
ತೆಲಂಗಾಣ: ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಚಾರ್ ಮಿನಾರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಚಾರ್ ಮಿನಾರ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕೇಂದ್ರ ರೈಲ್ವೆಯ ಸಿಇಆರ್‌ಒ ರಾಕೇಶ್ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದು, ಅವರು ಹೇಳುವ ಪ್ರಕಾರ ಬೆಳಗ್ಗೆ 9.15ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಈ ರೈಲ್ವೆ ನಿಲ್ದಾಣವು ಟರ್ಮಿನಲ್ ಸ್ಟೇಷನ್ ಆಗಿದ್ದು, ಇಲ್ಲಿಗೆ ರೈಲುಗಳು ಬಂದು ಪ್ರಯಾಣ ಅಂತ್ಯಗೊಳಿಸುತ್ತಿದ್ದವು. ರೈಲು ಪ್ರಯಾಣ ಕೊನೆಗೊಳಿಸುವ ಮೊದಲು ನಿಲ್ಲಬೇಕಿತ್ತು. ಆದರೆ ರೈಲು ನಿಲ್ಲದೇ ಮಿತಿ ಮೀರಿ ಮುಂದೆ ಹೋದ ಪರಿಣಾಮ ಈ ಘಟನೆ ನಡೆದಿದೆ. ರೈಲಿನ ಮೂರು ಕೋಚುಗಳು ಹಳಿ ತಪ್ಪಿವೆ. ಈ ವೇಳೆ ರೈಲಿನ ಬಾಗಿಲ ಬಳಿ ನಿಂತಿದ್ದ ಐವರು ಕೆಳಗೆ ಬಿದ್ದು ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅವರನ್ನು ರೈಲ್ವೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋದಲ್ಲಿ ಕೆಟ್ಟದಾಗಿ ಕಿರುಚಿ ಭಯಭೀತಗೊಳಿಸಿ ವಿಡಿಯೋ; ಇನ್ಸ್‌ಟಾಗ್ರಾಂ ಸ್ಟಾರ್‌ಗೆ ದಂಡ ವಿಧಿಸಿದ ಬಿಎಂಆರ್‌ಸಿಎಲ್
ಈ ರೈಲು ಏರೋಪ್ಲೇನ್‌ಗಿಂತ ವೇಗವಾಗಿ ಓಡಬಲ್ಲದು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ