
ನವದೆಹಲಿ: ಕೇಂದ್ರ ಸರ್ಕಾರ ಮಯನ್ಮಾರ್ ದೇಶದ ರೊಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಆಶ್ರಯ ಕೊಡುವ ನಿರ್ಧಾರ ಮಾಡಿದೆ. ದೆಹಲಿಯ ಬಕ್ಕರ್ವಾಲಾ ಪ್ರದೇಶದಲ್ಲಿ ಸೆಕ್ಯುರಿಟಿ ಸಮೇತ ಫ್ಲಾಟ್‌ಗಳನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದು, ಇದೊಂದು ಐತಿಹಾಸಿಕ ನಿರ್ಣಯ ಎಂದು ಕರೆದಿದ್ದಾರೆ. "ಭಾರತ ಯಾವಾಗಲೂ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದೆ. ಬೇರೆ ದೇಶಗಳಿಂದ ಆಶ್ರಯ ಅರಸಿ ಬಂದವರನ್ನು ಸ್ವಾಗತಿಸಿದೆ. ರೊಹಿಂಗ್ಯಾ ನಿರಾಶ್ರಿತರಿಗೆ ಫ್ಲಾಟ್ ಕೊಡಲು ನಿರ್ಧರಿಸಿದ್ದೇವೆ. ಇದೊಂದು ಐತಿಹಾಸಿಕ ನಿರ್ಣಯ," ಎಂದು ಸಚಿವ ಪುರಿ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಇಲಾಖೆ, ಆ ರೀತಿಯ ನಿರ್ಧಾರ ಮಾಡಿಲ್ಲ ಎಂದಿದೆ. ಈ ಮೂಲಕ ಹರ್ದೀಪ್ ಸಿಂಗ್ ಪುರಿಯವರಿಗೆ ಭಾರೀ ಮುಖಭಂಗವಾಗಿದೆ.
ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ಧಾರೆ. ಉದ್ದೇಶಪೂರ್ವಕವಾಗಿ ಸಿಎಎ ಮತ್ತು ನಿರಾಶ್ರಿತರ ಯೋಜನೆಯನ್ನು ಲಿಂಕ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ, ಎಂದವರು ಹೇಳಿದ್ದಾರೆ.
ರೊಹಿಂಗ್ಯಾಗಳಿಗೆ ದೇಶದ ರಾಜಧಾನಿಯಲ್ಲಿ ಆಶ್ರಯ ವ್ಯವಸ್ಥೆ ಕಲ್ಪಿಸುವ ಕುರಿತಾಗಿ ದೆಹಲಿ ಮುಖ್ಯ ಕಾರ್ಯದರ್ಶಿ, ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಸಚಿವಾಲಯ ಸಭೆ ನಡೆಸಿತ್ತು. ಸಭೆಯಲ್ಲಿ ಈ ತೀರ್ಮಾನ ಹೊರಬಂದಿದೆ. ಈ ಮೂಲಕ ದೇಶದ ವಿವಿಧೆಡೆ ಚದುರಿ ಹೋಗಿರುವ ರೊಹಿಂಗ್ಯಾಗಳಿಗೆ ದೆಹಲಿಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದರು.
ರೊಹಿಂಗ್ಯಾಗಳಿಂದ ದೇಶಕ್ಕೆ ಆಪತ್ತು ಎಂದಿದ್ದ ಗೃಹ ಸಚಿವಾಲಯ:
ಮಯನ್ಮಾರಿನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿತ್ತು.
ರೋಹಿಂಗ್ಯಾ ನಿರಾಶ್ರಿತರು ಪಾಕಿಸ್ತಾನದ ಐಸಿಎಸ್ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ. ಅವರು ಇಲ್ಲಿರುವುದು ಕೂಡಾ ಅಕ್ರಮ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಸರ್ಕಾರ ಈಗಾಗಲೇ ಗೌಪ್ಯ ವರದಿಯನ್ನು ತಯಾರಿಸಿಕೊಂಡಿದ್ದು, ಕೋರ್ಟ್ ಬಯಸಿದರೆ ಅದನ್ನು ಅ.03, 2018ರಂದು ಸಲ್ಲಿಸುತ್ತದೆ ಎಂದು ಸರ್ಕಾರ ತಿಳಿಸಿತ್ತು. ಫಾಲಿ ನಾರಿಮನ್ ಹಾಗೂ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ!
ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಅವಕಾಶ ಕೊಡದಿರಲು ಈ ಹಿಂದೆ ಕೇಂದ್ರ ನೀಡಿದ್ದ ಕಾರಣಗಳು:
ಇದನ್ನೂ ಓದಿ: ICJಯಲ್ಲಿ ರೋಹಿಂಗ್ಯಾ ನರಮೇಧ ವಿಚಾರಣೆ : ವಾದ ಮಂಡನೆಗೆ ಸೂಕಿ ಬದಲು ಸಮಿತಿ ರಚನೆ
ರೊಹಿಂಗ್ಯಾಗಳಿಗೆ ಆಶ್ರಯ ನೀಡುತ್ತಿಲ್ಲ. ಅವರನ್ನು ಕಾನೂನಾತ್ಮಕವಾಗಿ ಅವರ ದೇಶಕ್ಕೆ ಹಿಂತಿರುಗಿಸಲಾಗುವುದು. ಅಲ್ಲಿಯವರೆಗೂ ಅವರನ್ನು ಡಿಟೆನ್ಷನ್ ಸೆಂಟರ್‌ನಲ್ಲಿ ಇರಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ