ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ, 7 ಭಕ್ತರ ಸಾವು ಹಲವರು ನಾಪತ್ತೆ!

By Suvarna NewsFirst Published Oct 5, 2022, 11:25 PM IST
Highlights

ದಿಢೀರ್ ಪ್ರವಾಹ ಸೃಷ್ಟಿಯಾದ ಕಾರಣ ನದಿ ದಂಡೆಯಲ್ಲಿ ನಿಂತಿದ್ದ ಭಕ್ತರು ಕೊಚ್ಚಿ ಹೋಗಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ಕಾಣೆಯಾಗಿದ್ದಾರೆ. ಮೂವರ ಮೃತದೇಹ ಪತ್ತೆಯಾಗಿದೆ.

ಜಲ್‌ಪೈಗುರಿ(ಅ.05):  ಪಶ್ಚಿಮ ಬಂಗಳಾದಲ್ಲಿ ದುರ್ಗಾ ವಿಸರ್ಜನೆ ವೇಳೆ ದಿಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವು ಭಕ್ತರು ಕೊಚ್ಚಿ ಹೋದ ಘಟನೆ ನಡೆದಿದೆ. ಜಲ್‌ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದೆ. ಕಳೆದೆರಡು ದಿನದಿಂದ ಸತತ ಮಳೆಯಾಗುತ್ತಿದ್ದ ಕಾರಣ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ.ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 7 ಮಂದಿ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. 60ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರಕ್ಷಿಸಿದ ಭಕ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಅತೀ ದೊಡ್ಡ ಹಬ್ಬವಾಗಿದೆ. ದುರ್ಗಾ ಮೂರ್ತಿ ಆರಾಧಿಸಿ ವಿಸರ್ಜನೆ ಮಾಡುವುದು ಸಂಪ್ರದಾಯ. ಹೀಗೆ ಮಾಲ್‌ಬಜಾರ್‌ನಲ್ಲಿನ ದುರ್ಗಾ ಪೂಜೆಗೆ ಇಡೀ ಗ್ರಾಮವೇ ಸೇರಿತ್ತು. ದುರ್ಗಾ ಮೂರ್ತಿ ವಿಸರ್ಜನೆ ಮಾಡುವ ವೇಳೆ ಹಲವು ಭಕ್ತರು ನದಿ ದಂಡೆಯಲ್ಲಿ ನಿಂತಿದ್ದರು. ಈ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಮಕ್ಕಳು, ಮಹಳೆಯರು, ವೃದ್ಧರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಮಾಲ್‌ಬಜಾರ್‌ನ ಖ್ಯಾತ ಬಟ್ಟೆ ವ್ಯಾಪಾರಿ ತನ್ನ ಮೊಮ್ಮಗನೊಂದಿಗೆ ದುರ್ಗಾ ಮೂರ್ತಿ ವಿಸರ್ಜನೆಗೆ ತೆರಳಿದ್ದರು. ಮಗುವನ್ನು ತೊಡೆಯಲ್ಲಿ ಕುಳ್ಳಿರಿಸಿ ವಿಸರ್ಜನೆ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಪ್ರವಾಹ ಬಂದ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ ಮಗುವನ್ನು ದಡಕ್ಕೆ ಎಸೆದ ಬಟ್ಟೆ ವ್ಯಾಪಾರಿ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮಗುವನ್ನು ರಕ್ಷಿಸಲಾಗಿದೆ. ಆದರೆ ಬಟ್ಟೆ ವ್ಯಾಪಾರಿ ನಾಪತ್ತೆಯಾಗಿದ್ದಾರೆ.

ಭಾರತಕ್ಕೆ ಮತ್ತೆ ಕಾಡಿದ ಮೇಘಸ್ಫೋಟ, ಹಿಮಾಚಲ ಪ್ರದೇಶ ಪ್ರವಾಹಕ್ಕೆ 15 ಸಾವು, 8 ಮಂದಿ ನಾಪತ್ತೆ!

ಸದ್ಯದ ಮಾಹಿತಿ ಪ್ರಕಾರ 7 ಭಕ್ತರ ಮೃತದೇಹ ಪತ್ತೆಯಾಗಿದೆ. 50ಕ್ಕೂ ಹೆಚ್ಚೂ ಮಂದಿಯನ್ನು ರಕ್ಷಿಸಲಾಗಿದೆ. ದಿಢೀರ್ ಪ್ರವಾಹ ಸೃಷ್ಟಿಯಾದ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ನದಿ ದಂಡೆಯಲ್ಲಿದ್ದರು. ಇದರಲ್ಲಿ ಬಹುತೇಕರು ಕೊಚ್ಚಿ ಹೋಗಿದ್ದಾರೆ. ನದಿ ಕಳೆಗಿನ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ರಕ್ಷಣಾ ಪಡೆ, ತಜ್ಞರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

click me!