ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮ ಹೆಚ್ಚಾಗುತ್ತಿದ್ದಂತೆ ಭಾರತ ತಕ್ಕ ತಿರುಗೇಟು ನೀಡಿ, ಅಲ್ಲಿನ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದರ ಭಾಗವಾಗಿ ಇದೀಗ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19 ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶಕ್ಕೂ ಅದೇ ದಿನ ಭೇಟಿ ನೀಡಲಿದ್ದಾರೆ.
ನವದೆಹಲಿ(ನ.17) ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19 ರಂದು ಅರುಣಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಎರಡು ಭೇಟಿಗಳು ಅತ್ಯಂತ ಮಹತ್ವದ್ದಾಗಿದೆ. ಭಾರತದ ಗಡಿ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಭಾರಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಹೆಚ್ಚಳ ಮಾಡುತ್ತಿದೆ. ಇದೀಗ ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ಸುಸಜ್ಜಿತ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಬಳಿಕ 600 MW ಹೈಡ್ರೋ ಪ್ರಾಜೆಕ್ಟ್ ಉದ್ಘಾಟನೆ ಮಾಡಲಿದ್ದಾರೆ. ಇದಾದ ಬಳಿಕ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಲಿರುವ ಮೋದಿ, ಕಾಶಿ ತಮಿಳುಸಂಘಮ್ ಉದ್ಘಾಟನೆ ಮಾಡಲಿದ್ದಾರೆ.
ಈಶಾನ್ಯ ರಾಜ್ಯಗಳ ಸುಲಭ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಇಟಾನಗರದಲ್ಲಿ ನಿರ್ಮಾಣ ಮಾಡಲಾಗಿರುವ ಡೋನಿ ಪೊಲೊ ವಿಮಾನ ನಿಲ್ದಾಣ ನವೆಂಬ್ 19 ರಿಂದ ಕಾರ್ಯಾರಂಭಿಸಲಿದೆ. 690 ಏಕರೆ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇನ್ನು ಈ ನಿಲ್ದಾಣಕ್ಕೆ 640 ಕೋಟಿ ರೂಪಾಯಿ ಖರ್ಚಾಗಿದೆ. 2,300 ಮೀಟರ್ ರನ್ ವೇ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಈ ವಿಮಾನ ನಿಲ್ದಾಣ ಅತ್ಯುತ್ತಮ ವಿನ್ಯಾಸ ಹೊಂದಿದೆ.
G20 Summit ಯುದ್ಧದ ಸಮಯವಲ್ಲ,ಮೋದಿ ಮಾತು ಪುನರುಚ್ಚರಿಸಿದ ವಿಶ್ವ ನಾಯಕರು!
ಇಟಾನಗರದ ನೂತನ ವಿಮಾನ ನಿಲ್ದಾಣದಿಂದ ಅರುಣಾಚಲ ಪ್ರದೇಶದ ಸಾರಿಗೆ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಇದರ ಜೊತೆಗೆ ಅರುಣಾಚಲ ಪ್ರದೇಶ ವ್ಯವಹಾರಗಳು, ಆರ್ಥಿಕತೆಯೂ ಅಭಿವೃದ್ಧಿಯಾಗಲಿದೆ. ವಿಮಾ ನಿಲ್ದಾಣ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ 600 MW ಸಾಮರ್ಥ್ಯದ ಕೆಮಂಗ್ ಹೈಡ್ರೋ ಸ್ಟೇಶನ್ ಉದ್ಘಾಟನೆ ಮಾಡಲಿದ್ದಾರೆ. 8,450 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೈಡ್ರೋ ಪ್ರಾಜೆಕ್ಟ್ ನಿರ್ಮಾಣ ಮಾಡಲಾಗಿದೆ. ಈ ಹೈಡ್ರೋಪ್ರಾಜೆಕ್ಟ್‌ನಿಂದ ಅರುಣಾಚಲ ಪ್ರದೇಶ ಪವರ್ ಉತ್ಪಾದನೆಯಲ್ಲಿ ಇತರ ರಾಜ್ಯಗಳನ್ನು ಮೀರಿಸಲಿದೆ. ಇಷ್ಟೇ ಅಲ್ಲ ಈ ಹೈಡ್ರೋಪ್ರಾಜೆಕ್ಟ್‌ನಿಂದ ದೇಶದ ಗ್ರೀನ್ ಎನರ್ಜಿಯಲ್ಲಿ ಮತ್ತಷ್ಟು ಬಲ ಸಿಗಲಿದೆ.
ಬೆಳಗ್ಗೆ 9.30ರ ಹೊತ್ತಿಗೆ ಅರುಣಾಚಲ ಪ್ರದೇಶಕ್ಕೆ ಆಗಮಿಸಿರುವ ಮೋದಿ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಲಿಕ 2 ಗಂಟೆ ಹೊತ್ತಿಗೆ ವಾರಣಾಸಿಗೆ ಆಗಮಿಸಲಿದ್ದಾರೆ. ಏಕ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ಅಡಿಯಲ್ಲಿ ವಾರಣಾಸಿಯಲ್ಲಿ ಕಾಶಿ ತಮಿಳುಸಂಘಂ ಕಾರ್ಯಾರಂಭ ಮಾಡಲಿದೆ. ಕಾಶಿಯಲ್ಲಿನ ತಮಿಳು ಜನರ ಕಟ್ಟಿರುವ ಈ ಸಂಘವನ್ನು ಮೋದಿ ಉದ್ಘಾಟಿಸಲಿದ್ದಾರೆ.
ಸುಮಾರು 1 ತಿಂಗಳ ಕಾಲ ಕಾಶಿ ತಮಿಳುಸಂಘಂ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೋದಿ ಮಾಡಲಿದ್ದಾರೆ. ತಮಿಳು ನಾಡು ಹಾಗೂ ಕಾಶಿ ನಡುವಿನ ಹಳೆ ಗತವೈಭವ ಮರುಕಳಿಸಲಿದೆ. ದೇಶದ ಅತೀ ಹಳೆ ನಗರವಾಗಿರುವ ಕಾಶಿ ಜೊತೆ ತಮಿಳುನಾಡು ಹಿಂದಿನಿಂದಲೂ ನಂಟು ಹೊಂದಿದೆ. ಇದೀಗ ಕಾಶಿ ತಮಿಳುಸಂಘ ಉದ್ಘಾಟನೆಯೊಂದಿಗೆ ತಮಿಳುನಾಡು ಹಾಗೂ ಕಾಶಿ ನಡುವಿನ ಸಂಪರ್ಕ ಹಾಗೂ ಭಕ್ತರ ಸಂಚಾರ ಸುಗಮವಾಗಲಿದೆ.