ಗಂಗೆಯ ಒಡಲಲ್ಲಿ ತೇಲುತ್ತಿರುವ ಹೆಣಗಳಿಗೆ ಕೇಂದ್ರವೇ ನೇರ ಹೊಣೆ: ರಾಗಾ ಕಿಡಿ!

By Suvarna NewsFirst Published May 24, 2021, 5:11 PM IST
Highlights

* ಗಂಗಾನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಹೆಣಗಳು

* ಗಂಗಾ ನದಿಯಲ್ಲಿ ಹೆಣಗಳು ತೇಲಲು ಕೇಂದ್ರವೇ ಕಾರಣ

* ಕೇಂದ್ರದ ವಿರುದ್ಧ ರಾಹುಲ್ ಕಿಡಿ

ನವದೆಹಲಿ(ಮೇ.24): ಕೊರೋನಾ ಅಬ್ಬರದ ನಡುವೆ ಬಿಹಾರ, ಉತ್ತರ ಪ್ರದೇಶ ಭಾಗದಲ್ಲಿ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದು, ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ, ಅದು ಸಾಮೂಹಿಕ ಜವಾಬ್ದಾರಿಯಲ್ಲ. ಗಂಗಾ ನದಿಯಲ್ಲಿ ತಮ್ಮ ಸಂಬಂಧಿಕರನ್ನು ಬಿಟ್ಟವರ ನೋವು ಅರ್ಥ ಮಾಡಿಕೊಳ್ಳಬೇಕು. ಅದು ಅವರ ತಪ್ಪಲ್ಲ ಎಂದಿದ್ದಾರೆ.

1 ವಾರದಲ್ಲಿ ಗಂಗೆಯಲ್ಲಿ ತೇಲಿ ಬಂದವು 2000 ಶವ!

ಮೃತದೇಹಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇಡೀ ದೇಶ ಹಾಗೂ ವಿಶ್ವವೇ ಇಂತಹ ದೃಶ್ಯಗಳನ್ನು ಗಮನಿಸುತ್ತಿದೆ. ಆದರೆ ಈ ವೇಳೆ ನದಿ ಬದಿ ಸಂಬಂಧಿಕರ ಶವ ಬಿಟ್ಟು ಹೋದವರ ನೋವನ್ನು ಅರ್ಥೈಸಿಕೊಳ್ಳಬೇಕು. ಅದು ಅವರ ತಪ್ಪಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

मुझे शवों के फ़ोटो साझा करना अच्छा नहीं लगता। देश-दुनिया फ़ोटो देखकर दुखी है लेकिन जिन्होंने मजबूरी में मृत प्रियजनों को गंगा किनारे छोड़ दिया, उनका दर्द भी समझना होगा- ग़लती उनकी नहीं है।

इसकी ज़िम्मेदारी सामूहिक नहीं, सिर्फ़ केंद्र सरकार की है!

— Rahul Gandhi (@RahulGandhi)

ಅಲ್ಲದೇ ಇದು ಸಾಮೂಹಿಕ ಜವಾಬ್ದಾರಿಯಲ್ಲ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ರಾಹುಲ್ ಗಾಂಧಿ ಈ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಗಂಗೆಯಲ್ಲಿ ಹರಿದು ಬಂತು ಶವಗಳ ರಾಶಿ, ನಮ್ಮದಲ್ಲ ಉ. ಪ್ರದೇಶದ್ದೆಂದ ಬಿಹಾರ!

ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಇತ್ತೀಚಿಗೆ ಗಂಗಾ ನದಿಯಲ್ಲಿ ಭಾರೀ ಸಂಖ್ಯೆಯಲ್ಲಿ ಕೊರೋನಾ ಶಂಕಿತ ಮೃತದೇಹಗಳು ತೇಲುವ ದೃಶ್ಯಗಳು ವೈರಲ್ ಆಗಿದ್ದವು. ಇದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆಂಬುವುದು ಉಲ್ಲೇಖನೀಯ. 

click me!