ನವದೆಹಲಿ(ಜೂ.08): ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಉಚಿತ ಲಸಿಕೆ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ. ಕೇವಲ 150 ರೂಪಾಯಿ ಸರ್ವೀಸ್ ಚಾರ್ಜ್ ಹೆಚ್ಚುವರಿಯಾಗಿ ತೆಗೆದುಕೊಳ್ಳಬುಹುದು ಎಂದು ಮೋದಿ ಹೇಳಿದ್ದಾರೆ. ಇದೀಗ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ದರ ನಿಗದಿ ಮಾಡಿದೆ.
ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ(ತೆರಿಗೆ, ಸರ್ವೀಸ್ ಚಾರ್ಜ್ ಸೇರಿ)
ಕೋವಾಕ್ಸಿನ್: 1,410 ರೂಪಾಯಿ
ಕೋವಿಶೀಲ್ಡ್: 780 ರೂಪಾಯಿ
ಸ್ಫುಟ್ನಿಕ್ ವಿ : 1,145 ರೂಪಾಯಿ
ಇದು ಗರಿಷ್ಠ ಬೆಲೆ, ಈ ಬೆಲೆಯಲ್ಲಿ ತೆರಿಗೆ, ಮೋದಿ ಹೇಳಿದ 150 ರೂಪಾಯಿ ಸರ್ವೀಸ್ ಚಾರ್ಜ್ ಸೇರಿಸಲಾಗಿದೆ. ಈ ಬೆಲೆಗಿಂತ ಹೆಚ್ಚಿಗೆ ವಸೂಲಿ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಉಚಿತ ವಾಕ್ಸಿನ್ ಘೋಷಣೆ ಬೆನ್ನಲ್ಲೇ ಮಹತ್ವದ ಹೆಜ್ಜೆ; 44 ಕೋಟಿ ಲಸಿಕೆಗೆ ಆರ್ಡರ್!
ಇನ್ನು ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಸಂಪೂರ್ಣ ಉಚಿತವಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಇನ್ನು ಇಂದು ಕೇಂದ್ರ ಸರ್ಕಾರ 44 ಕೋಟಿ ಲಸಿಕೆಗೆ ಆರ್ಡರ್ ಮಾಡಿದೆ. 25 ಕೋಟಿ ಕೋವಿಶೀಲ್ಡ್ ಹಾಗೂ 19 ಕೋಟಿ ಕೋವಾಕ್ಸಿನ್ ಲಸಿಕೆಗೆ ಆರ್ಡರ್ ಮಾಡಿದೆ.