Asianet Suvarna News Asianet Suvarna News

ತಂದೆಯ ಸಾವಿನ ಬಗ್ಗೆ ವೆಲ್ಲೂರು ಜೈಲಲ್ಲಿ ಪ್ರಿಯಾಂಕಾ ನನ್ನ ಪ್ರಶ್ನೆ ಮಾಡಿದ್ದರು: ನಳಿನಿ ಶ್ರೀಹರನ್‌!

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲಿ ಸೇರಿದ್ದ ನಳಿನಿ ಶ್ರೀಹರನ್‌ ಹಾಗೂ ರವಿಚಂದ್ರನ್‌ ಸೇರಿದಂತೆ 6 ಮಂದಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ನವೆಂಬರ್‌ 11 ರಂದು ಆದೇಶ ನೀಡಿತ್ತು.

Congress leader Priyanka Gandhi Vadra asked about killing of her father Rajiv Gandhi says Nalini Sriharan san
Author
First Published Nov 13, 2022, 8:41 PM IST

ನವದೆಹಲಿ (ನ.13):  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2008 ರಲ್ಲಿ ನನ್ನನ್ನು ಜೈಲಿನಲ್ಲಿ ಭೇಟಿಯಾದಾಗ ತಮ್ಮ ತಂದೆ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದರು ಎಂದು ಮಾಜಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಅಪರಾಧಿ ನಳಿನಿ ಶ್ರೀಹರನ್ ಭಾನುವಾರ ಹೇಳಿದ್ದಾರೆ. ಒಂದು ದಶಕದ ಹಿಂದೆ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ನಳಿನಿ ಶ್ರೀಹರನ್ ಅವರನ್ನು ಪ್ರಿಯಾಂಕಾ ಗಾಂಧಿ ಭೇಟಿಯಾಗಿದ್ದವು. ಈ ವೇಳೆ ಹತ್ಯೆ ವಿಚಾರದ ಚರ್ಚೆಯ ವೇಳೆ ಭಾವುಕರಾಗಿದ್ದು ಮಾತ್ರವಲ್ಲದೆ ಅತ್ತಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ. "ಪ್ರಿಯಾಂಕಾ ಗಾಂಧಿ ನನ್ನನ್ನು ಜೈಲಿನಲ್ಲಿ ಭೇಟಿಯಾಗಿದ್ದರು ಮತ್ತು ಅವರು ತಮ್ಮ ತಂದೆಯ ಹತ್ಯೆಯ ಬಗ್ಗೆ ಕೇಳಿದರು. ಅವರು ತಮ್ಮ ತಂದೆಯನ್ನು ನೆನಪಿಸಿಕೊಂಡು ಭಾವುಕರಾದರು. ಅವರು ಕೂಡ ಅಳುತ್ತಿದ್ದರು" ಎಂದು ಶ್ರೀಹರನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷದ ನಾಯಕಿಯಾಗಿರುವ ಪ್ರಿಯಾಂಕಾ ಗಾಂಧಿ ಅಂದು ತಮ್ಮ ತಂದೆಯ ಹತ್ಯೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಿದ್ದರು. ಆ ವೇಳೆ ನನಗೆ ಏನು ತಿಳಿದಿತ್ತೋ ಎಲ್ಲವನ್ನೂ ಅವರಿಗೆ ಹೇಳಿದ್ದೆ ಎಂದು ನಳಿನಿ ಬಹಿರಂಗಪಡಿಸಿದ್ದಾರೆ.

ಆ ಸಭೆಯಲ್ಲಿ ನಡೆದ ಇತರ ವಿಷಯಗಳು ಪ್ರಿಯಾಂಕಾ ಅವರ ವೈಯಕ್ತಿಕ. ಅದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನವೆಂಬರ್ 12 ರಂದು ನಳಿನಿ ಅವರನ್ನು ಬಿಡುಗಡೆ ಮಾಡಲಾಯಿತು. ನವೆಂಬರ್ 11 ರಂದು ಸುಪ್ರೀಂ ಕೋರ್ಟ್ ನಳಿನಿ ಮತ್ತು ರವಿಚಂದ್ರನ್ ಸೇರಿದಂತೆ ಉಳಿದ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.

ನಳಿನಿ ಮತ್ತು ರವಿಚಂದ್ರನ್ ಅವರು ಆಗಸ್ಟ್‌ನಲ್ಲಿ ಈ ಕುರಿತಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಮೇ 18 ರಂದು ಮತ್ತೊಬ್ಬ ಅಪರಾಧಿ ಎಜಿ ಪೆರಾರಿವಾಲನ್‌ಗೆ ಉನ್ನತ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ ನಂತರ ಈ ಆದೇಶ ಬಂದಿದೆ. ಕೆಟ್ಟ ಆರೋಗ್ಯ ಮತ್ತು ಉತ್ತಮ ನಡತೆಯ ಆಧಾರದ ಮೇಲೆ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ ತನ್ನ ಅಧಿಕಾರವನ್ನು ಪ್ರಯೋಗ ಮಾಡಿತ್ತು. ಪೆರಾರಿವಾಲನ್ ಬಿಡುಗಡೆಯಲ್ಲಿ ನ್ಯಾಯಾಲಯವು ಉಲ್ಲೇಖಿಸಿದ ತರ್ಕವನ್ನು ಈ ತೀರ್ಪು ಪ್ರತಿಬಿಂಬಿಸುತ್ತದೆ. ಎಲ್ಲಾ ಏಳು ಅಪರಾಧಿಗಳಾದ ಪೆರಾರಿವಾಲನ್, ನಳಿನಿ, ಮುರುಗನ್ ಅಲಿಯಾಸ್ ಶ್ರೀಹರನ್, ಸಂತನ್, ರವಿಚಂದ್ರನ್, ರಾಬರ್ಟ್ ಪಾಯಸ್ ಮತ್ತು ಎಸ್ ಜಯಕುಮಾರ್ ಅವರನ್ನು 1991 ರಲ್ಲಿ ಬಂಧಿಸಲಾಗಿತ್ತು.

ನನಗೆ ವಿಷಾದವಿದೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಳಿನಿ, ಅಂದಿನ ಬಾಂಬ್‌ ಬ್ಲಾಸ್ಟ್‌ನಲ್ಲಿ ಸಾವು ಕಂಡ ವ್ಯಕ್ತಿಗಳ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸಿದರು. "ನಾನು ಅವರ ಬಗ್ಗೆ ತುಂಬಾ ವಿಷಾದಿಸುತ್ತೇನೆ. ನಾವು ಅದರ ಬಗ್ಗೆ ಯೋಚಿಸುತ್ತಾ ಹಲವು ವರ್ಷಗಳನ್ನು ಕಳೆದಿದ್ದೇವೆ. ಈಗ ಕ್ಷಮಿಸಿ ಎಂದಷ್ಟೇ ಹೇಳಬಲ್ಲೆ" ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?

"ಅವರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಆ ದುರಂತದಿಂದ ಒಮ್ಮೆಯಾದರೂ, ಯಾವುದೇ ಸಮಯದಲ್ಲಿ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. ನಳಿನಿ ಶ್ರೀಹರನ್ ಅವರು 31 ವರ್ಷಗಳ ಜೈಲಿನಲ್ಲಿ ಕಳೆದ ನಂತರ ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಈ ಮಾತು ಹೇಳಿದ್ದಾರೆ. ತನ್ನ ಮಗಳನ್ನು ಭೇಟಿಯಾಗಲು ಮತ್ತು ಲಂಡನ್‌ನಲ್ಲಿ ನೆಲೆಸಲು ಯೋಜಿಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ ನಳಿನಿ ಶ್ರೀಹರನ್ , ಈ ಕುರಿತಾಗಿ ಪತಿಯೊಂದಿಗೆ ಮಾತನಾಡುವುದಾಗಿ ಹೇಳಿದರು.

ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಮೇ 1991 ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾಗ ರಾಜೀವ್ ಗಾಂಧಿಯವರು ಶ್ರೀಲಂಕಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ ಅಥವಾ ಎಲ್‌ಟಿಟಿಇಯ ಆತ್ಮಹತ್ಯಾ ಬಾಂಬರ್‌ನಿಂದ ಕೊಲ್ಲಲ್ಪಟ್ಟರು. ರಾಜೀವ್ ಗಾಂಧಿಯವರ ಹತ್ಯೆಯನ್ನು 1987 ರಲ್ಲಿ ಶ್ರೀಲಂಕಾಕ್ಕೆ ಭಾರತೀಯ ಶಾಂತಿಪಾಲಕರನ್ನು ಕಳುಹಿಸಿದ ಪ್ರತೀಕಾರದ ಕ್ರಮವಾಗಿ ನೋಡಲಾಗಿತ್ತು. 

Follow Us:
Download App:
  • android
  • ios