ರೆಡಿಮೇಡ್ ಮ್ಯಾಂಗೋ ಜ್ಯೂಸ್ ಕುಡಿತೀರಾ: ಈ ವೀಡಿಯೋ ನೋಡಿದ್ರೆ ಮತ್ತೆ ಕುಡಿಯಲ್ಲ

By Anusha KbFirst Published Aug 30, 2024, 12:51 PM IST
Highlights

ಟೆರ್ರಾ ಪ್ಯಾಕ್‌ನಲ್ಲಿ ಬರುವ ಮ್ಯಾಂಗೋ ಪ್ಲೇವರ್‌ನ ಜ್ಯೂಸ್ ಅಥವಾ ತಂಪು ಪಾನೀಯ ಅನೇಕರ ಪೇವರೇಟ್, ಮಕ್ಕಳು ಈ ಜ್ಯೂಸ್‌ಗಾಗಿ ಪೋಷಕರನ್ನು ಪೀಡಿಸುತ್ತಾರೆ. ಆದರೆ ಈಗ ವೈರಲ್ ಆದ ವೀಡಿಯೋವೊಂದು ಈ ಜ್ಯೂಸ್ ಹೇಗೆ ಮಾಡುತ್ತಾರೆ ಎಂಬುದನ್ನು ತೋರಿಸುತ್ತಿದ್ದು, ಇದು ಮ್ಯಾಂಗೋ ಜ್ಯೂಸ್ ಪ್ರಿಯರನ್ನು ದಂಗು ಬಡಿಸಿದೆ.

ಟೆರ್ರಾ ಪ್ಯಾಕ್‌ನಲ್ಲಿ ಬರುವ ಮ್ಯಾಂಗೋ ಪ್ಲೇವರ್‌ನ ಜ್ಯೂಸ್ ಅಥವಾ ತಂಪು ಪಾನೀಯ ಅನೇಕರ ಪೇವರೇಟ್, ಮಕ್ಕಳು ಈ ಜ್ಯೂಸ್‌ಗಾಗಿ ಪೋಷಕರನ್ನು ಪೀಡಿಸುತ್ತಾರೆ. ಆದರೆ ಈಗ ವೈರಲ್ ಆದ ವೀಡಿಯೋವೊಂದು ಈ ಜ್ಯೂಸ್ ಹೇಗೆ ಮಾಡುತ್ತಾರೆ ಎಂಬುದನ್ನು ತೋರಿಸುತ್ತಿದ್ದು, ಇದು ಮ್ಯಾಂಗೋ ಜ್ಯೂಸ್ ಪ್ರಿಯರನ್ನು ದಂಗು ಬಡಿಸಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾಮಾನ್ಯವಾಗಿ ಮ್ಯಾಂಗೋ ಜ್ಯೂಸ್‌ನ ಜಾಹೀರಾತುಗಳನ್ನು ನೀವು ಟಿವಿಗಳಲ್ಲಿ ನೋಡಿರುತ್ತಿರಿ. ಬಹುತೇಕ ಕಂಪನಿಗಳು ಈ ಜಾಹೀರಾತಿನಲ್ಲಿ ತಾಜಾ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಎಂದು ಈ ಜ್ಯೂಸನ್ನು ಬಿಂಬಿಸುತ್ತಾರೆ. ಆದರೆ ಅಸಲಿಯತ್ತು ಬೇರೆಯೇ ಇದೆ. ತಾಜ ಹಣ್ಣು ಬಿಡಿ ಒಂದೇ ಒಂದು ಪೀಸ್ ಮಾವಿನ ಹಣ್ಣನ್ನು ಕೂಡ ಈ ಜ್ಯೂಸ್ ಮಾಡುವ ವೇಳೆ ಬಳಸುವುದಿಲ್ಲ ಎಂಬ ವಿಚಾರ ಈ ವಿಡಿಯೋದಿಂದ ತಿಳಿದು ಬರುತ್ತಿದೆ. 

Latest Videos

ಇದು ಕೋಟ್ಯಧಿಪತಿಗಳ ಮದ್ಯವಂತೆ..! ಜಗತ್ತಿನ 10 ದುಬಾರಿ ಆಲ್ಕೋಹಾಲ್‌ಗಳ ಲಿಸ್ಟ್‌!

ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು. ಆ ವೀಡಿಯೋದಲ್ಲಿ ಕಾಣಿಸುವಂತೆ ಜ್ಯೂಸ್ ಮಾಡುವ ವೇಳೆ ಕೇವಲ ಹಳದಿ ಹಾಗೂ ಕೆಂಪು ಬಣ್ಣದ ಕಲರ್ ಪೌಡರ್‌ಗಳು ಸಕ್ಕರೆ, ಸಿರಪ್‌, ಹಾಗೂ ಇತರ ರಾಸಾಯನಿಕಗಳನ್ನು ಬಳಸುತ್ತಾರೆಯೇ ಹೊರತು ಎಲ್ಲೂ ತಾಜಾ ಮ್ಯಾಂಗೋ ಕಣ್ಣಿಗೆ ಕಾಣಿಸುವುದಿಲ್ಲ, ನಂತರ ಅದನ್ನು ಒಂದಾದ ಮೇಲೊಂದರಂತೆ ಅದರಷ್ಟಕ್ಕೆ ಪ್ಯಾಕ್ ಆಗಿ ಬರುವ ಜ್ಯೂಸ್ ಪ್ಯಾಕೇಟ್‌ಗಳನ್ನು ಬಾಕ್ಸ್‌ಗಳಿಗೆ ತುಂಬಿ ಮಾರ್ಕೆಟ್‌ಗೆ ಬಿಡಲಾಗುತ್ತದೆ. ಈ ವೀಡಿಯೋಗೆ ಟೆಟ್ರಾ ಪ್ಯಾಕ್ ಮ್ಯಾಂಗೋ ಜ್ಯೂಸ್ ಅಂತ ಪೋಸ್ಟ್ ಮಾಡಿದವರು ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ಪೋಸ್ಟ್ ಆದ ಸ್ವಲ್ಪ ಸಮಯದಲ್ಲೇ ವೈರಲ್ ಆಗಿದ್ದು, ಅನೇಕರು ಈ ಜ್ಯೂಸ್ ಮಾಡುವ ಶೈಲಿಯನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಹಾರ್ಲಿಕ್ಸ್, ಬೂಸ್ಟ್‌ಗಿನ್ನು ಆರೋಗ್ಯ ಪೇಯ ಪಟ್ಟ ಇಲ್ಲ..!

ಅನೇಕರು ಸೋಶಿಯಲ್ ಮೀಡಿಯಾಗೆ ಧನ್ಯವಾದ ಸಲ್ಲಿಸಿದ್ದು, ನಾನು ರುಚಿ ರುಚಿಯೆನಿಸುವ ಈ ತರಹದ ಸಾಕಷ್ಟು ಜ್ಯೂಸ್‌ಗಳನ್ನು ಕುಡಿಯುತ್ತಿದೆ. ಇನ್ನು ಮುಂದೆ ಇವುಗಳನ್ನು ನಾನು ಖರೀದಿಸುವುದಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಅನೇಕರು ತಾವು ಇನ್ನು ಮುಂದೆ ಈ ರೀತಿಯ ಜ್ಯೂಸ್ ಪ್ಯಾಕೇಟ್‌ಗಳನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಕಾಮೆಂಟ್ ಮಾಡಿದ್ದಾರೆ. ನಲ್ಲಿ ನೀರು ಬೇಕಾದರೆ ಕುಡಿಯುತ್ತೇನೆ, ವಿಸ್ಕಿ ವೈನ್ ಬೇಕಾದರೆ ಕುಡಿಯುತ್ತೇನೆ ಆದರೆ ಇನ್ನು ಮುಂದೆ ಈ ಜ್ಯೂಸ್ ಕುಡಿಯುವುದನ್ನು ನಿಲ್ಲಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದರಲ್ಲಿ ಮ್ಯಾಂಗೋ ತುಂಡುಗಳು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇದೊಂದು ಸ್ಲೋ ಪಾಯಿಸನ್ ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ವೀಡಿಯೋ ನೋಡಿ ದಿಗ್ಭ್ರಮೆ ಭಯ ವ್ಯಕ್ತಪಡಿಸಿದ್ದಾರೆ.

 

click me!