ಫಾಸ್ಟ್‌ಟ್ಯಾಗ್‌ನಲ್ಲಿ 10 ರೂಪಾಯಿ ಹೆಚ್ಚಿನ ಹಣ ಕಟ್‌, ಹೆದ್ದಾರಿ ಪ್ರಾಧಿಕಾರವನ್ನೇ ಕೋರ್ಟ್‌ಗೆ ಎಳೆದ ಬೆಂಗಳೂರಿಗ!

By Santosh Naik  |  First Published May 9, 2023, 4:18 PM IST

ತನ್ನ ಫಾಸ್ಟ್‌ಟ್ಯಾಗ್‌ ಅಕೌಂಟ್‌ನಿಂದ ಟೋಲ್‌ನಲ್ಲಿ 10 ರೂಪಾಯಿ ಹೆಚ್ಚುವರಿ ಹಣ ಕಟ್‌ ಆಗಿದ್ದಕ್ಕೆ, ಬೆಂಗಳೂರಿನ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೋರ್ಟ್‌ ಮೆಟ್ಟಿಲೇರಿಸಿದ್ದು ಮಾತ್ರವಲ್ಲ ಬರೋಬ್ಬರಿ 8 ಸಾವಿರ ರೂಪಾಯಿ ಪರಿಹಾರ ಪಡೆದುಕೊಳ್ಳುವಲ್ಲೂ ಯಶಸ್ವಿಯಾಗಿದ್ದಾರೆ.


ಬೆಂಗಳೂರು (ಮೇ.9): ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ. ಈ ವೇಳೆ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಹಣ ಕೂಡ ಕಟ್‌ ಆಗುತ್ತದೆ. ಒಮ್ಮೊಮ್ಮೆ ಎಷ್ಟು ಹಣ ಕೂಡ ಕಟ್‌ ಆಗಿದೆ ಎಂದು ನೋಡುವ ಗೋಜಿಗೆ ಹೋಗೋದಿಲ್ಲ. ಆದರೆ, ಬೆಂಗಳೂರಿನ ವ್ಯಕ್ತಿಯೊಬ್ಬನಿಗೆ ಟೋಲ್‌ ದಾಳೀ ಹೋಗುವಾಗ ಫಾಸ್ಟ್‌ಟ್ಯಾಗ್‌ ಅಕೌಂಟ್‌ನಿಂದ ಎರಡು ಬಾರಿ ಹೆಚ್ಚಿವರಿಯಾಗಿ 5 ರೂಪಾಯಿ ಕಟ್‌ ಆಗಿದೆ..! ಹಾಗಂತ ಈತ ಸುಮ್ಮನೆ ಕೂರಲಿಲ್ಲ. ಇಡೀ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೋರ್ಟ್‌ಗೆ ಎಳೆತಂದ ವ್ಯಕ್ತಿ, ಬರೀ 10 ರೂಪಾಯಿಗೆ 8 ಸಾವಿರ ರೂಪಾಯಿ ಪರಿಹಾರ ಪಡೆದುಕೊಂಡಿದ್ದಾರೆ. ಬೆಂಗಳೂರು ಮೂಲದ ಸಂತೋಷ್‌ ಕುಮಾರ್‌ ಎಂಬಿ ಈ ಸಾಹಸ ಮಾಡಿದ ವ್ಯಕ್ತಿ. ಬರೀ 10 ರೂಪಾಯಿ ಅಲ್ವಾ ಎಂದು ಸುಮ್ಮನೆ ಕೂರದ ಸಂತೋಷ್‌ ಕುಮಾರ್‌, ತನಗೆ ಹೆಚ್ಚುವರಿಯಾಗಿ ಚಾರ್ಜ್‌ ಮಾಡಿದ ಎನ್‌ಎಚ್‌ಎಐಅನ್ನು ಕೋರ್ಟ್‌ ಕಟಕಟೆಗೆ ಏರಿಸಿದ್ದಾರೆ.  ನ್ಯಾಯಾಲಯದ ಆದೇಶ ಸಂತೋಷ್‌ ಕುಮಾರ್‌ ಪರವಾಗಿ ಬಂದಿದ್ದು, ಪರಿಹಾರವಾಗಿ ಸಾಕಷ್ಟು ಹಣವನ್ನೂ ನೀಡಲಾಗಿದೆ.. 10 ರೂಪಾಯಿಗೆ ಪ್ರತಿಯಾಗಿ ನೀವು ಇಷ್ಟು ಹಣ ಸಿಗುತ್ತದೆ ಎಂದು ನಿರೀಕ್ಷೆ ಮಾಡೋದಕ್ಕೂ ಸಾಧ್ಯವಿಲ್ಲ.

ಮಾಧ್ಯಮ ವರದಿಯ ಪ್ರಕಾರ, ಬೆಂಗಳೂರಿನ ಗಾಂಧಿನಗರ ಮೂಲದ 38 ವರ್ಷದ ಸಂತೋಷ್‌ ಕುಮಾರ್‌ ಎಂಬಿ, 2020ರ ಫೆಬ್ರವರಿ 20 ಹಾಗೂ ಮೇ 16ರ ನಡುವೆ ಎರಡು ಸಂದರ್ಭಗಳಲ್ಲಿ ಚಿತ್ರದುರ್ಗ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳನ್ನು ಬಳಕೆ ಮಾಡಿದ್ದರು.  ಸಾರಿಗೆ ಸಚಿವಾಲಯವು ಜಾರಿಗೆ ತಂದಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾದ ಫಾಸ್ಟ್ಯಾಗ್ ವ್ಯವಸ್ಥೆಯು ಪ್ರತಿ ಟೋಲ್ ಪಾಯಿಂಟ್‌ಗೆ ನಿರೀಕ್ಷಿತ ರೂ 35 ರ ಬದಲು ರೂ 40 ಕಡಿತಗೊಳಿಸಿರುವುದನ್ನು ಕಂಡು ಅವರು ಅಚ್ಚರಿ ಪಟ್ಟಿದ್ದರು. ಇದು ಎರಡೂ ಸಂದರ್ಭಗಳಲ್ಲಿ ಈ ರಸ್ತೆಗಳ ಮೂಲಕ ಹಾದು ಹೋದಾಗ 5 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಫಾಸ್ಟ್‌ಟ್ಯಾಗ್‌ ಕಟ್‌ ಮಾಡಿತ್ತು.

ಫಾಸ್ಟ್‌ಟ್ಯಾಗ್‌ ವಿಧಿಸಿರುವ  ಹೆಚ್ಚುವರಿ ಹಣವನ್ನು ವಾಪಾಸ್‌ ಪಡೆದುಕೊಳ್ಳುವ ಸಲುವಾಗಿ ಸಂತೋಷ್‌ ಕುಮಾರ್‌, ಹೆದ್ದಾರಿ ಪ್ರಾಧಿಕಾರದ ಕಚೇರಿಯಿಂದ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಎನ್‌ಎಚ್‌ಎಐ ಅಧಿಕಾರಿಗಳು ಹಾಗೂ ಪ್ರಾಜೆಕ್ಟ್‌ನ ನಿರ್ದೇಶದ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬೆನ್ನಲ್ಲಿಯೇ ಸಂತೋಷ್‌ ಕುಮಾರ್‌, ಚಿತ್ರದುರ್ಗದ ಎನ್‌ಎಚ್‌ಎಐ ಪ್ರಾಜೆಕ್ಟ್‌ ಮ್ಯಾನೇಜರ್‌ ಹಾಗೂ ನಾಗ್ಪರದಲ್ಲಿರುವ ಜೆಎಎಸ್‌ ಟೋಲ್‌ ರೋಡ್‌ ಕಂಪನಿ ಲಿಮಿಟೆಡ್‌ನ ಮ್ಯಾನೇಜರ್‌ಗೆ ಕೋರ್ಟ್‌ ಮುಖಾಂತರ ನೋಟಿಸ್‌ ಜಾರಿ ಮಾಡಿದ್ದರು.

ಎನ್‌ಎಚ್‌ಎಐ ಪ್ರತಿನಿಧಿಗಳು ಹಾಜರಾಗಲು ವಿಫಲರಾಗಿದ್ದರೂ, ಮತ್ತು ಜೆಎಎಸ್ ಕಂಪನಿಯ ಪ್ರತಿನಿಧಿಗಳು ನ್ಯಾಯಾಲಯದ ನಿಗದಿತ 45 ದಿನಗಳ ಅವಧಿಯನ್ನು ಮೀರಿ ತಮ್ಮ ಆವೃತ್ತಿಯನ್ನು ಸಲ್ಲಿಸಿದ್ದರೂ, ಎನ್‌ಎಚ್‌ಎಐ ಯೋಜನಾ ನಿರ್ದೇಶಕರ ಪರವಾಗಿ ವಕೀಲರೊಬ್ಬರು ಹಾಜರಾಗಿದ್ದರು ಮತ್ತು ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಸೂಚನೆಯಂತೆ ವಿನ್ಯಾಸ, ಅಭಿವೃದ್ಧಿ ಮತ್ತು ಕಾನ್ಫಿಗರ್ ಮಾಡಲಾಗಿದೆ ಎಂದು ವಾದಿಸಿದರು.  ಇದಲ್ಲದೆ, 2020ರ ಜುಲೈ 1ರ ಹೊತ್ತಿಗೆ ಕಾರುಗಳ ಟೋಲ್ ಶುಲ್ಕವು ವಾಸ್ತವವಾಗಿ ರೂ 38 ಮತ್ತು ಎಲ್‌ಸಿವಿ ಶುಲ್ಕ 66 ರೂಪಾಯಿ ಆಗಿತ್ತು ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಎನ್‌ಎಚ್‌ಎಐ 2018ರ  ಏಪ್ರಿಲ್ 6ರಂದು ಸುತ್ತೋಲೆಯನ್ನು ಹೊರಡಿಸಿ, ಸಂಗ್ರಹಿಸಿದ ಶುಲ್ಕವನ್ನು ಹತ್ತಿರದ ಮೊತ್ತವಾದ 35 ರೂಪಾಯಿಗೆ ರೌಂಡ್‌ಆಫ್‌ ಮಾಡುವಂತೆ ಸುತ್ತೋಲೆ ನೀಡಿತ್ತು ಇದರ ಪ್ರಕಾರ, ಕಾರ್‌ಗಳಿಗೆ 35 ರೂಪಾಯಿ ಹಾಗೂ ಎಲ್‌ಸಿವಿಗೆ 65 ರೂಪಾಯಿ ಹಣವನ್ನು ನಿಗದಿ ಮಾಡಲಾಗಿತ್ತು ಎಂದು ವಕೀಲರು ವಾದಿಸಿದ್ದರು.

 

Tap to resize

Latest Videos

ಟೋಲ್‌ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್‌ ಗಡ್ಕರಿ

ಅದರೆ, ಕಠಿಣ ಡಿಫೆನ್ಸ್‌ ನಡುವೆಯೂ, ಸಂತೋಷ್ ಕುಮಾರ್ ಎಂಬಿ ಜಯಶಾಲಿಯಾದರು. ಹೆಚ್ಚುವರಿಯಾಗಿ ಸಂಗ್ರಹಿಸಿದ ಟೋಲ್ ಶುಲ್ಕವನ್ನು ಮರುಪಾವತಿ ಮಾಡುವುದರೊಂದಿಗೆ  8,000 ರೂಪಾಯಿ ಪರಿಹಾರವನ್ನು ನೀಡುವಂತೆ ಗ್ರಾಹಕ ನ್ಯಾಯಾಲಯವು ಏಜೆನ್ಸಿಗೆ ಆದೇಶಿಸಿದೆ. 10 ರೂಪಾಯಿಗೆ ದೊಡ್ಡ ಮಟ್ಟದ ರಿಟರ್ನ್‌ ಪಡೆಯುವುದು ಎಲ್ಲರ ಕನಸು. ಅದರಂತೆ ಸಂತೋಷ್‌ ಕುಮಾರ್‌ 10 ರೂಪಾಯಿಗೆ 8 ಸಾವಿರ ರೂಪಾಯಿ ಹಣ ರಿಟರ್ನ್‌ ಪಡೆದಿದ್ದಾರೆ. ಆದರೆ, ಇಷ್ಟು ಹಣ ವಾಪಾಸ್‌ ಪಡೆಯಲು ಅವರು ಮಟ್ಟ ಶ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿದೆ.

ಕಾರ್ ಕ್ಲೀನ್ ಮಾಡೋ ನೆಪದಲ್ಲಿ ಫಾಸ್ಟ್ಯಾಗ್‌ನಿಂದ ಹಣ ಎಗರಿಸಿದ ಬಾಲಕ! ಇದು ಸಾಧ್ಯವೇ ಇಲ್ಲ ಎಂದ FASTag!

click me!