ಚಹಾ ಮಾರುತ್ತಾ ಜೀವನ ಸಾಗಿಸುತ್ತಿದ್ದ ಚಾಯ್‌ವಾಲಾಗೆ 3.55 ಲಕ್ಷ ರೂಪಾಯಿ ಜಾಕ್‌ಪಾಟ್ ಸಿಕ್ಕಿದೆ. ತನ್ನೆಲ್ಲಾ ಸಂಕಷ್ಟಗಳು ಬಗೆಹರಿಯಲಿದೆ ಅನ್ನೋ ಖುಷಿಯಲ್ಲಿದ್ದ ಚಾಯ್‌ವಾಲಾನ ಬದುಕನ್ನು ನಕಲಿ ಲೋನ್ ಕರೆ ಅಂತ್ಯಗೊಳಿಸಿದೆ.
ಅಮೇಥಿ(ಆ.30) ಲಾಟರಿ ಟಿಕೆಟ್ ಮೂಲಕ ನಗದು ಬಹುಮಾನ ಗೆದ್ದು ಹಲವರು ಬದುಕು ಬದಲಾಗಿದೆ. ಕಡು ಬಡತನದಿಂದ ಹೊರಬಂದ ಹಲವು ಉದಾಹರಣೆಗಳಿವೆ. ಹೀಗೆ ಚಹಾ ಮಾರುತ್ತಾ ಜೀವನ ಸಾಗಿಸುತ್ತಿದ್ದ ಚಾಯ್‌ವಾಲಾಗೆ 3.55 ಲಕ್ಷ ರೂಪಾಯಿ ಲಾಟರಿ ಜಾಕ್‌ಪಾಟ್ ಸಿಕ್ಕಿದೆ. ಆತನ ಸಂಭ್ರಮಮ ಹೇಳತೀರದು, ತನ್ನೆಲ್ಲಾ ಕಷ್ಟಗಳು ಈ ಮೊತ್ತದಿಂದ ಪರಿಹಾರವಾಗಲಿದೆ. ಕಡು ಬಡತನದಿಂದ ಹೊರಬರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಚಾಯ್‌ವಾಲನ ಬದುಕೇ ಅಂತ್ಯಗೊಂಡಿದೆ. ನಕಲಿ ಸಾಲದ ಕರೆಗಳಿಂದ ಭಯಗೊಂಡ ಚಾಯ್‌ವಾಲ ಬುದುಕಿಗೆ ಪೂರ್ಣ ವಿರಾಮ ಇಟ್ಟ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಅಮೇಥಿಯ ರಾಕೇಶ್ ಕಳೆದ ಕೆಲ ವರ್ಷಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ. ಚಹಾ ಮಾರುತ್ತಾ ಜೀವನ ಸಾಗಿಸುತ್ತಿದ್ದ. 5 ವರ್ಷಗಳ ಹಿಂದೆ ತಂದೆ ಮೃತಪಟ್ಟಿದ್ದರೆ, ಕಳೆ ತಿಂಗಳ ಹಿಂದೆ ಸಹೋದರ ಮೃತಪಟ್ಟಿದ್ದ. ರಾಕೇಶ್‌ಗೆ ಇನ್ನು ಮುದುವೆಯಾಗಿಲ್ಲ, ಅಷ್ಟರಲ್ಲೇ ಮನೆಯ ಎಲ್ಲಾ ಜವಾಬ್ದಾರಿ, ತಾಯಿ ಆರೋಗ್ಯ ಸಮಸ್ಯೆಗಳ ಔಷಧಿ ಸೇರಿದಂತೆ ಎಲ್ಲವನ್ನೂ ಇದೇ ಚಹಾ ಮಾರಿ ಸಂಪಾದಿಸುತ್ತಿದ್ದ.
ಮೃತಪಟ್ಟ ನಾಯಿಯಿಂದ 41 ಲಕ್ಷ ರೂಪಾಯಿ ಗೆದ್ದ ಮಾಲೀಕ, ಪೆಟ್ ಡಾಗ್ ನೆನೆದು ಭಾವುಕ!
ಹೀಗಿರುವಾಗ ಅದೃಷ್ಟ ಪರೀಕ್ಷೆಗೆ ತೆಗದ ಲಾಟರಿಯಲ್ಲಿ 3.55 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಬಹುಮಾನ ಬಂದ ಸುದ್ದಿ ಗ್ರಾಮದಲ್ಲಿ ಹರಡಿದೆ. ಇದರ ನಡುವೆ ಗ್ರಾಮದ ನಾಲ್ವರಾದ ತೂಫಾನ್ ಸಿಂಗ್, ಅನುರಾಗ್ ಜೈಸ್ವಾಲ್, ವಿಶಾಲ್ ಸಿಂಗ್ ಹಂಸರಾಜ್ ಮೌರ್ಯ ಈತನಿಂದ ಹಣ ಕಿತ್ತುಕೊಳ್ಳಲು ಪ್ಲಾನ್ ಮಾಡಿದ್ದಾರೆ. ಲಾಟರಿ ಬಹುಮಾನದಲ್ಲಿ ಕಡಿತಗೊಂಡಿರುವ ತೆರಿಗೆ ಹಣವನ್ನು ಟ್ಯಾಕ್ಸ್ ಮೂಲಕ ವಾಪಸ್ ಕೊಡಿಸುವುದಾಗಿ ಹೇಳಿ ಈತನ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಪಡೆದಿದ್ದಾರೆ.
ಬಳಿಕ 1 ಲಕ್ಷ ರೂಪಾಯಿ ತಮಗೆ ನೀಡುವಂತೆ ಬೆದರಿಸಿದ್ದಾರೆ. ಹಲ್ಲೆ ನಡೆಸಿ ತಕ್ಷಣವೇ 1 ಲಕ್ಷ ರೂಪಾಯಿ ಕೊಡುವಂತೆ ಪೀಡಿಸಿದ್ದಾರೆ. ಇದಕ್ಕೆ ಜಗ್ಗದ ಕಾರಣ ಈತನ ದಾಖಲೆ ಬಳಸಿ ನಕಲಿ ಲೋನ್ ಪಡೆದಿರುವುದಾಗಿ ಕರೆ ಮಾಡಿ ಬೆದರಿಸಿದ್ದಾರೆ. ರಾಕೇಶ್ ದಾಖಲೆ ಇಟ್ಟು 10 ಲಕ್ಷ ರೂಪಾಯಿ ಸಾಲ ಪಡೆದಿದ್ದೇವೆ.ಈ ಸಾಲ ನಿನ್ನ ತಲೆ ಮೇಲಿದೆ ಎಂದು ಪದೇ ಪದೇ ಫೋನ್ ಮಾಡಿ ಬೆದರಿಸಿದ್ದಾರೆ. ನಕಲಿ ಸಾಲದ ಕರೆಗೆ ಮಾನಸಿಕವಾಗಿ ನೊಂದ ರಾಕೇಶ್ ಡಿಪ್ರೆಶನ್‌ಗೆ ಜಾರಿದ್ದಾರೆ.
ನಕಲಿ ಕರೆ ಎಂದು 6 ತಿಂಗಳಿನಿಂದ ನಿರ್ಲಕ್ಷಿಸಿದ ವ್ಯಕ್ತಿಗೆ ಕಾದಿತ್ತು ಅಚ್ಚರಿ!
ನಾಲ್ವರ ಕಾಟ ತಾಳಲಾದರೆ ಕೊನೆಗೆ ಬದುಕು ಅಂತ್ಯಗೊಳಿಸಿದ್ದಾರೆ. ರಾಕೇಶ್ ಸಾವಿನ ಸುದ್ದಿ ಬಯಲಾಗುತ್ತಿದ್ದಂತೆ ನಾಲ್ವರು ಪರಾರಿಯಾಗಿದ್ದಾರೆ. ಇತ್ತ ರಾಕೇಶ್ ತಾಯಿ ಈ ಕುರಿತು ದೂರು ನೀಡಿದ್ದಾರೆ. ಇದೀಗ ನಾಲ್ವರು ವಿರುದ್ಧ ಎಫ್ಐಆರ್ ದಾಖಲಾಗಿದೆ.