ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್‌

By Govindaraj S  |  First Published Oct 6, 2022, 6:23 AM IST

ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕದ ಕೊಡಚಾದ್ರಿ ಶಿಖರದ ತುದಿಗೆ ರೋಪ್‌ವೇ ಸಂಪರ್ಕ ಕಲ್ಪಿಸುವ ಯೋಜನೆ ಸೇರಿದಂತೆ ಒಟ್ಟು 90 ಕಿ.ಮೀ. ದೂರದ 18 ರೋಪ್‌ವೇ ಯೋಜನೆಗಳ ಕಾಮಗಾರಿಯನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಳೆದ ವಾರ ಬಿಡ್‌ಗಳನ್ನು ಆಹ್ವಾನಿಸಿತ್ತು ಎಂದು ಮೂಲಗಳು ತಿಳಿಸಿವೆ.


ನವದೆಹಲಿ (ಅ.06): ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕದ ಕೊಡಚಾದ್ರಿ ಶಿಖರದ ತುದಿಗೆ ರೋಪ್‌ವೇ ಸಂಪರ್ಕ ಕಲ್ಪಿಸುವ ಯೋಜನೆ ಸೇರಿದಂತೆ ಒಟ್ಟು 90 ಕಿ.ಮೀ. ದೂರದ 18 ರೋಪ್‌ವೇ ಯೋಜನೆಗಳ ಕಾಮಗಾರಿಯನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಳೆದ ವಾರ ಬಿಡ್‌ಗಳನ್ನು ಆಹ್ವಾನಿಸಿತ್ತು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಕಷ್ಟಕರವಾದ ಟ್ರಕ್ಕಿಂಗ್‌ಗಳಲ್ಲಿ ಕೊಡಚಾದ್ರಿ ಸಹ ಒಂದಾಗಿದ್ದು, ಇಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರವಾಸಿಗರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ‘ಪರ್ವತಾಮಾಲ’ ಯೋಜನೆಯಡಿ 7 ಕಿ.ಮೀ. ಉದ್ದದ ರೋಪ್‌ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಇದೀಗ ಯೋಜನೆ ನಿರ್ಮಾಣಕ್ಕೆ ಬಿಡ್‌ ಆಹ್ವಾನಿಸಲಾಗಿದ್ದು, 2022ರ ಡಿಸೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಡ್ಡಿಂಗ್‌ ಷರತ್ತಿನಲ್ಲಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಬಿಆರ್‌ಎಸ್‌ ಜತೆ ಸೇರಿ ಮುಂದಿನ ಚುನಾವಣೆ ಎದುರಿಸ್ತೇವೆ: ಕುಮಾರಸ್ವಾಮಿ

ಇದಲ್ಲದೇ ಜ್ಯೋತಿಲಿಂಗ ಕ್ಷೇತ್ರಗಳಲ್ಲಿ ಒಂದಾದ ಆಂಧ್ರಪ್ರದೇಶದ ಕರ್ನೂಲಿನಲ್ಲಿರುವ ಶ್ರೀ ಶೈಲಂನಲ್ಲಿ ಕೃಷ್ಣಾ ನದಿಯ ಮೇಲ್ಭಾಗದಲ್ಲಿ ರೋಪ್‌ ವೇ, ಲೇಹ್‌ ಪ್ಯಾಲೇಸ್‌ ಅನ್ನು ಲಡಾಖ್‌ನ ಇತರ ಭಾಗಗಳಿಗೆ ಸೇರಿಸುವ ರೋಪ್‌ವೇ, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ (2 ಕಿ.ಮೀ.) ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ದರ್ಶನ್‌ ದಿಯೋಪಿಯಿಂದ ಶೀವ್ಕೋರಿ (12 ಕಿ.ಮೀ.), ಹಿಮಾಚಲ ಪ್ರದೇಶದ ಕುಲುವಿನ ಬಿಜಲಿ ಮಹಾದೇವ ದೇವಸ್ಥಾನ (3 ಕಿ.ಮೀ.)ದಲ್ಲಿ ರೋಪ್‌ವೇಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.

ಭಾರತ್‌ ಜೋಡೋ ಯಾತ್ರೆ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿ

ವಾರಾಣಸಿಯಿಂದ ಕೇದಾರನಾಥ ಮತ್ತು ಹೇಮಕುಂಡ ಸಾಹಿಬ್‌ಗಳಿಗೆ ರೋಪ್‌ವೇಗಳನ್ನು ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ ಸೂಚಿಸಿದೆ. ಪರ್ವತಮಾಲಾ ಯೋಜನೆಯಡಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ರೋಪ್‌ವೇಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಹೇಳಿದ್ದರು.

click me!