ಪಂಜಾಬ್(ಸೆ.19): ಪಂಜಾಬ್ ಕಳೆದೆರಡು ದಿನದಿಂದ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಚರಣಜಿತ್ ಸಿಂಗ್ ಚನ್ನಿ ಆಯ್ಕೆಯಾಗಿದ್ದಾರೆ. ಚರಣಜಿತ್ ಸಿಂಗ್ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಆಯ್ಕೆ!
49 ವರ್ಷದ ಚರಣಜಿತ್ ಸಿಂಗ್ ಪಂಜಾಬ್ ಮೊದಲ ದಲಿತ ಸಿಎಂ. ಅಮರಿಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಕೈಗಾರಿಕಾ ತರಬೇತಿ ಸಚಿವರಾಗಿದ್ದ ಚರಣಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಶಾಸಕಾಂಗದ ಅವಿರೋಧವಾಗಿ ಆಯ್ಕೆ ಮಾಡಿದೆ.
Congratulations to Shri Charanjit Singh Channi Ji for the new responsibility.
We must continue to fulfill the promises made to the people of Punjab. Their trust is of paramount importance.
ಸಿಎಂ ರೇಸ್‌ನಲ್ಲಿದ್ದ ಘಟಾನುಘಟಿಗಳನ್ನು ಹಿಂದಿಕ್ಕಿ ಚರಣಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನಾಳೆ(ಸೆ.20) 11 ಗಂಟೆಗೆ ಚರಣಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪಂಜಾಬ್ ಸಿಎಂ ರಾಜೀನಾಮೆ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ತಲ್ಲಣ; ಗೆಹ್ಲೋಟ್ ಆಪ್ತನ ತಲೆದಂಡ!
ಪಂಜಾಬ್‌ನಲ್ಲಿನ ಸುಮಾರು ಶೇಕಡಾ 33 ರಷ್ಟು ದಲಿತ ಜನಸಂಖ್ಯೆ ಹೊಂದಿದೆ. ದಲಿತ ವೋಟ್ ಬ್ಯಾಂಕ್ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಲಿತ ಮತಗಳು ಯಾವುದೇ ಆತಂಕವಿಲ್ಲದೆ ಹರಿದು ಬರಲಿದೆ ಅನ್ನೋ ಲೆಕ್ಕಾಚಾರವೂ ಅಡಗಿದೆ.
ಚಮಕೌರ್ ಸಾಹೀಬ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಚರಣಜಿತ್ ಸಿಂಗ್ ಮೇಲೆ 2018ರಲ್ಲಿ ಮೀಟೂ ಆರೋಪ ಕೇಳಿಬಂದಿತ್ತು. ಮಹಿಳಾ ಐಎಎಸ್ ಅಧಿಕಾರಿಗೆ ಅನಗತ್ಯ ಸಂದೇಶ ಕಳುಹಿಸಿ ಕಿರಿ ಕಿರಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಸರ್ಕಾರದಿಂದ ಮಹಿಳಾ ಅಧಿಕಾರಿ ವರದಿ ಕೇಳಿದ್ದರು. ಕೇಸ್ ದಾಖಲಿಸದ ಕಾರಣ ಬಳಿಕ ಪ್ರಕರಣ ಮುಚ್ಚಿಹೋಗಿತ್ತು.