
ಮಹಾರಾಷ್ಟ್ರ: ದೇಶದ ಹಲವೆಡೆ ಚಡ್ಡಿ ಬನಿಯನ್ ಧರಿಸಿ ಕಳ್ಳತನ ಮಾಡುವ ಮೂಲಕ ಕುಖ್ಯಾತವಾಗಿರುವ ಚಡ್ಡಿ ಬನಿಯನ್ ಗ್ಯಾಂಗೊಂದು ಈಗ ಮಹಾರಾಷ್ಟ್ರ ನಾಸಿಕ್‌ನಲ್ಲಿ ಕಾರ್ಯಾಚರಿಸುತ್ತಿದೆ. ಇವರು ಮನೆಯೊಂದಕ್ಕೆ ನುಗ್ಗಿ 70 ಗ್ರಾಂ ಚಿನ್ನಾಭರಣ ಹಾಗೂ ಬಾಳೆಹಣ್ಣು ಎತ್ತಿಕೊಂಡು ಹೋಗಿದ್ದರು, ಈ ಕಳ್ಳರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದವು. ಇದು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ನಾಸಿಕ್‌ನ ಮಲೆಗಾಂವ್ ಬಳಿ ಮನೆ ಹಾಗೂ ಕಾಲೇಜಿನಲ್ಲಿ ಈ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಳ್ಳತನದ ವೇಳೆ ಇವರೆಲ್ಲರೂ ಚಡ್ಡಿ ಹಾಗೂ ಬನಿಯನ್ ಧರಿಸಿರುವುದು ಕಂಡು ಬಂದಿದೆ. ಸೆಪ್ಟೆಂಬರ್ 2 ರ ರಾತ್ರಿ ಈ ಘಟನೆ ನಡೆದಿದ್ದು, ಮನೆಯೊಂದರಿಂದ ಅಂದಾಜು 5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ ಎಂದು ವರದಿ ಆಗಿತ್ತು.
ಆದರೆ ಈಗ ಇದೇ ಕಳ್ಳರ ಗ್ಯಾಂಗ್ ಬುಧವಾರ ರಾತ್ರಿ ಅಂದರೆ ಸೆಪ್ಟೆಂಬರ್ 9 ರಂದು ಮತ್ತೆ ಮಲೆಂಗಾವ್‌ನಲ್ಲಿ ಹಲವು ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಗೊಬ್ಬರ, ಹಾರ್ಡ್ವೇರ್ ವಸ್ತುಗಳು, ಕರೆಂಟ್ ಪಂಪ್‌ಗಳನ್ನು ಮಾರಾಟ ಮಾಡುತ್ತಿದ್ದ ಮಲೆಗಾಂವ್‌ನ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಸರಕುಗಳನ್ನು ಕದ್ದು ಪರಾರಿಯಾಗಿದ್ದಾರೆ. ಚಡ್ಡಿ ಬನಿಯನ್ ಧರಿಸಿಯೇ ಬಂದು ಕಳ್ಳತನ ಮಾಡುವ ಇವರು ತಮ್ಮ ಕೈಯಲ್ಲಿ ಹರಿತವಾದ ಆಯುಧಗಳನ್ನು ಇರಿಸಿಕೊಂಡಿರುತ್ತಾರೆ. ದೇಶದ ಹಲವೆಡೆ ಈ ಹಿಂದೆಯೂ ಈ ರೀತಿ ಘಟನೆಗಳು ನಡೆದಿದ್ದು, ಈ ಗ್ಯಾಂಗ್ ಆ ಗ್ಯಾಂಗ್‌ಗೂ ಸಂಬಂಧವಿದೆಯೋ ಅಥವಾ ಇದು ಬೇರೆಯದೇ ಗ್ಯಾಂಗೋ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ಕೊಪ್ಪಳ: ಹಂದಿ ಕಳ್ಳರ ಗ್ಯಾಂಗ್ ಹಿಡಿಯಲು ಹೋದ ಪುರಸಭೆ ಸದಸ್ಯ ಸಾವು
ಗೃಹ ಸಚಿವರ ತವರಲ್ಲಿ ಕಳ್ಳರಿಗೆ ವಿಶೇಷ ನೌಕರಿ; ಕಳ್ಳತನ ಉದ್ಯೋಗಕ್ಕೆ ಮಾಸಿಕ 20 ಸಾವಿರ ರೂ. ಸಂಬಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ