ಆಗಸ್ಟ್‌ 1 ರಿಂದ ಬ್ರಿಗೇಡಿಯರ್‌ ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಸೇನೆಯಲ್ಲಿ ಒಂದೇ ರೀತಿಯ ಸಮವಸ್ತ್ರ!

Published : May 09, 2023, 02:32 PM ISTUpdated : May 09, 2023, 02:40 PM IST
ಆಗಸ್ಟ್‌ 1 ರಿಂದ ಬ್ರಿಗೇಡಿಯರ್‌ ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಸೇನೆಯಲ್ಲಿ ಒಂದೇ ರೀತಿಯ ಸಮವಸ್ತ್ರ!

ಸಾರಾಂಶ

ಭಾರತೀಯ ಸೇನೆಯ ಮೂಲಗಳ ಪ್ರಕಾರ,  ಈ ನಿರ್ಧಾರದಿಂದ ಸೇನೆಯಲ್ಲಿ ನ್ಯಾಯಯುತ ಮತ್ತು ಸಮಾನ ಸಂಘಟನೆಯಾಗಲು ಸೇನೆಯ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಲಾಗಿದೆ.  

ನವದೆಹಲಿ (ಮೇ.9): ಪ್ರಮುಖ ಬೆಳವಣಿಗೆಯಲ್ಲಿ, ಭಾರತೀಯ ಸೇನೆಯು ಬ್ರಿಗೇಡಿಯರ್ ಮತ್ತು ಮೇಲಿನ ಶ್ರೇಣಿಯ ಎಲ್ಲಾ ಅಧಿಕಾರಿಗಳಿಗೆ ಸಮಾನ ಸಮವಸ್ತ್ರವನ್ನು ಹೊಂದಲು ನಿರ್ಧರಿಸಿದೆ, ಹಿರಿಯ ನಾಯಕತ್ವದ ನಡುವೆ ಸೇವಾ ವಿಷಯಗಳಲ್ಲಿ ಸಾಮಾನ್ಯ ಗುರುತು ಮತ್ತು ವಿಧಾನವನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಗುರಿಯನ್ನು ಇದು ಹೊಂದಿದೆ. ಇದು ಆಗಸ್ಟ್ 1 ರಿಂದ ಇದು ಜಾರಿಯಾಗಲಿದೆ ಎನ್ನಲಾಗಿದೆ. ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್ ಮತ್ತು ಜನರಲ್ ಸೇರಿದಂತೆ ಬ್ರಿಗೇಡಿಯರ್ ಮಟ್ಟ ಮತ್ತು ಮೇಲಿನ ಶ್ರೇಣಿಯ ಅಧಿಕಾರಿಗಳು ರೆಜಿಮೆಂಟೇಶನ್ ಗಡಿಗಳನ್ನು ಸೇನೆಯಲ್ಲಿ ಹೊಂದಿಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಎಲ್ಲಾ ಪಡೆಗಳೊಂದಿಗೆ ವ್ಯಾಪಕವಾದ ಸಮಾಲೋಚನೆ ಹಾಗೂ  ವಿವರವಾದ ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೇಗಿರಲಿದೆ ಸಮವಸ್ತ್ರ: ಮೂಲಗಳ ಪ್ರಕಾರ ಸಮಾನ ಸಮವಸ್ತ್ರ ಸೇನಾಪಡೆಯ ಟೋಪಿ, ಭುಜದ ಮೇಲಿನ ಶ್ರೇಣಿಯ ಬ್ಯಾಡ್ಜ್‌ಗಳು, ಬೆಲ್ಟ್‌ಗಳು ಮತ್ತು ಶೂಗಳು ಸೀನಿಯರ್‌ ಅಧಿಕಾರಿಗಳ ಫ್ಲ್ಯಾಗ್‌ ಶ್ರೇಣಿ (ಬ್ರಿಗೇಡಿಯರ್‌ ಹಾಗೂ ಅದಕ್ಕಿಂತ ಮೇಲಿನವರು) ಹೊಂದಿರಲಿದ್ದು, ಇವೆಲ್ಲವೂ ಸಮಾನವಾಗಿ ಇರಲಿದೆ. ಧ್ವಜ ಶ್ರೇಣಿಯ ಅಧಿಕಾರಿಗಳು ಈಗ ಯಾವುದೇ ಲ್ಯಾನ್ಯಾರ್ಡ್‌ಗಳನ್ನು ಧರಿಸುವುದಿಲ್ಲ. ಆದರೆ, ಕರ್ನಲ್‌ಗಳ ಹಾಗೂ ಅವರಿಗಿಂತ ಕೆಳಗಿನ ಶ್ರೇಣಿಯ ಅಧಿಕಾರಿಗಳ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

 

ಅಪ್ಪ ನನಗೇನೂ ಬೇಡಾ, ನೀನು ಎದ್ದು ಬಾ: ಹುತಾತ್ಮ ಯೋಧನ ಪುತ್ರಿಯ ಕಣ್ಣೀರು

ಭಾರತೀಯ ಸೈನ್ಯದಲ್ಲಿ, ಬ್ರಿಗೇಡಿಯರ್ ಮತ್ತು ಮೇಲಿನ ಅಧಿಕಾರಿಗಳು ಈಗಾಗಲೇ ಘಟಕಗಳು ಮತ್ತು ಬೆಟಾಲಿಯನ್‌ಗಳಿಗೆ ಕಮಾಂಡರ್ ಆಗಿರುವವರು ಮತ್ತು ಹೆಚ್ಚಾಗಿ ಪ್ರಧಾನ ಕಛೇರಿ ಮತ್ತು ಸಂಸ್ಥೆಗಳಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಮತ್ತು ಅಲ್ಲಿ ಎಲ್ಲಾ ಶಸ್ತ್ರಾಸ್ತ್ರ ಮತ್ತು ಸೇವೆಗಳ ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ಕಾರ್ಯನಿರ್ವಹಿಸುತ್ತಾರೆ. "ಹೊಸ ಸಮಾನ ಸಮವಸ್ತ್ರವು ಎಲ್ಲಾ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಸಾಮಾನ್ಯ ಗುರುತನ್ನು ಖಚಿತಪಡಿಸುತ್ತದೆ ಮತ್ತು ಭಾರತೀಯ ಸೇನೆಯ ನಿಜವಾದ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

 

ಭಾರತೀಯ ಸೇನೆ ಮತ್ತಷ್ಟು ಬಲಿಷ್ಠವಾಗಲು, ಭವಿಷ್ಯಕ್ಕೆ ಸಿದ್ಧಗೊಳಿಸಲು ನೆರವಾಗಲಿವೆ ಈ ಯೋಜನೆಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌