ಫೋಟೋ ತೆಗೆಯುವ ವಿಚಾರಕ್ಕೆ ಮಹಾಕಾಳಗ: ಮದ್ವೆ ಮನೆ ಆಯ್ತು ರಣಾಂಗಣ: ವಿಡಿಯೋ ವೈರಲ್

By Anusha Kb  |  First Published May 9, 2023, 4:05 PM IST

ಉತ್ತರ ಪ್ರದೇಶದಲ್ಲಿ  ಮದುವೆ ಮನೆಯಲ್ಲಿ ಫೋಟೋ ತೆಗೆಯುವ ವಿಚಾರಕ್ಕೆ ಹುಡುಗ ಹುಡುಗಿ ಕಡೆಯವರ ಮಧ್ಯೆ ಜಗಳ ನಡೆದಿದ್ದು, ವಧು ವರರು ಕಣ್ಣ ಕಣ್ಣು ಬಿಟ್ಟುಕೊಂಡು ನೋಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. 


ಲಕ್ನೋ: ಮದುವೆ ಮನೆ ಅಂದ್ರೆ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಆದ್ರೆ ಇತ್ತೀಚಿನ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗೋದು ಸಾಮಾನ್ಯವಾಗಿ ಹೋಗಿದೆ. ಮಂಟಪ, ಡೆಕೊರೇಷನ್, ವರದಕ್ಷಿಣೆ, ಊಟ ಹೀಗೆ ನಾನಾ ಕಾರಣಗಳಿಗೆ ಗಲಾಟೆ ನಡೆಯುತ್ತದೆ. ಕೆಲವೊಮ್ಮೆ ಸಮಾರಂಭಕ್ಕೆ ಬಂದ ಅತಿಥಿಗಳು ಸಹ ಗಲಾಟೆ ಮಾಡುತ್ತಾರೆ.ಕೆಲ ದಿನಗಳ ಹಿಂದಷ್ಟೇ ಯುವಕನೋರ್ವ ಮದ್ವೆ ಮಂಟಪದಲ್ಲಿ ವಧುವನ್ನು ಬಿಟ್ಟು ಆಕೆಯ ತಂಗಿಗೆ ತಾಳಿ ಕಟ್ಟಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮೊದಲೇ ಈಗ ಮದುವೆ ಮನೆಯಲ್ಲಿ ಫೋಟೋ ತೆಗೆಯುವ ವಿಚಾರಕ್ಕೆ ಹುಡುಗ ಹುಡುಗಿ ಕಡೆಯವರ ಮಧ್ಯೆ ಜಗಳ ನಡೆದಿದ್ದು, ವಧು ವರರು ಕಣ್ಣ ಕಣ್ಣು ಬಿಟ್ಟುಕೊಂಡು ನೋಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. 

ಇತ್ತೀಚೆಗೆ ಮದುವೆಗಳಲ್ಲಿ ಫೋಟೋಶೂಟ್ (ಅನ್ನು ಒಂದು ಸಂಪ್ರದಾಯ ಎಂಬಂತೆ ಅನುಸರಿಸಲಾಗುತ್ತದೆ. ಮದುವೆಗೆ ಬಂದವರೆಲ್ಲ ವಧುವವರಿಗೆ ಹರಸಿ ಅವರ ಜೊತೆ ಫೋಟೋ ತೆಗೆಸಿಕೊಂಡರೆಯೇ ಮದುವೆ ಸಂಪನ್ನ ಎಂದು ಭಾವಿಸುವಷ್ಟು ಫೋಟೋ ಶೂಟ್ ಪ್ರಭಾವ ಬೀರಿದೆ. ಆದರೆ ಉತ್ತರ ಪ್ರದೇಶದಲ್ಲಿ ಮದುವೆಯೊಂದರಲ್ಲಿ ಫೋಟೋದ ವಿಚಾರಕ್ಕೆ ನೂತನ ವಧು ವರರ (Bride & groom) ಕುಟುಂಬದ ಮಧ್ಯೆ ಮಹಾ ಕಾಳಗವಾಗಿದೆ. 

Tap to resize

Latest Videos

ಕುದುರೆ ಏರಿ ಬಂದ ವರ..ಹತ್ತಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ವಧು; ವಿಡಿಯೋ ವೈರಲ್

ಫೋಟೋ ಕ್ಲಿಕ್ಕಿಸುವ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದ್ದು,  ಎರಡು ಕಡೆಯವರು ಮದುವೆ ಮಂಟಪದಲ್ಲಿ ಹೊಡೆದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.  ವರ ಹಾಗೂ ವಧುವಿನ ಕಡೆಯವರು ಹೊಡೆದಾಡಿಕೊಳ್ಳುತ್ತಿರುವ ರಭಸಕ್ಕೆ ಪೆಂಡಾಲ್ ಅಲುಗಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. 

ಅಲ್ಲದೇ ಕೆಲವರು ಅಲ್ಲಿಂದ ವರನನ್ನು ಎಳೆದೊಯ್ದು ವಾತಾವರಣವನ್ನು ತಿಳಿಗೊಳಿಸಲು ಯತ್ನಿಸುತ್ತಾರೆ. ಈ ಘಟನೆ ಆಗ್ರಾದ ಶಾಹಗಂಜ್‌ನಲ್ಲಿ ನಡೆದಿದೆ ಎನ್ನಲಾಗಿದೆ.  ವಧು ಹಾಗೂ ವರನ ಕಡೆಯವರ ಮಧ್ಯೆ ಫೋಟೋ ಕ್ಲಿಕ್ಕಿಸುವ ವಿಚಾರ ಹಾಗೂ ಡಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಳ್ಳುವಷ್ಟರ ಮಟ್ಟಿಗೆ ತಲುಪಿದೆ. ಇದು ಸಂಭ್ರಮದಿಂದ ಕೂಡಿದ ಮದುವೆ ಮನೆಯನ್ನು ರಣಾಂಗಣವಾಗಿಸಿದೆ. 

ಬಿಸಿ ಪೂರಿ ಕೊಡದ್ದಕ್ಕೆ ಸಿಟ್ಟು, ಮದುವೆ ಮನೆಯಲ್ಲಿ ಅತಿಥಿಗಳ ರಂಪಾಟ!

ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದಾರೆ. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಈ ಘಟನೆ ನಡೆದಿದೆ. ಮುಫಾಸಿಲ್ ಠಾಣಾ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬುವರು ಆಯೋಜಿಸಿದ್ದ ಮದುವೆ (Marriage) ಸಮಾರಂಭದಲ್ಲಿ ಯುವಕರ ಗುಂಪೊಂದು ಪಾಲ್ಗೊಂಡಿತ್ತು. ಊಟ ಮಾಡುವ ಸಂದರ್ಭದಲ್ಲಿ ಅತಿಥಿಗಳು (Guest) ಬಿಸಿ ಬಿಸಿ ಪೂರಿಯನ್ನು ಕೇಳಿದ್ದಾರೆ. 2 ಗಂಟೆ ಸುಮಾರಿಗೆ ಬಿಸಿ ಬಿಸಿ ಪೂರಿಯನ್ನು ಕೇಳಲು ಆರಂಭಿಸಿದ ಯುವಕನೊಬ್ಬನಿಂದ ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ. ಬಿಸಿ ಪೂರಿ ರೆಡಿ ಇಲ್ಲವಾದ ಕಾರಣ ಜಗಳವಾಡಿದ್ದಾರೆ. ನಂತರ ಮದುವೆ ಮನೆಯಲ್ಲೇ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.

ವರದಕ್ಷಿಣೆಗಾಗಿ ಮದ್ವೆ ಮನೆಯಾಯ್ತು ರಣಾಂಗಣ, ಚೇರ್, ಪಾತ್ರೆಯಲ್ಲಿ ಹೊಡೆದಾಟ

ಗಲಾಟೆ ಮಾಡಲು ಕೆಲವು ಇತರ ಯುವಕರನ್ನು ಹೊರಗಿನಿಂದ ಕರೆಸಲಾಗಿತ್ತು ಎಂದು ನಂತರ ತಿಳಿದುಬಂತು. ಪರಿಸ್ಥಿತಿ ತ್ವರಿತವಾಗಿ ಉಲ್ಬಣಗೊಂಡಿತು ಮತ್ತು ಕಲ್ಲು ತೂರಾಟ ಮತ್ತು ಗೂಂಡಾಗಿರಿಯ ನಡೆಸಲಾಯಿತು. ಇದರ ಪರಿಣಾಮವಾಗಿ ಮೂರ್ನಾಲ್ಕು ಜನರಿಗೆ ಗಾಯಗಳಾಗಿವೆ (Injury). ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರು ಅತಿಥಿಗಳನ್ನು (Guests) ಶಾಂತಗೊಳಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.

ಇಡೀ ವಿವಾದಕ್ಕೆ ಪ್ರಚೋದನೆ ನೀಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

pic.twitter.com/qZOWYS10i6

— K.RAJ. 🇮🇳🚩 (@Kulwant70838898)

 

click me!