೋಕೆ ಏನೇನು ಮಾಡ್ತಾರೆ ನೋಡಿ!
ಈ ವೀಡಿಯೋ ನೋಡಿದ ಕೆಲವರು ವಿದೇಶಿ ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಅನೇಕರು ಈತನ ಈ ವೀಡಿಯೋವನ್ನು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಳೆದ ವರ್ಷ ರಷ್ಯನ್ ಟೂರಿಸ್ಟ್ ಒಬ್ಬರಿಗೆ ಜೈಪುರದಲ್ಲಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಕಿರುಕುಳ ನೀಡಿದ್ದ, ದೆಹಲಿ ಮೂಲದ ಟ್ರಾವೆಲ್ ವ್ಲಾಗರ್ ಜೊತೆ ಆಕೆ ಪ್ರವಾಸ ಮಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ಮಹಿಳೆ ಹಾಗೂ ವ್ಲಾಗರ್ ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸುವುದಕ್ಕಾಗಿ ಪೆಟ್ರೋಲ್ ಪಂಪ್‌ಗೆ ಬಂದಿದ್ದ ವೇಳೆ ಈ ಘಟನೆ ನಡೆದಿತ್ತು. ಈ ದೃಶ್ಯ ಸಂಪೂರ್ಣವಾಗಿ ವ್ಲಾಗರ್‌ನ ಕ್ಯಾಮರಾದಲ್ಲಿ ಸೆರೆ ಆಗಿತ್ತು.