ರಾಜೀವ್ ಹಂತಕರ ಬಿಡುಗಡೆ ಆದೇಶ ಪುನರ್ ಪರಿಶೀಲಿಸಲು ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ!

By Suvarna NewsFirst Published Nov 17, 2022, 9:11 PM IST
Highlights

ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂ ಕೋರ್ಟ್ ಬಂಧ ಮುಕ್ತಗೊಳಿಸಿ ಆದೇಶ ಹೊರಡಿಸಿ ಒಂದು ವಾರ ಕಳೆದಿದೆ. 31 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ  6 ಹಂತಕರು ಈಗಾಗಲೇ ಬಿಡುಗಡೆಯಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಆದೇಶ ಪುನರ್ ಪರಿಶೀಲಿಸಲು ಮನವಿ ಮಾಡಿದೆ.
 

ನವದೆಹಲಿ(ನ.17): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂ ಕೋರ್ಟ್ ಬಂಧ ಮುಕ್ತಗೊಳಿಸಿದೆ. 31 ವರ್ಷಗಳಿಂದ ಜೈಲಿನಲ್ಲಿದ್ದ ರಾಜೀವ್ ಗಾಂಧಿ ಹಂತಕರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ನಿರ್ಧಾರವನ್ನು ಕೇಂದ್ರ ಸರ್ಕಾರ, ಕಾಂಗ್ರೆಸ್ ಸೇರಿದಂತೆ ಹಲವು ರಾಜ್ಯಗಳು ವಿರೋಧಿಸಿತ್ತು. ಆದರೆ ತಮಿಳುನಾಡಿನಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಲಾಗಿತ್ತು. ಬಿಡುಗೆಯಾದ ವಾರದ ಬಳಿಕ ಇದೀಗ ಕೇಂದ್ರ ಸರ್ಕಾರ ಸುಪ್ರೀಂ ಆದೇಶವನ್ನು ಪುನರ್ ಪರಿಶೀಲಿಸಲು ಮನವಿ ಸಲ್ಲಿಸಿದೆ.  

ಅಪರಾಧಿಗಳ ಬಿಡುಗಡೆ ವೇಳೆ ಸೂಕ್ತ ವಿಚಾರಣೆ ನಡೆದಿಲ್ಲ. ಇದು ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಇದು ಅತ್ಯಂತ ಸೂಕ್ಷ್ಮ ವಿಚಾರ. ಈ ಬೆಳವಣಿಗೆ ದೇಶದ ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಹಾಗೂ ಕ್ರಿಮಿನಲ್ ನ್ಯಾಯವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ತನ್ನ ಮನವಿಯಲ್ಲಿ ಹೇಳಿದೆ. 

ತಂದೆಯ ಸಾವಿನ ಬಗ್ಗೆ ವೆಲ್ಲೂರು ಜೈಲಲ್ಲಿ ಪ್ರಿಯಾಂಕಾ ನನ್ನ ಪ್ರಶ್ನೆ ಮಾಡಿದ್ದರು: ನಳಿನಿ ಶ್ರೀಹರನ್‌!

ಜೈಲಿನಿಂದ ಬಿಡುಗಡೆಯಾಗಿರುವ 6 ಹಂತಕರು
ನಳಿನಿ ಶ್ರೀಹರನ್‌, ಆರ್‌.ಪಿ.ರವಿಚಂದ್ರನ್‌, ಶಾಂತನ್‌, ಮುರುಗನ್‌ (ನಳಿನಿ ಪತಿ), ರಾಬರ್ಚ್‌ ಪಯಸ್‌ ಹಾಗೂ ಜಯಕುಮಾರ್‌ ಬಿಡುಗಡೆಗೆ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠ ಸೂಚಿಸಿದೆ. ‘ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬದ ಕಾರಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈಗ ಎಲ್ಲರೂ ಶಿಕ್ಷೆ ಅನುಭವಿಸಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಅವರ ಬಿಡುಗಡೆಗೆ ಶಿಫಾರಸು ಮಾಡಿದೆ. ಅವರು ಬೇರೆ ಪ್ರಕರಣದಲ್ಲಿ ಬೇಕಿಲ್ಲದಿದ್ದರೆ ಬಿಡುಗಡೆ ಮಾಡಬಹುದು’ ಎಂದು ನ್ಯಾಯಪೀಠ ತಿಳಿಸಿದೆ.

‘ಸಂವಿಧಾನದ ಪರಿಚ್ಛೇದ 142ರಲ್ಲಿ ಇರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೇ 18ರಂದು ನ್ಯಾಯಾಲಯ ಪೆರಾರಿವಾಲನ್‌ ಎಂಬ ಮತ್ತೊಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತ್ತು. ಅದೇ ಆದೇಶ ಪ್ರಕರಣದ ಇತರೆ ಅಪರಾಧಿಗಳಿಗೂ ಅನ್ವಯವಾಗುತ್ತದೆ’ ಎಂದು ತಿಳಿಸಿದೆ. ಸಂವಿಧಾನದ ಪರಿಚ್ಛೇದ 142ರಡಿ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ತೀರ್ಪು ಅಥವಾ ಆದೇಶ ಹೊರಡಿಸಲು ಸುಪ್ರೀಂಕೋರ್ಚ್‌ಗೆ ಅಧಿಕಾರವಿದೆ. ‘ಶಿಕ್ಷೆ ಅನುಭವಿಸುವ ಹಂತದಲ್ಲಿ ಅವರ ನಡವಳಿಕೆ ತೃಪ್ತಿದಾಯಕವಾಗಿದೆ. ಅಲ್ಲದೆ ಅವರು ವಿವಿಧ ಅಧ್ಯಯನವನ್ನೂ ನಡೆಸಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯದ ಈ ಆದೇಶಕ್ಕೆ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಳಿನಿ ಹಾಗೂ ರವಿಚಂದ್ರನ್‌ ಅವರು 2021ರ ಡಿ.27ರಿಂದ ಪರೋಲ್‌ ಮೇಲಿದ್ದಾರೆ. ಉಳಿದ ನಾಲ್ವರು ಜೈಲಿನಲ್ಲಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?

click me!