ಕೇವಲ 100 ದಿನದಲ್ಲಿ ರೆಡಿಯಾಯ್ತು ಉಗ್ರಂ ಸ್ವದೇಶಿ ರೈಫಲ್ !

By Kannadaprabha NewsFirst Published Jan 10, 2024, 10:12 AM IST
Highlights

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಖಾಸಗಿ ಸಂಸ್ಥೆಯೊಂದರ ಸಹಯೋಗದೊಂದಿಗೆ 'ಉಗ್ರಂ' ಎಂಬ ಆಕ್ರಮಣಕಾರಿ ಸಂಪೂರ್ಣ ದೇಶೀ ರೈಫಲ್ ಅನ್ನು ಅಭಿವೃದ್ಧಿಪಡಿಸಿದ್ದು, ಸೋಮವಾರ ಬಿಡುಗಡೆ ಮಾಡಲಾಗಿದೆ.
 

ನವದೆಹಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಖಾಸಗಿ ಸಂಸ್ಥೆಯೊಂದರ ಸಹಯೋಗದೊಂದಿಗೆ 'ಉಗ್ರಂ' ಎಂಬ ಆಕ್ರಮಣಕಾರಿ ಸಂಪೂರ್ಣ ದೇಶೀ ರೈಫಲ್ ಅನ್ನು ಅಭಿವೃದ್ಧಿಪಡಿಸಿದ್ದು, ಸೋಮವಾರ ಬಿಡುಗಡೆ ಮಾಡಲಾಗಿದೆ.

ಡಿಆರ್‌ಡಿಒ ಅಂಗಸಂಸ್ಥೆ ಆಗಿರುವ ಪುಣೆಯ ಎಆರ್‌ಡಿಇ ಹಾಗೂ ಹೈದರಾಬಾದ್‌ನ ಮೂಲದ ಖಾಸಗಿ ಸಂಸ್ಥೆ ದ್ವಿಪಾ  ಆರ್ಮರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದನ್ನು ಕೇವಲ 100 ದಿನದಲ್ಲಿ ಅಭಿವೃದ್ಧಿಪಡಿಸಿವೆ.  4 ಕೆಜಿಗಿಂತ ಕಡಿಮೆ ತೂಕದ ರೈಫಲ್ ಇದಾಗಿದೆ. 500 ಮೀ. ಅಥವಾ ಸರಿಸುಮಾರು 5 ಫುಟ್ಬಾಲ್ ಮೈದಾನಗಳ ವ್ಯಾಪ್ತಿಯನ್ನು ಹೊಂದಿದೆ.

Latest Videos

ಸೈಲೆಂಟ್‌ ಆಗಿ ಎದುರಾಳಿಯ ನೆಲ ಧ್ವಂಸ ಮಾಡಲಿದೆ ಮಾರಕ ದೇಶಿ ಡ್ರೋನ್‌, ಚಿತ್ರದುರ್ಗದಲ್ಲಿ ನಡೆಯಿತು ಪರೀಕ್ಷೆ!

ಈ ಆಯುಧವು ಸಂಪೂರ್ಣವಾಗಿ ದೇಶೀಯವಾಗಿದೆ ಮತ್ತು ಇದು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ. ಮತ್ತು ಇದು ಸುಮಾರು ನಾಲ್ಕು ಕೆಜಿ ತೂಗುತ್ತದೆ. ಸೈನ್ಯದ ಗುಣಮಟ್ಟ ಅಗತ್ಯತೆ (ಜಿಎಸ್‌ಕ್ಯುಆರ್) ಪ್ರಕಾರ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಪುತ್ತೂರು: ಡಿಆರ್‌ಡಿಒ ಯುವ ವಿಜ್ಞಾನಿ ಆತ್ಮಹತ್ಯೆ

 

click me!