
ನವದೆಹಲಿ(ಜೂ.09): ಇನ್ನೂ ಪ್ರಯೋಗದ ಹಂತದಲ್ಲಿರುವ ಔಷಧವನ್ನೂ ಕೂಡ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ರೋಗಿಗಳಿಗೆ ನೀಡಲು ಅನುಕೂಲವಾಗುವಂತೆ ನಿಯಮಗಳಿಗೆ ತಿದ್ದುಪಡಿ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು, ಜಗತ್ತಿನ ಯಾವುದೇ ಭಾಗದಲ್ಲಿ ಕ್ಲಿನಿಕಲ್ ಟ್ರಯಲ್-3ನೇ ಹಂತದಲ್ಲಿರುವ (ಮನುಷ್ಯರ ಮೇಲೆ ಪ್ರಯೋಗ), ಆದರೆ ಇನ್ನೂ ಮಾರಾಟಕ್ಕೆ ಅನುಮೋದನೆ ಪಡೆಯದಿರುವ ಔಷಧವನ್ನು ಮಾನವೀಯತೆಯ ದೃಷ್ಟಿಯಿಂದ ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ನೀಡಬಹುದು ಎಂದು ಅದರಲ್ಲಿ ಹೇಳಲಾಗಿದೆ. ಇದಕ್ಕೆ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಇನ್ನು 15 ದಿನದಲ್ಲಿ ಅಂತಿಮ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.
ಮರದಿಂದ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ; 9ರ ಬಾಲಕನಿಗೆ ಕೀನ್ಯ ಅಧ್ಯಕ್ಷನ ಪುರಸ್ಕಾರ!
ಆದರೆ, ಅಂತಿಮ ಅನುಮೋದನೆ ಪಡೆಯದಿರುವ ಇಂತಹ ಔಷಧಗಳನ್ನು ರೋಗಿಗೆ ನೀಡಲು ಆಸ್ಪತ್ರೆ ಹಾಗೂ ಔಷಧ ತಯಾರಕರು ರೋಗಿಯಿಂದ ಅಥವಾ ರೋಗಿಯ ಸಂಬಂಧಿಯಿಂದ ಲಿಖಿತ ಅನುಮತಿ ಪಡೆದಿರಬೇಕು. ನಂತರ ರೋಗಿಗೆ ಈ ಔಷಧ ನೀಡಲು ಆಸ್ಪತ್ರೆಯ ನೈತಿಕ ಸಮಿತಿಯಿಂದ ಹಾಗೂ ಹೊಸ ಔಷಧ ತಯಾರಿಸಲು ಅನುಮತಿ ನೀಡುವ ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಒಪ್ಪಿಗೆ ಪಡೆದಿರಬೇಕು. ಈ ಅನುಮತಿಗಳು ದೊರೆತ ಮೇಲೆ ಆ ರೋಗಿಗೆ ಮಾತ್ರ ಔಷಧವನ್ನು ನೀಡಬೇಕು. ಬೇರೆಲ್ಲೂ ಈ ಔಷಧವನ್ನು ಮಾರಾಟ ಮಾಡುವಂತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ