
ಜಮ್ಮು/ಹೃಷಿಕೇಶ (ಏ.23): ದೇಶದಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಅಮರನಾಥ ವಾರ್ಷಿಕ ಯಾತ್ರೆ ನೋಂದಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಲ್ತಾಲ್ ಮತ್ತು ಚಂದಾನ್ವಾರಿ ಮಾರ್ಗದ ಅಮರನಾಥ ಯಾತ್ರೆಗೆ ಆಫ್‌ಲೈನ್ ಮತ್ತು ಆನ್‌ಲೈನ್ ನೋಂದಣಿಯು ಕ್ರಮವಾಗಿ ಏ.1 ಮತ್ತು ಏ.15ರಿಂದ ಆರಂಭವಾಗಿತ್ತು. ಸದ್ಯದ ವೇಳಾಪಟ್ಟಿಪ್ರಕಾರ, ಸುಮಾರು 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲ ಯಾತ್ರೆ ಎರಡೂ ಮಾರ್ಗಗಳಿಂದ ಜೂ.28ರಂದು ಆರಂಭವಾಗಿ ಆಗಸ್ಟ್ 22ರಂದು ಮುಕ್ತಾಯಗೊಳ್ಳಬೇಕಿದೆ.
ಕೊರೋನಾ ಅಟ್ಟಹಾಸ : ವಿಜ್ಞಾನಿಗಳ ತಂಡ ನೀಡಿದೆ ಎಚ್ಚರಿಕೆ ! ...
ಚಾರ್‌ಧಾಮ ಯಾತ್ರೆ ಮೇಲೂ ಕರಿನೆರಳು: ಈ ನಡುವೆ ಕೊರೋನಾ ಭೀತಿ ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ ಯಾತ್ರೆ ಮೇಲೂ ಕರಿನೆರಳು ಬೀರಿದೆ. ಯಾತ್ರೆಯು ಮೇ.14ರಿಂದ ಆರಂಭವಾಗಲಿದೆ. ಆದರೂ ಈವರೆಗೆ ಯಾತ್ರಾರ್ಥಿಗಳು ಬಸ್ ಟಿಕೆಟ್ ಕಾಯ್ದಿರಿಸಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಕನಿಷ್ಠ 500 ಬಸ್‌ಗಳ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತಿತ್ತು.
ಗಮನಿಸಿ : ನಾಡಿನ ಪ್ರಮುಖ ದೇಗುಲಗಳಿಗೆ ಸಾರ್ವಜನಿಕ ಪ್ರವೇಶ ಬಂದ್ ...
ಈಗಾಗಲೇ ದೇಶದಲ್ಲಿ ಲಕ್ಷ ಲಕ್ಷ ಸಂಖ್ಯೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು ಇನ್ನೂ ಮಹಾಮಾರಿ ಅಟ್ಟಹಾಸ ಏರಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ